ತಾಲ್ಲೂಕಿನ ಕಮಂಡಲಗೊಂದಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಬೆಳ್ಳಿಯ ಉತ್ಸವ ಮೂರ್ತಿಯು ತಡರಾತ್ರಿ ಕಿಡಿಗೆಡಿಗಳು ಕಳ್ಳತನ ಮಾಡಿದ್ದು ಪ್ರಕರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೌದು ಆಂಜನೇಯ ದೇವಸ್ಥಾನದಲ್ಲಿ ಎಂದಿನಂತೆ ಪೂಜಾರಿಯು ಬೆಳಗ್ಗೆ ಐದು ಗಂಟೆಗೆ ದೇವಸ್ಥಾನದ ಬಾಗಿಲು ತೆರದಾಗ ಈ ಘಟನೆ ನೆಡದಿರುವುದು ತಿಳಿದಿದ್ದು, ಪೂಜಾರಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಕಿಡಿಗೇಡಿಗಳು ದೇವಸ್ಥಾನದ ಗರ್ಭಗುಡಿಯ ಬೀಗವನ್ನು ಮುರಿದು 5 ಕಜೆಯ ಬೆಳ್ಳಿಯ ಉತ್ಸವ ಮೂರ್ತಿ, 8 ಗ್ರಾಂ. ಬಂಗರಾದ ಕಣ್ಣು, ಸಿ.ಸಿ ಕ್ಯಾಮರ, ಡಿವಿಆರ್, ಟಿ.ವಿ, ಕಳ್ಳತನವಾಗಿದ್ದು ದೇವಸ್ಥಾನದ ಆಡಳಿತ ಸಮಿತಿಯು ಪ್ರಕರಣ ದಾಖಲು ಮಾಡಿದ್ದು, ಸ್ಥಳಕ್ಕೆ ಜಿಲ್ಲೆಯ ಶ್ವಾನದಳದಿಂದ ಪರೀಶಿಲನೆ ಮಾಡಲಾಯಿತು.
ಈ ದೇವಸ್ಥಾನದಲ್ಲಿ ಮೂರು ವರ್ಷದ ಹಿಂದೆ ಇದೇ ರೀತಿ ದೇವಸ್ಥಾನದ ಹುಂಡಿ ಕಳ್ಳತನವಾಗಿತ್ತು ಆದರೆ ಕಳ್ಳತನ ಮಾಡಿರುವರನ್ನು ಪೊಲೀಸ್ ಇಲಾಖೆ ಬೇದಿಸಲಿಲ್ಲ ಆದರೆ ಇದೀಗಾ ಉತ್ಸವ ಮೂರ್ತಿಯನ್ನೆ ಕದಿಮರು ಕಳ್ಳತನ ಮಾಡಿದ್ದಾರೆ. ಇದನ್ನಾದರೂ ಪೊಲೀಸ ಇಲಾಖೆ ತನಿಖೆ ಮಾಡಿ, ತಪಿತಸ್ಥರನ್ನು ಹಿಡಿದು ಶಿಕ್ಷಿಸಿ, ಉತ್ಸವ ಮೂರ್ತಿಯನ್ನು ಪುನಃ ದೇವಸ್ಥಾನ ಸೇರಿಸಬೇಕು ಎಂದು ಗ್ರಾಮಸ್ಥರು ಕೇಳಿಕೊಂಡರು.
ವರದಿ. ಸಂದೀಪ್ ಜಗಳೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
