ವರದಿ. ಮಹಾಲಿಂಗ ಗಗ್ಗರಿ

ಎಲ್ಲರಿಗೂ ನಮಸ್ಕಾರ ಬಂಧುಗಳೆ ನಿನ್ನೆಯ ದಿನ ನಾನು ಮೊದಲೆ ಹೇಳಿದ ಹಾಗೆ ನಮ್ಮ ಸಂವಿಧಾನ ಶಿಲ್ಪಿ ಡಾ: ಬಾಬಾಸಾಹೇಬ ಅಂಬೇಡಕರರವರ 130 ನೇ ಜಯಂತಿಯನ್ನು ಬೆಳಗಾವಿಯ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತ ಕ್ಷೇತ್ರದ ಮುಗಳಖೋಡ ನಗರದ ಮಾದಿಗ ಸಮಾಜದ ಓಣಿಯಲ್ಲಿರುವ ಧುರ್ಗಾದೇವಿಯ ಗುಡಿಯ ಹತ್ತಿರ ಸರಳವಾಗಿ ಆಚರಿಸಲಾಯಿತು. ಸದರಿ ಜಯಂತಿಯ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶ ದಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾರಣ ವಿಶೇಷ ಅತಿಥಿ ಉಪನ್ಯಾಸಕರಾಗಿ ಶ್ರೀ ಕೃಷ್ಣ ಸಿ ಎಂ ಮಂಡ್ಯ ರವರು ಆಗಮಿಸಿದ್ದರು ಮತ್ತು ಅವರೇ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಇನ್ನೋರ್ವ ಉಪನ್ಯಾಸ ಕರಾಗಿ ಅಥಣಿಯ ವಕೀಲರಾದ ಶ್ರೀ ದಯಾನಂದ ವಾಘಮೋರೆಯವರು ಆಗಮಿಸಿದ್ದರು. ಅತಿಥಿಯಾಗಿ ನನಗೂ ಆಹ್ವಾನ ನೀಡಿದ ಕಾರಣ ನಾನೂ ಉಪಸ್ಥಿತನಿದ್ದು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದೆ. ವೇದಿಕೆಯ ಮೇಲೆ ಸಮಾಜ ಸೇವಕರಾದ ಬೆಳಗಾವಿಯ ಶ್ರೀ ಶಿವಾನಂದ ಸಂಜುಗೋಳರವರು ಹಾಜರಿದ್ದು ಸಮಾಜದ ಯುವಕರು ಸರ್ಕಾರದಿಂದ ಸಿಗುವ ಎಲ್ಲ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ಮಾಡುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಜೊತೆಗೆ ನಾವೂ ಕೂಡ ಉದ್ಯಮಿಗಳಾಗಬೇಕೆಂದು ಸಲಹೆ ನೀಡಿದರು. ಚಿಕ್ಕೋಡಿಯ ಶೈಕ್ಷಣಿಕ ಜಿಲ್ಲೆಯ ಡಿ ಎಸ್ ಎಸ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ರವಿ ಹಕ್ಯಾಗೋಳ ರವರು, ಹಂದಿಗುಂದ ಗ್ರಾಮದ ಪಂಚಾಯಿತಿಯ ಸದಸ್ಯರಾದ ಮತ್ತು ಡಿ ಎಸ್ ಎಸ್ ರಾಯಬಾಗ ತಾಲೂಕಿನ ಅಧ್ಯಕ್ಷರಾದ ಮತ್ತು ಪತ್ರಕರ್ತರಾದ ಶ್ರೀ ಮಹಾಲಿಂಗ ಗಗ್ಗರಿ, ಇನ್ನೋರ್ವ ಪತ್ರಕರ್ತರಾದ ಪಾಲಬಾಂವಿಯ ಶ್ರೀ ಶಿವಾಜಿ ಮೇತ್ರಿ ಯವರು, ವಕೀಲರಾದ ಶ್ರೀ ಅಣ್ಣಾಸಾಬ ಅಸೋದೆ ಯವರು, ಖನದಾಳ ಗ್ರಾಮದ ಪಂಚಾಯಿತಿಯ ಸದಸ್ಯರಾದ ಶ್ರೀ ಶ್ರೀಶೈಲ ಮಾಂಗ ರವರು, ಹಿಡಕಲ ಗ್ರಾಮದ ಸಮಾಜದ ಮುಖಂಡ ರಾದ ಶ್ರೀ ಸಂಜೀವ ಸಾಮನೆಯವರು, ಯಲ್ಪಾರಟ್ಟಿಯ ಸಮಾಜದ ಮುಖಂಡ ರಾದ ಶ್ರೀ ಕುಮಾರ ಹಳಕಲ ರವರು ಆಗಮಿಸಿದ್ದರು. ಮುಗಳಖೋಡ ನಗರದ ಮಾದಿಗ ಸಮಾಜದ ಎಲ್ಲ ಸಹೋದರ ಸಹೋದರಿಯರು ಮತ್ತು ಸಮಾಜ ಹಿರಿಯರು ಮತ್ತು ಸಹೋದರ ಸಮಾಜದವರಾದ ಹೊಲೆಯ, ಢೋಹರ, ಸಮಗಾರ ಸಮಾಜದ ಸಮಾಜದ ಬಂದುಗಳು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದರು. ಕಾರ್ಯಕ್ರಮವನ್ನು ಸ್ಥಳಿಯ ಸಮಾಜದ ಮುಖಂಡ ರಾದ ಶ್ರೀ ಶಿವಾನಂದ ಬಾಂವಿಮನಿಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು, ಶ್ರೀ ಮಾರುತಿ ಮಾದರ, ಅನೀಲ ಈರಗಾರ,ಶ್ರೀ ರಾಜು ಸಂದ್ರಿಮನಿ,ಶ್ರೀ ಸಂಗಪ್ಪ ಹಿಪ್ಪರಗಿ, ಶ್ರೀ ಲಕ್ಷ್ಮಣ ಕರಿಭೀಮಗೋಳ, ಮತ್ತು ಸಮಾಜದ ಹಿರಿಯ ಮುಖಂಡ ರಾದ ಶ್ರೀ ಬಸಪ್ಪ ಮಾದರ, ಶ್ರೀ ಶ್ರೀಶೈಲ ಕಡಕೋಳ, ಶ್ರೀ ಪರಶುರಾಮ ಕಡಕೋಳ, ಶ್ರೀ ರಾಣಪ್ಪ ಹಾದಿಮನಿ, ಶ್ರೀ ಮುದಕಪ್ಪ ಪೂಜೇರಿ, ಶ್ರೀ ಲಕ್ಷ್ಮಣ ಕೆಳಗಡೆ ಶ್ರೀ ಚೇತನ ಕಾಂಬಳೆ, ಶ್ರೀ ಮಾರುತಿ ಕಾಂಬಳೆ, ಮುಂತಾದ ಎಲ್ಲ ನಾಯಕರು ಉಪಸ್ಥಿತರಿದ್ದರು. ಮೊದಲು ಡಾ: ಬಾಬಾಸಾಹೇಬ ಅಂಬೇಡಕರ ರವರ ಬಾವಚಿತ್ರದ ಮುಂದೆ ಇರುವ ಜ್ಯೋತಿಯ ಬೆಳಗಿಸಿ ಪುಷ್ಪ ಅರ್ಚನೆ ಮಾಡಿ ಕೇಕ ಕತ್ತರಿಸಿ ಸಿಹಿ ಹಂಚುವ ಮೂಲಕ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿದೆವು. ನಂತರ ದಯಾನಂದ ವಾಘಮೋರೆಯವರು ಬಾಬಾಸಾಹೇಬ ಅಂಬೇಡಕರ ರವರ ಜೀವನ ಚರಿತ್ರೆಯ ಸಾರುವ ಬಾಬಾಸಾಹೇಬ ಅಂಬೇಡಕರ ರವರ ಬರಹಗಳು ಮತ್ತು ಭಾಷಣಗಳು ಎಂಬ ಗ್ರಂಥ ಸಾರಾಂಶ ಹೇಳಿದರು. ಮುಖ್ಯ ಅತಿಥಿ ಉಪನ್ಯಾಸಕರಾದ ಶ್ರೀ ಕೃಷ್ಣ ಸಿ ಎಂ ಮಂಡ್ಯ ರವರು ಜನಾಂಗದ ವಿಷಯವಾಗಿ ಜಾಗೃತಗೊಳಿಸುವ ಕುರಿತು ಮತ್ತು ವಿಶೇಷವಾದ ಅಸ್ಪ್ರಷ್ಯ ಜಾತಿಯ ಪಟ್ಟಿಯಿಂದ ಸ್ಪರ್ಶ ಜಾತಿಯವರಾದ ಕೋಲಂಬೋ ಗಳನ್ನು ಹೊರಹಾಕಲು ನಾವೆಲ್ಲ ಜನಾಂಗವನ್ನು ಯಾವ ರೀತಿಯ ತಯಾರಿಸುವ ಕುರಿತು ಅವರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಹೇಗೆ ಬಂದ್ರು ಅದರಿಂದ ನಮಗೆ ಯಾವ ರೀತಿಯ ಅನ್ಯಾಯ ಆಗುತ್ತಿದೆ ಎಂದು ಮತ್ತು ನಾವು ಏನು ಮಾಡೋಣ ಎಂಬ ವಿಚಾರ ವಿವರವಾಗಿ ತಿಳಿಸಿದರು ಈ ಹೋರಾಟಕ್ಕೆ ಕುಡಚಿ ಕ್ಷೇತ್ರದಿಂದ ಒಂದು ರಾಜ್ಯ ಮಟ್ಟದ ಜನಾಂದೋಲನಕ್ಕೆ ಸನ್ನದ್ದರಾಗೋಣ ಎಂದು ಎಲ್ಲ ವಿಷಯವನ್ನು ಸಂಪೂರ್ಣ ವಿವರಿಸಿದರು. ಪತ್ರಿಕಾ ಗೋಷ್ಠಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದೆವು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
