;

ದೇವರ ದಾಸಿಮಯ್ಯ ಸಾಮಾಜಿಕ ಕಳಕಳಿಯ ಕಾಯಕಯೋಗಿ…!!!

 

ದೇವರ ದಾಸಿಮಯ್ಯ ಸಾಮಾಜಿಕ ಕಳಕಳಿಯ ಕಾಯಕಯೋಗಿ

 

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಹೊಸಹಳ್ಳಿ ಯಲ್ಲಿ. ಶನಿವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿಅಂಗವಾಗಿ ದೇವರ ದಾಸಿಮಯ್ಯ ವೃತ್ತದ ಬಳಿ ಆದ್ಯ ವಚನಕಾರ ದೇವರ ದಾಸಿಮಯ್ಯ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ.

ಕೇ.ಟಿ.ಮಲ್ಲೇಶ್ ಮಾತನಾಡಿ ಸಾಮಾಜಿಕ ಕಳಕಳಿಯಿಂದ ಯಾವ ರೀತಿ ಜೀವನ ನಡೆಸಬೇಕು ಎಂದು ಆದ್ಯ ವಚನಕಾರ ದೇವರ ದಾಸಿಮಯ್ಯ ತಿಳಿಸಿಕೊಟ್ಟಿದ್ದಾರೆ.
ಕಾಯಕನಿಷ್ಠೆ ಉಳ್ಳವರಾಗಿದ್ದು ದೇವರ ದಾಸಿಮಯ್ಯ ಅವರು ಕಾಯಕದಿಂದ ಬದುಕು ಸಾಗಿಸಬೇಕು ಎಂಬುದನ್ನು ತಿಳಿಸಿ ಕೊಟ್ಟಿದ್ದಾರೆ. ದೇವರ ದಾಸಿಮಯ್ಯ ಅವರು ಆದ್ಯ ವಚನಕಾರ ರಾಗಿದ್ದು ಬಸವಣ್ಣನವರಿಗಿಂತ ಪೂರ್ವದ ವಚನಕಾರರಾಗಿದ್ದಾರೆ ಎಂದು ನುಡಿದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವನಾಥ್ ಕೆ.ಎಸ್. ಮಾತನಾಡಿ
ಕಾಯಕ ವೃತ್ತಿ ಹಾಗೂ ಕಾಯಕನಿಷ್ಠೆಯನ್ನು ತಮ್ಮ ವಚನಗಳ ಮೂಲಕ ಸಾರಿದ್ದಾರೆ.ತಮ್ಮ ಕಾಯಕದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದರೆ ದೇವರನ್ನು ಕಾಣಬಹುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಸಿ.ಚೇತನ್ ಮಾತನಾಡಿ. ಬಂಡಿಗೆ ಕೇಳಿ ಎಷ್ಟು ಮುಖ್ಯವೋ ಜೀವನಕ್ಕೂ ವಚನಗಳು ಅಷ್ಟೇ ಮುಖ್ಯವಾಗಿ ವೆ. ಸಮಾಜಕ್ಕೆ ಆದರ್ಶ ಸಿದ್ಧಾಂತ ಅಡಿಪಾಯವನ್ನು ಹಾಕಿಕೊಟ್ಟ ವಚನಕಾರರನ್ನು ಸ್ಮರಿಸಿದರು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಮುದ್ದಪ್ಪ ತಿಪ್ಪೇಸ್ವಾಮಿ, ಏಜಿ ಮಹದೇವಪ್ಪ. ತಿಪ್ಪೇರುದ್ರಪ್ಪ, ಸಿಬಿ ನಾಗೇಶ್, ಎ ರಾಮದಾಸ್, ಕೊಟ್ರೇಶ, ರಾಜಣ್ಣ ಟೈಲರ್, ನಾಗರಾಜ, ಮಂಜುನಾಥ,ಸುನಿಲ್, ತಿಪ್ಪೇಶಿ, ಮಹಾಂತೇಶ. ಬಸವರಾಜ ಎ. ಟಿ. ಬಾಲಾಜಿ ಯು.ಎನ್. ಮಾರುತಿ, ಮುಂತಾದವರು. ಪ್ರಮುಖರು ಉಪಸ್ಥಿತರಿದ್ದರು…

ಕೆ ಎಸ್ ವೀರೇಶ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;