;

ತಾಯಕನಹಳ್ಳಿ: ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣವು ಅಗತ್ಯವಿದೆ: ತಾ.ಪಂ ಸದಸ್ಯರು ಪಾಪನಾಯಕ..!

ವರದಿ. ಮಂಜುನಾಥ್. ಎಚ್

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದ ಕನಕದಾಸ ವೃತ್ತದಲ್ಲಿ ಇಂದು ಡಾ ಬಿ.ಆರ್.ಅಂಬೇಡ್ಕರ್ ರವರ 130ನೇ ಜಯಂತಿ ಯನ್ನು ಪೂಜೆ ಸಲ್ಲಿಸಿ ನಂತರ ಗಣ್ಯ ವ್ಯಕ್ತಿಗಳಿಗೆ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಸರಳವಾಗಿ ಆಚರಣೆ ಮಾಡಲಾಯಿತು. ಅಂಬೇಡ್ಕರ್ ರವರು ಪ್ರಪಂಚ ಕಂಡ ದೊಡ್ಡ ವ್ಯಕ್ತಿ ಇವರ ಆದರ್ಶಗಳು ಶಿಕ್ಷಣ ಸಂಘಟನೆ ಹೋರಾಟ ಈ ಮೂರರಿಂದ ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯ ಮತ್ತು ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳಲು ಶಿಕ್ಷಣವು ಕೂಡ ಪ್ರಮುಖ ಎಂದರು, ಆದ್ದರಿಂದಾಗಿ ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣವು ಅಗತ್ಯ ಅಬೇಡ್ಕರ್ ರವರು ರಥ ತಂದು ನಿಲ್ಲಿಸಿದಾರೇ ಅದನ್ನ ಸಾಧ್ಯ ಆದರ ಮುಂದಕ್ಕೆ ತನ್ನಿ ಆಗಲಿಲ್ಲ ಅಂದ್ರೆ ಇದ್ದಲೇ ಬಿಡಿ ಹಿಂದಕ್ಕೆ ಮಾತ್ರ ತರಬೇಡ್ರಿ ಎಂದು ವಾಸ್ತವ ನುಡಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ತಾ.ಪಂ ಸದಸ್ಯರು ಪಾಪನಾಯಕ ಅವರು ಅಂಬೇಡ್ಕರ್ ರವರು ಸಾಮಾಜಿಕ ಸಮಾನತೆಗಾಗಿ ತಮ್ಮ ಜೀವನ ವನ್ನು ಮುಡುಪಾಗಿಟ್ಟಿದ್ದರು ಇದಕೆಲ್ಲ ಕಾರಣ ಅವರು ಪಡೆದಂತ ಶಿಕ್ಷಣ ಕಾರಣ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾ.ಪಂ ಅಧ್ಯಕ್ಷರಾದ ಕರಿಬಸಮ್ಮ ದುರುಗಪ್ಪ ನವರು, ಮತ್ತು ಗ್ರಾ.ಪಂ ಸದಸ್ಯರುಗಳಾದ ಕುಮಾರ್, ಅನು-ಗದಗೀಶ ಸದಸ್ಯರು, ಪ್ಯಾರಿಮಾಬಿ ಘನಿಸಾಹೇಬ್, ರಾಮಚಂದ್ರಪ್ಪ ಸದಸ್ಯರು ಹುಡೇಂ, ಶಶಿಕಲಾ ಜಯಣ್ಣ ಸದಸ್ಯರು, ಕುರಿ ಪಾಲಯ್ಯ ಸದಸ್ಯರು, ಎಲ್ಲಪ್ಪ, ನಾಗಮ್ಮ ಗದ್ದಿಸ್ವಾಮಿ, ಸುಂದರಮ್ಮ ಮಲ್ಲಿಕಾರ್ಜುನ್, ಅಜ್ಜಣ್ಣ ಸದಸ್ಯರು, ನಿರೂಪಣೆ ನಾಗೇಶ ಎಸ್.ಜಿ ಸ್ವಾಗತ ಗುರುಸ್ವಾಮಿ ವಂದನಾರ್ಪಣೆ, ನವೀನ್, ಮತ್ತು ಬಸವರಾಜ ರವಿ ಎಸ್.ಎಲ್, ಜೈ ಭೀಮ್ ಯುವ ಸೇನೆಯ ಯುವಕರು ತಾಯಕನಹಳ್ಳಿ, ವಿಶೇಷ ಉಪನ್ಯಾಸವನ್ನು ಶಿಕ್ಷಕರಾದ ರವಿ ಸರ್, ಮತ್ತು ಕರಿಬಸಮ್ಮ ಮೇಡಂ ಅವರು, ವಿಶೇಷ ಉಪನ್ಯಾಸವನ್ನು ನೀಡಿದರು. ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;