ಪ್ರೀತಿ ಮಾಡುವುದಿಲ್ಲ ಎಂದ ಯುವತಿಗೆ ನೇಣು ಹಾಕಿ ಆತ್ಮಹತ್ಯೆ; ಎಂದು ಬಿಂಬಿಸಿದ ದುಷ್ಕರ್ಮಿಗಳು.!!

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಲಿಂಗನಹಳ್ಳಿಯಲ್ಲಿ ಜರುಗಿದೆ. ಓಬಳಶೆಟ್ಟಿ ಹಳ್ಳಿ ಶಿವಣ್ಣ ಹಾಗೂ ಪೆನ್ನಕ್ಕ ದಂಪತಿಯ ಪುತ್ರಿ ಶ್ವೇತಾ(16) ಬೊಮ್ಮಲಿಂಗನಹಳ್ಳಿಯ ಚಿಕ್ಕಮ್ಮನ ಮನೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನಾನು ಇನ್ನೂ 9ನೇ ತರಗತಿ ಓದುತ್ತಿದ್ದೇನೆ, ಯಾವುದೇ ಕಾರಣಕ್ಕೂ ನಿನ್ನ ಪ್ರೀತಿ ಮಾಡುವುದಿಲ್ಲ ಎಂದ ಯುವತಿಗೆ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ ದುಷ್ಕರ್ಮಿಗಳು ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಶಾಲೆಗೆ ಹೋಗುವ ಸಂದರ್ಭದಲ್ಲಿ ಬೊಮ್ಮಲಿಂಗನಹಳ್ಳಿ ನವೀನ್(20) ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದು ವಿದ್ಯಾರ್ಥಿನಿ ಶ್ವೇತಾ ಇದನ್ನು ತಿರಸ್ಕರಿಸಿದ್ದಾಳೆ. ನನ್ನ ಪ್ರೀತಿ ಒಪ್ಪಿ ಮದುವೆಯಾಗದಿದ್ದರೆ ನಿನ್ನನ್ನು ನೇಣು ಹಾಕಿ ಸಾಯುಸುತ್ತೇನೆಂದು ಆರೋಪಿ ಬೆದರಿಕೆ ಒಡ್ಡಿದ್ದು ಈ ವಿಷಯವನ್ನು ಪೋಷಕರಿಗೆ ಶ್ವೇತಾ ತಿಳಿಸಿದ್ದಳು. ಆದರೆ ಪೋಷಕರು ನೀನು ಚೆನ್ನಾಗಿ ಓದು ಎಂದು ಬೆನ್ನು ತಟ್ಟಿದ್ದರು. ಕೊನೆಗೆ ಮೇ.24 ರಂದು ಆರೋಪಿ ತಾನು ಹೇಳಿದಂತೆ ಗುಂಪು ಕಟ್ಟಿಕೊಂಡು ಬಂದು ಮೆನಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿ ಶ್ವೇತಾಳನ್ನು ನೇಣು ಹಾಕಿ ಸಾಯಿಸಿ ಆತ್ಮಹತ್ಯೆ ಎಂದು ಬಿಂಬಿಸಿ ಪರಾರಿಯಾಗಿದ್ದಾನೆ. ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend