;

ಸರಿಗಮಪ ಖ್ಯಾತಿಯ ಗಾಯಕ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸುಬ್ರಮಣಿ ಪತ್ನಿ ಕೊರೊನಾಗೆ ಬಲಿ…!!!

ಸರಿಗಮಪ ಖ್ಯಾತಿಯ ಗಾಯಕ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸುಬ್ರಮಣಿ ಪತ್ನಿ ಕೊರೊನಾಗೆ ಬಲಿ.

ಬೆಂಗಳೂರು : ಸರಿಗಮಪ ಶೋ ಮೂಲಕ ಖ್ಯಾತಿಯಾಗಿದ್ದ ಪೊಲೀಸ್ ಸಿಂಗರ್ ಸುಬ್ರಮಣಿ ಪತ್ನಿ ಕೋವಿಡ್ ೧೯ ಗೆ ಅಸುನೀಗಿದ್ದಾರೆ.ಕಳೆದ ಒಂದು ವಾರದ ಹಿಂದೆ ಸುಬ್ರಮಣಿ ಪತ್ನಿಯವರಿಗೆ ಪಾಸಿಟಿವ್ ಪತ್ತೆಯಾಗಿತ್ತು..ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಆಗಿತ್ತು..ವೆಂಟಿಲೇಟರ್ ಬೆಡ್ ಸಿಗದೆ ಪರದಾಡಿದ್ದ ಸಿಂಗರ್ ಸುಬ್ರಮಣಿ..ಬೆಂಗಳೂರಿನ ಯಾವ ಆಸ್ಪತ್ರೆಯಲ್ಲೂ ವೆಂಟಿ ಲೇಟರ್ ಬೆಡ್ ಸಿಗಲಿಲ್ಲ..ಕೊನೆಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಲಾಗಿತ್ತು..ಚಿಕಿತ್ಸೆ ಫಲಿಸದೆ ಇಂದು ಸಂಜೆ ಸಾವನ್ನಪ್ಪಿದ್ದಾರೆ.. ಪೊಲೀಸರೇ ತಮ್ಮ ಹೆಂಡ್ತಿ ಮಕ್ಕಳನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿಯಾದ್ರೆ ಸಾಮಾನ್ಯ ಜನರ ಸ್ಥಿತಿ ಹೇಗೆ ಆಗಬೇಡ ಎಂಬ ಪ್ರಶ್ನೆ ಮೂಡಿದೆ. ಸುಬ್ರಮಣಿ ಪತ್ನಿ ಸಾವಿಗೆ ಹಿರಿಯ ಅಧಿಕಾರಿಗಳು ಹಾಗೂ ಸುಬ್ರಮಣಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ಪುರಂ ಠಾಣೆ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ..ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಪೊಲೀಸ್ ಕುಟುಂಬಗಳಲ್ಲಿ ಪ್ರತಿನಿತ್ಯ ಸಾವು ನೋಡುವಂತಾಗಿದೆ. ಸುಬ್ರಮಣಿ ಉತ್ತಮ ಗಾಯಕರಾಗಿದ್ದು,ಅನೇಕ ಹಾಡುಗಳನ್ನು ಹಾಡಿದ್ದಾರೆ. ಖಾಸಗಿ ವಾಹಿನಿಯ ಸರಿಗಮಪ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ರು .ದೇವರು ಸುಬ್ರಮಣಿ ಅವರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣಾ..

ವರದಿ. ಮಂಜುನಾಥ್, ಎನ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;