;

ನಿಯಂತ್ರಣ ತಪ್ಪಿದ ಕರೊನಾ..? ಚಿತಾಗಾರದ ಮುಂದೆ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೂ ಹಚ್ಚಬೇಕು ಕ್ಯೂ..!

ವರದಿ. ನಳಿನಿ ಬೆಂಗಳೂರು

ಕರೊನಾ ಇಲ್ಲ ನನಗೇನು ಆಗಲ್ಲ ಅಂತ ಮನೆಬಿಟ್ಟು ಎಲ್ಲೆಂದರಲ್ಲಿ ತಿರುಗಾಡ ಬೇಡಿ, ದೇಶದಾದ್ಯಂತ ಕರೊನಾ ಹೆಚ್ಚುತ್ತಿರುವುದನ್ನು ನೋಡಿದ್ರೆ ಪರಿಸ್ಥಿತಿ ಕೈ ಮೀರಿ ಹೊಗಿರುವಂತರ ಕಾಣುತ್ತದೆ, ಯಾಕೆ ಅಂದ್ರೆ, ಹೆಣಗಳ ಅಂತ್ಯಸಂಸ್ಕಾರ ಮಾಡಲು ಸಹ ನಂಬರ್ ಹಚ್ಚುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.

ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆ ಕಂಡಿದೆ. ಕಳೆದ 24 ಗಂಟೆಯೊಳಗೆ 80 ಸೋಂಕಿತರು ಸಾವನ್ನಪ್ಪಿದ್ದಾರೆ. ಇದಲರಲ್ಲಿ ಆತಂಕದ ವಿಷಯ ಎಂದರೇ ರಾಜ್ಯ ರಾಜಧಾನಿಯಲ್ಲಿ 11 ಸಾವಿರ ಕೋವಿಡ್​ ಪ್ರಕರಣ ದಾಖಲಾಗಿದ್ದು, 43 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ ಚಿತಾಗಾರದ ಮುಂದೆ ಸೋಂಕಿತರ ಅಂತ್ಯಕ್ರಿಯೆಗೆ ಆಂಬುಲನ್ಸ್​ಗಳು ಸಾಲುಗಟ್ಟಿರುವ ದೃಶ್ಯಗಳು ಕೂಡ ಕಂಡು ಬಂದಿದೆ.

ಬೆಂಗಳೂರಿನಲ್ಲಿ ಕೊರೊನಾ ಕೇಸ್​ ಹೆಚ್ಚಳವಾಗುತ್ತಿರುವ ಹಿನ್ನಲೆ ಸಚಿವರುಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಸೋಂಕು ನಿಯಂತ್ರಣದ ಹಿನ್ನೆಲೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರುವ ಕುರಿತು ಕಂದಾಯ ಸಚಿವ ಆರ್​ ಅಶೋಕ್​ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಏ. 19ರ ಸೋಮವಾರ ಬೆಂಗಳೂರಿನ ಶಾಸಕರು, ಸಂಸದರು, ಸಚಿವರು, ರಾಜ್ಯಸಭಾ ಸದಸ್ಯರ ತುರ್ತು ಸಭೆ ಕರೆಯಲಾಗಿದೆ. ಸಿಎಂ ನಿರ್ದೇಶನ ಹಿನ್ನೆಲೆ ಜನಪ್ರತಿನಿಧಿಗಳ ಸಭೆ ಕರೆಯಲಾಗಿದ್ದು, ಕರೊನಾ ನಿಯಂತ್ರಣ, ನಿರ್ವಹಣೆ, ಆಸ್ಪತ್ರೆ ಬೆಡ್ ಕೊರತೆ, ಆಂಬುಲೆನ್ಸ್ ಸಮಸ್ಯೆ, ವ್ಯಾಕ್ಸಿನೇಷನ್ ಬಗ್ಗೆ ಜನ ಪ್ರತಿನಿಧಿಗಳು ಚರ್ಚೆ ನಡೆಸಲಿದ್ದಾರೆ.

ಬೆಂಗಳೂರು ಹೊರತುಪಡಿಸಿ, ಉಳಿದ ಜಿಲ್ಲೆಗಳಿಗೆ ಇಂದು ಕಠಿಣ ನಿಯಮ ಜಾರಿ ಮಾಡಲಾಗಿದೆ. ಜನರು ಗುಂಪು ಸೇರದ ರೀತಿ ಕ್ರಮ ವಹಿಸಲು ಡಿಸಿಗಳಿಗೆ ಜವಬ್ದಾರಿ ನೀಡಲಾಗಿದೆ. ಈಗಿರುವ ಸೋಂಕಿನ ಪ್ರಮಾಣಕ್ಕಿಂತ ಮತ್ತೆ ಸೋಂಕು ಹೆಚ್ಚಾಗಬಾರದು. ಈ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಖಡಕ್ ಸೂಚನೆ ನೀಡಲಾಗಿದೆ. ಪರಿಸ್ಥಿತಿ ನಿರ್ವಹಣೆಗೆ ಕೊವೀಡ್ ನಿರ್ವಹಣೆಗೆ ಎಷ್ಟು ಹಣ ಬೇಕಾದರೂ ಬಿಡುಗಡೆ ಮಾಡ್ತೀವಿ. ಆದರೆ ಯಾವುದೇ ಕಾರಣಕ್ಕೂ ಸಮಸ್ಯೆ ಅಂತೂ ಆಗಬಾರದು ಎಂದು ಸಚಿವರುಗಳು ಸೂಚಿಸಿದ್ದಾರೆ. ಅಲ್ಲದೇ ವೈದ್ಯಕೀಯ ಸೌಲಭ್ಯ ಕೊರೆಯಾಗದಂತೆ ಬೆಡ್ ಸೇರಿದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend