;

ಮಲ್ಲಾಪುರು ಗ್ರಾಮವನ್ನು ಮಾದರಿ ಗ್ರಾಮ ಮಾಡಲು ಪಣತೊಟ್ಟ ಯುವಕರು.

ಸಿಂಧನೂರು : ಮಲ್ಲಾಪುರು ಗ್ರಾಮವನ್ನು ಮಾದರಿ ಗ್ರಾಮ ಮಾಡಲು ಪಣತೊಟ್ಟ ಯುವಕರು. ಕೊರೋನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಫ್ಯೂ ಪಾಲನೆ ಮಾಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಮಲ್ಲಾಪುರು ಗ್ರಾಮವನ್ನು ಮಾದರಿ ಗ್ರಾಮ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಳೆದ 12 ದಿನಗಳಿಂದ ಸತತವಾಗಿ ವಿವಿಧ ಹುದ್ದೆಯಲ್ಲಿದ್ದಯುವಕರು, ಸಂಘ ಸಂಸ್ಥೆಯಲ್ಲಿರುವ ಯುವಕರು, ಬುದ್ಧಿಜೀವಿಗಳು, ಪರಿಸರ ಪ್ರೇಮಿಗಳು, ಊರಿನ ಯುವಕರ ತಂಡವು ಗ್ರಾಮದ ರಸ್ತೆ ಬದಿಯಲ್ಲಿನ ಗಿಡಗಳ ಸುತ್ತ ಸ್ವಚ್ಛತೆ ಮಾಡಿ ನೀರುಣಿಸುವ ಕಾಯಕದಲ್ಲಿ ತೊಡಗಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಪಾಳು ಬಿದ್ದ ನೀರಿನ ತೊಟ್ಟಿಯನ್ನು ಸ್ವಚ್ಛತೆ ಮಾಡಿ ಅದಕ್ಕೆ ಸ್ವತ್ತ ಖರ್ಚಿನಲ್ಲಿ ಸುಣ್ಣ ಬಳಿದು ಟ್ಯಾಂಕರ್ ಮೂಲಕ ನೀರು ತುಂಬಿಸಿ ಜಾನುವಾರುಗಳಿಗೆ, ಪ್ರಾಣಿ-ಪಕ್ಷಿಗಳ, ಬಾಯಾರಿಕೆ ತಣಿಸಲು ಅನುಕೂಲವಾಗಿದೆ. ಗ್ರಾಮದ ಸರಕಾರಿ ಶಾಲೆಯಲ್ಲಿನ ಆವರಣದ ಸುತ್ತಲೂ ಬಿದ್ದಿರುವ ಘನತ್ಯಾಜ್ಯವನ್ನು ಸ್ವಚ್ಛತೆ ಮಾಡಿ ಶಾಲೆಯ ಕಾಂಪೌಂಡಿನಲ್ಲಿ ಬೆಳೆದ ಗಿಡಗಳ ಸುತ್ತ ಸ್ವಚ್ಛತೆ ಮಾಡಿ ನೀರು ಉಣಿಸಲಾಗಿದೆ. ಈ ಕಾಯಕದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರು ಎಲ್. ಬಿ.ಕೆ ಕಾಲೇಜಿನ ಅಧ್ಯಕ್ಷರಾದ ಪರಶುರಾಮ, ಉಪನ್ಯಾಸಕರಾದ ಬಸವರಾಜ ನಿಟ್ಟೂರು, ದುಗ್ಗಪ್ಪ ಮಲ್ಲಾಪುರ ಆನಂದ್ ಮಾಸ್ಟರ್, ದೇವರೆಡ್ಡಿ ಕೆಸರಟ್ಟಿ ,ಎಲ್ಐಸಿ ಅಧಿಕಾರಿಯ ಮಂಜುನಾಥ್, ಬ್ಯಾಂಕ್ ಉದ್ಯೋಗಿ ವೆಂಕೊಬರೆಡ್ಡಿ, ಶರಣಪ್ಪ ನಾಯಕ್, ವೀರೇಶ್ ಕೆ ಮಂಜುನಾಥ್ ಇನ್ನೂ ಅನೇಕ ಯುವಕರು ಗ್ರಾಮದ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ.

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;