*🪔ನಿಧನ ವಾರ್ತೆ-ಜಗದೀಶ ಅಂಚೆ ನೌಕರ (ಗುಡೇಕೋಟೆ)*
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಅಂಚೆನೌಕರರಾಗಿದ್ದ,ಜಗದೀಶ(45),ಕೊರೊನಕ್ಕೆ ಮಹಾಮಾರಿಗೆ ಬಲಿಯಾಗಿದ್ದಾರೆ. ಮೂಲತಃ ಚುತ್ರದುರ್ಗ ಮೂಲದವರಾಗಿದ್ದು,ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿದ್ದರು.
ಶುಕ್ರವಾರ ಕಾರ್ಯನಿರ್ವಹಿಸಿದ್ದ ಅವರು ಶನಿವಾರದಂದು ಅವರಿಗೆ ಸ್ವಲ್ಪ ಮಟ್ಟಿಗೆ ಜ್ವರ ಕಾಣಿಸಿಕೊಂಡಿದ್ದು,ಕಾರಣ ತಮ್ಮ ಮೂಲತಃ ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಇಂದು ಮದ್ಯಾಹ್ನ ವರದಿ ಕೊರೋನಾ ಪಾಸಿಟಿವ್ ಎಂದು ಬಂದ ನಂತರ ಹೃದಯಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.
ಮಾಜಿ ಸೈನಿಕರಾಗಿದ್ದ ಇವರು,ತಾಯಿ,ಪತ್ನಿ,ಒಬ್ಬ ಪುತ್ರಿ,ಒಬ್ಬ ಪುತ್ರ.ಹಾಗೂ ಅಪಾರ ಬಂದು ಬಳಗ ಅಗಲಿದ್ದಾರೆ.ಅವರ ಅಂತ್ಯ ಕ್ರಿಯೆ ಚಿತ್ರದುರ್ಗ ಜಿಲ್ಲೆಯ ಅವರ ಸ್ವಗ್ರಾಮದಲ್ಲಿಯೇ ಜರುಗಲಿದೆ.
ಜಗದೀಶರವರು ಈ ಹಿಂದೆ ಕೂಡ್ಲಿಗಿ ಅಂಚೆ ಕಚೇರಿಯಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು,
ಅವರ ಅಗಲಿಕೆ ತಿಳಿದು ಕೂಡ್ಲಿಗಿ ತಾಲೂಕಿನ ಅಂಚೆ ಇಲಾಖೆಯ ಸಿಬ್ಬಂದಿ ವರ್ಗದವರು ತೀವ್ರ ವಿಷಾದ ವ್ಯಕ್ತ ಪಡಿಸಿದ್ದು,ಕೂಡ್ಲಿಗಿ ಗುಡೇಕೋಟೆ ಸೇರಿದಂತೆ ತಾಲೂಕಿನ ಬಹುತೇಕ ಅಂಚೆ ಕಚೇರಿ ಸಿಬ್ಬಂದಿ ಜಗದೀಶ ರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ…!!!
ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
