ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು (ಏ.21) ಪಟ್ಟಣದ 1ನೇ ವಾರ್ಡಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾಂಪೌಂಡ್ ಕಳಪೆಯಾಗಿ ನಿರ್ಮಾಣ ಮಾಡಲಾಗಿದೆ. ಎಂದು ಗುತ್ತಿಗೆದಾರ ರಾಮು ಎಂಬುವರು ಆರೋಪಿಸಿದರು. 2020-21 ನೇ ಸಾಲಿನಲ್ಲಿ ಪಟ್ಟಣ ಪಂಚಾಯಿತಿಯಿಂದ ಕಾಂಪೌಂಡ್ ನಿರ್ಮಾಣ ಕಾಮಗಾರಿಯ ಟೆಂಡರ್ 14 ಲಕ್ಷ ಮೊತ್ತಕ್ಕೆ ಆಗಿದ್ದು, ಇದನ್ನು ಗುತ್ತಿಗೆದಾರ ಕೆ.ಎಂ.ಶಿವಮೂರ್ತಿ ಇವರಿಗೆ ನೀಡಲಾಗಿದೆ. ಬುನಾದಿಯಲ್ಲಿ ಕಾಲಮ್ ಪಿಲ್ಲರ್ ತಳಭಾಗದಲ್ಲಿ ಕಂಬಿ ಅಂದರೆ ಮೈಟ್ ಹಾಕಿರುವುದಿಲ್ಲ, ತಳ ಭಾಗದಲ್ಲಿ 3 ರಿಂದ 4 ಇಂಚು ಕಾಂಕ್ರಿಟ್ ಹಾಕಿ ಮುಚ್ಚಿರುತ್ತಾರೆ. ಪಿಲ್ಲರ್ ಮೇಲಿನ ಭಾಗದಲ್ಲಿ 1 ಅಡಿಯಷ್ಟು ಇಟ್ಟಿಗೆಗಳಿಂದ ಪ್ಲಾಸ್ಟಿಂಗ್ ಮಾಡಿರುತ್ತಾರೆ. ಈ ರೀತಿ ಕಳಪೆ ಕಾಮಗಾರಿಯನ್ನು ಸರ್ಕಾರಿ ರಜೆ ಹಾಗೂ ಇಂಜಿನೀಯರ್ ಮತ್ತು ಅಧಿಕಾರಿಗಳು ಇಲ್ಲದ ಸಮಯದಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಿ ಇತ್ತ ಕಡೆ ಸರ್ಕಾರಕ್ಕೂ ಮತ್ತು ಸಾರ್ವಜನಕರಿಗೆ ಮೋಸ ಮಾಡಿದ್ದಾರೆ. ಇತರ ಕಳಪೆ ಕಾಮಗಾರಿ ಮಾಡಿರುವುದನ್ನು ವಿರೋಧಿಸಿ ಇವರಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಮುಖ್ಯ ಅಧಿಕಾರಿ ಕಾಂತರಾಜ್ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಮಹಾಂತೇಶ್, ಆನಂದ್, ಶಿವಮೂರ್ತಿ, ಗೋವಿಂದಪ್ಪ, ಮತ್ತಿತರರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
