;

ಪತ್ರಕರ್ತರಿಗೆ ನಿವೇಶನ ಜೊತೆಗೆ, ಮನೆ ಮಂಜೂರು ಮಾಡಿಸುವೆ- ಶಾಸಕ ಸೋಮಶೇಖರ್ ರೆಡ್ಡಿ…!!!

ವರದಿ. ವಿರೇಶ್ ಹಳೇಕೋಟೆ ಸಿರುಗುಪ್ಪ

ಪತ್ರಕರ್ತರಿಗೆ ನಿವೇಶನ ಜೊತೆಗೆ, ಮನೆ ಮಂಜೂರು ಮಾಡಿಸುವೆ- ಶಾಸಕ ಸೋಮಶೇಖರ್ ರೆಡ್ಡಿ

ಬಳ್ಳಾರಿ: ಪತ್ರಕರ್ತರಿಗೆ ನಿವೇಶನ ಅಷ್ಟೇ ಅಲ್ಲ, ಇದರ ಜೊತೆಗೆ ಸ್ಲಂ ಬೊರ್ಡ್, ಹೌಸಿಂಗ್ ಬೋರ್ಡ್ ಅಡಿ ಎಲ್ಲರಿಗೂ ಮನೆ ಮಂಜೂರು ಮಾಡಿಸುವೆ, ಇದು ಭರವಸೆ ಅಲ್ಲ, ನುಡಿದಂತೆ ನಡೆಯುವೆ ಎಂದು‌ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಬೂಡಾ ಅಧ್ಯಕ್ಷ ದಮ್ಮೂರ್ ಶೇಖರ್ ಹಾಗೂ ನಗರ ಶಾಸಕ‌ ಸೋಮಶೇಖರ್ ರೆಡ್ಡಿ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು. ನಗರದ ಗೋನಾಳ್ ಪ್ರದೇಶದಲ್ಲಿ 101 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಮಾಡಲಾಗುತ್ತಿದೆ. ಅದರಲ್ಲಿ‌ ಪತ್ರಕರ್ತರಿಗೆ ಶೇ.5ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಇದರ ಜೊತೆಗೆ ಸ್ಲಂ ಬೋರ್ಡ್ ಅಥವಾ ಹೌಸಿಂಗ್ ಬೋರ್ಡ್ ಅಡಿ ಮನೆಗಳನ್ನು ಮಂಜೂರು ಮಾಡಿಸುವೆ, ನಿಮ್ಮೊಂದಿಗೆ ನಾನಿದ್ದೇನೆ, ಯಾವುದೇ ಸಮಸ್ಯೆ ಎದುರಾದರೂ ಸ್ಪಂಧಿಸುವೆ. ಇದರ ಜೊತೆಗೆ ಸರ್ಕಾರ ಆರೋಗ್ಯ ವಿಮೆ ಸೌಲಭ್ಯ ‌ಕಲ್ಪಿಸಿದ್ದು, ಇದನ್ನು ಪಡೆಯಲು ‌ಮುಂದಾಗಬೇಕು, ನಿಮ್ಮೆಲ್ಲರಿಗೂ ನಮ್ಮ ಸಹಕಾರ ಇದ್ದೇ ಇರಲಿದೆ ಎಂದರು. ಬೂಡಾ ಅಧ್ಯಕ್ಷ ದಮ್ಮೂರ್ ಶೇಖರ್ ಅವರು ಮಾತಮಾಡಿದರು. ಕಾ.ನಿ.ಪ.ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ‌ ಮಲ್ಲಿಕಾರ್ಜುನ ಅವರು ಮಾತನಾಡಿ, ಬೂಡಾ ಅಧ್ಯಕ್ಷ ದಮ್ಮೂರ್ ಶೇಖರ್ ಹಾಗೂ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರ ಶ್ರಮದಿಂದ ನಮ್ಮ ಎಲ್ಲ ಪತ್ರಕರ್ತರಿಗೆ ನಿವೇಶನ ಹಂಚಿಕೆಯಲ್ಲಿ ಶೇ.5ರಷ್ಟು ಮೀಸಲಾತಿ ಸೌಲಭ್ಯ ದೊರೆತಿದೆ. ಇದು ನಮ್ಮ ಜಿಲ್ಲೆ ಅಷ್ಟೇ ರಾಜ್ಯದ ಎಲ್ಲ ಪತ್ರಕರ್ತರಿಗೆ ಇದು ಅನ್ವಯವಾಗಲಿದೆ, ಇದು‌ ನಮಗೆ ಹೆಮ್ಮೆ ಎಂದರು. ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು‌ ಪತ್ರಕರ್ತರಿದ್ದು, ಎಲ್ಲರಿಗೂ ಸರ್ಕಾರದ ಎಲ್ಲ ಸೌಲಭ್ಯಗಳು ದೊರೆಯುವಂತಾಗಬೇಕು, ಆಗದಿದ್ದರೆ ಸರ್ಕಾರದ ಗಮನಸೆಳೆದು ಎಲ್ಲರಿಗೂ ಸೌಲಭ್ಯಗಳನ್ನು ಕಲ್ಪಿಸಲು ಹೋರಾಟ ಮುಂದುವರೆಸುವೆ ಎಂದರು.
ವಾರ್ತಾಧಿಕಾರಿ ರಾಮಲಿಂಗಪ್ಪ ಬಿ.ಕೆ.ಅವರು ಮಾತನಾಡಿ, ಅಕ್ರೆಡೆಶನ್ ಕಾರ್ಡ್ ಸೌಲಭ್ಯ ಹಂತ ಹಂತವಾಗಿ ಎಲ್ಲರಿಗೂ ದೊರೆಯಲಿದೆ. ಇದನ್ನು ಪಡೆಯಲು ಅದಕ್ಕೇ ಆದ ಕೆಲ‌ ಮಾನದಂಡಗಳಿವೆ, ಎಲ್ಲವನ್ನೂ ಪರಿಶೀಲನೆ ಬಳಿಕ ಸೌಲಭ್ಯ ದೊರೆಯಲಿದೆ. ಕಾರ್ಡ್ ಜೊತೆಗೆ ಆರೋಗ್ಯ ಕಾರ್ಡ್ ಸೌಲಭ್ಯ ಪಡೆದುಕೊಳ್ಳಿ, ಎಲ್ಲದಕ್ಕಿಂತ ಆರೋಗ್ಯ ಮುಖ್ಯ, ನಿತ್ಯದ ಕರ್ತವ್ಯದ ಜೊತೆಗೆ ಆರೋಗ್ಯದ ಕಡೆ ಹೆಚ್ಚು‌ಗಮನಹರಿಸಿ ಎಂದು ತಿಳಿಸಿದರು. ಇದಕ್ಕೂ ಮುನ್ನ ಗಣ್ಯರಿಗೆ ಪತ್ರಕರ್ತರಿಂದ ಪ್ರಿತಿಯ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಕಾ.ನಿ.ಪ.ಸಂಘದ ಜಿಲ್ಲಾಧ್ಯಕ್ಷ ಜಗನ್‌ ಮೋಹನ್ ರೆಡ್ಡಿ, ಯುವ ಮುಖಂಡ ಶ್ರೀನಿವಾಸ್ ಮೋತ್ಕರ್, ಹಿರೀಯ ಛಾಯಾಗ್ರಾಹಕ ಲೋಕನಾಥ್ ಸೇರಿದಂತೆ ಇತರರು ಇದ್ದರು. ಹಿರೀಯ ‌ಪತ್ರಕರ್ತ ಸಿದ್ಧರಾಮಪ್ಪ ಸಿರಿಗೇರಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತ ವೆಂಕಟೇಶ ದೇಸಾಯಿ ಸ್ವಾಗತಿಸಿದರು. ವಿರೇಶ್ ಕೆ.ವಂದಿಸಿದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;