;

ರಾಜ್ಯದಲ್ಲಿ ಐದನೇ ದಿನವು ನಾಲ್ಕು ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆ…!!!

ವರದಿ. ನಳಿನಿ ಬೆಂಗಳೂರು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ಪ್ರಕರಣಗಳು ಐದನೇ ದಿನವೂ ನಾಲ್ಕು ಸಾವಿರ ಗಡಿದಾಟಿದೆ. ಭಾನುವಾರ 4,553 ಮಂದಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ಫ‌ಲಕಾರಿಯಾಗದೇ 15 ಸೋಂಕಿತರು ಮೃತಪಟ್ಟಿದ್ದಾರೆ.
ಮಾರ್ಚ್‌ 31 ರಿಂದ ಸತತವಾಗಿ ಐದು ದಿನಗಳು ಹೊಸ ಪ್ರಕರಣಗಳು ನಾಲ್ಕು ಸಾವಿರಕ್ಕೂ ಅಧಿಕ ವರದಿಯಾಗಿವೆ. ಭಾನುವಾರವು 1.2 ಲಕ್ಷ ಸೋಂಕು ಪರೀಕ್ಷೆಗಳಾಗಿದ್ದು, ಶೇ 3.8 ರಷ್ಟು ಪಾಸಿಟಿವಿಟಿ ದರ ಕಂಡು ಬಂದಿದೆ. ಅಂದರೆ, ಸೋಂಕು ಪರೀಕ್ಷೆಗೊಳಗಾದ 100 ಮಂದಿಯಲ್ಲಿ ನಾಲ್ಕು ಮಂದಿಗೆ ಸೋಂಕು ತಗುಲಿದೆ. ಇನ್ನು ಮರಣ ದರ ಶೇ 0.3 ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು 200, ಸಾವು ನಾಲ್ಕು ಕಡಿಮೆಯಾಗಿವೆ.

ಭಾನುವಾರ ಅತಿ ಹೆಚ್ಚು ಬೆಂಗಳೂರು 2787, ಮೈಸೂರು 260, ಕಲಬುರಗಿ 170, ಬೆಂಗಳೂರು ಗ್ರಾಮಾಂತರ 155, ಬೀದರ್‌ 147, ತುಮಕೂರು 107, ಹಾಸನ 104, ಧಾರವಾಡ 100, ದಕ್ಷಿಣ ಕನ್ನಡ 83, ಮಂಡ್ಯ 79, ಉಡುಪಿ 73 ಪ್ರಕರಣಗಳು ವರದಿಯಾಗಿವೆ.

ಹಾವೇರಿ, ಕೊಪ್ಪಳ, ಕೊಡಗು, ವಿಜಯಪುರ, ಯಾದಗಿರಿ, ರಾಮನಗರ, ಗದಗದಲ್ಲಿ ಪ್ರಕರಣಗಳು 20ಕ್ಕೂ ಕಡಿಮೆ ದಾಖಲಾಗಿವೆ. ಬೆಂಗಳೂರು 8, ಕಲಬುರಗಿ 3, ಧಾರವಾಡ 2, ಹಾಸನ ಮತ್ತು ತುಮಕೂರು ತಲಾ ಒಬ್ಬರು ಸೇರಿ 15 ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳು 10.15 ಲಕ್ಷಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಾವಿನ ಸಂಖ್ಯೆ 12,625ಕ್ಕೆ ಹೆಚ್ಚಳವಾಗಿದೆ. ಇಂದಿಗೂ 39,092 ಮಂದಿ ಸೋಂಕಿತರು ಆಸ್ಪತ್ರೆ ಮತ್ತು ಮನೆಯಲ್ಲಿ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ. ಈವರೆಗೂ ಒಟ್ಟು 2.18 ಕೋಟಿ ಸೋಂಕು ಪರೀಕ್ಷೆಗಳು ರಾಜ್ಯದಲ್ಲಿ ನಡೆದಿದ್ದು, ಸದ್ಯ ಒಂದು ಲಕ್ಷ ಅಧಿಕ ಪರೀಕ್ಷೆಗಳು ನಿತ್ಯ ನಡೆಯುತ್ತಿವೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;