*ಲಾರಿ ಕಾರ್ ನಡುವೆ ಭೀಕರ ರಸ್ತೆ ಅಪಘಾತ
ವರದಿ. ವೀರೇಶ್ ಬಳ್ಳಾರಿ*
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪೋಲೀಸ ಠಾಣೆಯ ವ್ಯಾಪಿಯಲ್ಲಿ ಬರುವ ತೆಕ್ಕಲಕೋಟೆ ಮತ್ತು ಹಳೇಕೋಟೆ ಮಾರ್ಗ ಮದ್ಯೆ ಮಂಗಳವಾರ ರಾತ್ರಿ ಸುಮಾರು 11.30 ಕ್ಕೆ ಲಾರಿ ಮತ್ತು ಕಾರ್ ನಡುವೆ ಭೀಕರ ಅಪಘಾತವಾಗಿದೆ.ಕಾರಿನ ಡ್ರೈವರ್ ಸೇರಿ ನಾಲ್ಕು ಜನ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕಲುಬುರಗಿ ನಿವಾಸಿಗಳಾದ.ಬಸವರಾಜ (ಸೆಲ್ಸ್ ಟ್ಯಾಕ್ಸಿ ಅಫಿಸರ್ ಬಳ್ಳಾರಿ). ಭೀಮರಾವು (ಎಂ ಬಿ ಬಿ ಎಸ್ ವಿಧ್ಯಾರ್ಥಿ) ಸುನಿಲ್ (ಇಂಜಿನಿಯರ) ರೇವಣ್ಣ ಸಿದ್ದ (ಡೈವರ್)ಕರೋನದಿಂದ 14 ದಿನ ಲಾಕಡೌನ ಅದರಿಂದ್ದ ಕಲುಬುರಗಿ ಹೋಗುತ್ತಿದರು ಈ ಸಂದರ್ಭದಲ್ಲಿ ಸಿರುಗುಪ್ಪ ಕಡೆಯಿಂದ ಬರುತ್ತಿದ್ದ ಲಾರಿ ಬಳ್ಳಾರಿಯಿಂದ ಬರುತ್ತಿದ್ದ ಕಾರ್ ನಡುವೆ ಡಿಕ್ಕಿಯಾದ ರಭಸಕ್ಕೆ ನಾಲ್ಕು ಜನ ಸಾವನ್ನಪ್ಪಿದ್ದಾರೆ. ವಿದಿ ಎಂಥ ಕ್ರೂರಿ ಅಲ್ವಾ. ತಂದೆ ಬಸವರಾಜ ಮಗ ಭೀಮರಾವುನ ಬಲಿ ಪಡೆದುಕೊಂಡಿದೆ.ಲಾರಿ ಡೈವರ್ ಓಡಿ ಹೋಗಿದಾನೆ ತೆಕ್ಕಲಕೋಟೆ ಪೋಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
