ಎಚ್ಚರಿಕೆ ಕನ್ನಡ ನ್ಯೂಸ್ ವರದಿಯ ಫಲಶೃತಿ ಶಾಸಕರ ಸ್ಪಂಧನೆ: ಕಾಮಗಾರಿಗೆ ಅನುಮೋದನೆ…!!!

ಎಚ್ಚರಿಕೆ ಕನ್ನಡ ನ್ಯೂಸ್ ವರದಿಯ ಫಲಶೃತಿ ಶಾಸಕರ ಸ್ಪಂಧನೆ: ಕಾಮಗಾರಿಗೆ ಅನುಮೋದನೆ
-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ, ಶೌಚಾಲಯದ ಒಳಚರಂಡಿ ದುರಾವಸ್ಥೆಯ ಕುರಿತು ವರದಿ ಪ್ರಸಾರವಾಗಿದ್ದು.ಅದನ್ನು ಶಾಸಕರಾದ ಎನ್.ವೈ.ಗೋಪಾಲಕೃಷ್ಣ ರವರು ಪರಾಮರ್ಶಿಸಿ ಗಮನಿಸಿದ್ದು,
ವಸ್ಥು ಸ್ಥಿತಿಯನ್ನರಿತ ಅವರು ಕೂಡಲೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.ಈ ಮೂಲಕ ಅವರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪಿಸಿದ್ದಾರೆ.ಅದಕ್ಕಾಗಿ ತಮ್ಮ ಅನುದಾನದಲ್ಲಿ ನಾಲ್ಕು ಲಕ್ಷ ರೂ ವೆಚ್ಚದ ಯೋಜನೆ ರೂಪಿಸಿದ್ದು, ಇದನ್ನು ಶಾಸಕರ ಆಪ್ತ ಸಹಾಯಕ ಶ್ರೀಕಾಂತರವರು ಖಚಿತ ಪಡಿಸಿದ್ದಾರೆ. ತಮ್ಮ ಅನುದಾನದಿಂದ ಹಣ ಮಂಜೂರಾತಿಗೆ ಶಿಪಾರಸ್ಸು ಮಾಡಿದ್ದಾರೆ,ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಿದ್ದು ಕಾಮಗಾರಿ ಅತಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ,ಶಾಸಕರಾದ ಎನ್.ವೈ.ಗೋಪಾಲಕೃಷ್ಣ ರವರು ಹೆಚ್ಚು ಮುತುವರ್ಜಿವಹಿಸಿ ಸ್ಪಂಧಿಸಿದ್ದಾರೆ.ಅದಕ್ಕಾಗಿ ನಾಗರೀಕರು ಹಾಗೂ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅವರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend