ವರದಿ. ಮಂಜುನಾಥ್. ಎಚ್

ಚಿತ್ರದುರ್ಗ: ಮೊಳಕಾಲ್ಮೂರು/ * ಸಂಗೀತವು ಮನುಷ್ಯನಲ್ಲಿನ ಒತ್ತಡವನ್ನು ನಿವಾರಣೆ ಮಾಡುವ ಜತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಓ.ಮುರಾರ್ಜಿ ತಿಳಿಸಿದರು. * ತಾಲ್ಲೂಕಿನ ಕೊಂಡ್ಲಹಳ್ಳಿ ಗ್ರಾಮದಲ್ಲಿ ಅಕ್ಷರ ಸಾಂಸ್ಕೃತಿಕ ವಿಕಾಸ ಸಂಸ್ಥೆ, ಮೊಳಕಾಲ್ಮೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಒತ್ತಡದ ಜೀವನದಲ್ಲಿ ಬದುಕುತ್ತಿದ್ದೇವೆ ಒತ್ತಡ ಮುಕ್ತ ಜೀವನಕ್ಕಾಗಿ ಸಾಹಿತ್ಯ ಸಂಗೀತ ನೃತ್ಯದಂತಹ ಅಭಿರುಚಿ ಹೊಂದಿದ್ದರೆ ಎಂತಹ ಕ್ಲಿಷ್ಟ ಸಮಸ್ಯೆಗಳನ್ನು ಎದುರಿಸಬಹುದು ಎಂದರು. ಉಪನ್ಯಾಸಕ ಡಾ.ತಿಮ್ಮಣ್ಣ ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕøತಿ ಉಳಿವಿಗೆ ಪ್ರತಿಯೊಬ್ಬರೂ ಕೆಲಸ ಮಾಡಬೇಕಿದೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಂಗೀತ ಸಂಭ್ರಮದ ಮೂಲಕ ಕಾರ್ಯೋನ್ಮುಖವಾಗಿರುವುದು ಸಂತಸದ ಸಂಗತಿ ಎಂದು ತಿಳಿಸಿದರು. ಪಿಡಿಒ ದೇವೇಂದ್ರಪ್ಪ ಮಾತನಾಡಿ, ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆ ಅಳಿವಿನಂಚಿಗೆ ಸಾಗುತ್ತಿದೆ ಆಂಗ್ಲ ಭಾಷೆ ವ್ಯಾಮೋಹಕ್ಕೆ ಒಳಗಾಗಿ ಮಾತೃಭಾಷೆಯನ್ನು ಮರೆಯಬಾರದು ಎಂದರು. ಕಲಾವಿದರಾದ ಕೆ.ಓ.ಶಿವಣ್ಣ ತುಮಕೂರ್ಲಹಳ್ಳಿ, ಕೋನಸಾಗರ ಶಿವು, ಭಟ್ರಹಳ್ಳಿ ಧನಂಜಯ, ಎಂ.ನುಂಕೇಶ್, ರಾಜು ದೇವಸಮುದ್ರ ಸಂಗೀತ ಸಂಭ್ರಮ ನಡೆಸಿಕೊಟ್ಟರು. ಗ್ರಾ.ಪಂ ಸದಸ್ಯರಾದ ಆಟೋ ತಿಪ್ಪೇಸ್ವಾಮಿ, ನಿಂಗಪ್ಪ, ಕುಬೇರಪ್ಪ, ಶಿಕ್ಷಕರಾದ ಈಶ್ವರಪ್ಪ, ತಿಪ್ಪೇಸ್ವಾಮಿ, ಬಿಜಿಕೆರೆ ಮಂಜಣ್ಣ ಮುಖಂಡರಾದ ಮೊಗಲಹಳ್ಳಿ ತಿಪ್ಪೇಸ್ವಾಮಿ, ಕೊಂಡ್ಲಹಳ್ಳಿ ಮಲ್ಲೇಶ್, ಪುರುಷೋತ್ತಮ, ಅರುಣ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
