ವರದಿ. ಮಂಜುನಾಥ್. ಎಚ್

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ ಇಂದು 1ನೇ ವಾರ್ಡ್ ಹಾಗೂ 2ನೇ ವಾರ್ಡ್‌ಗಳಲ್ಲಿ ಕೊರೊನಾ ವಾರಿಯರ್ಸ್ ಮನೆ ಮನೆಗೆ ತೆರಳಿ ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ
ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದರು. ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿ ಆರೋಗ್ಯಧಿಕಾರಿಗಳು, ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು. ಆಸ್ಪತ್ರೆಯಲ್ಲಿ ಮತ್ತು ಸಮಾಜದಲ್ಲಿ
ಗುಂಪು ಗುಂಪಾಗಿ ಇರಕೂಡದು ಎಂದು ಪಾಲಿಸಬೇಕಿರುವ ನಿಯಮಗಳನ್ನ
ಅರ್ಥೈಸಿದರು. 45ವರ್ಷದ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಮನೆಗಳಿಗೆ ಭೇಟಿಕೊಟ್ಟು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಡಾ” ಶಿವಲಿಂಗಪ್ಪ ನವರು, ಹಾಗೂ ಡಾ” ಕಿಸನ್ ನವರು, ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಮಹಾಂತೇಶ್ ಸ್ವಾಮಿ ಅವರು, ಗ್ರಾ.ಪಂ ಕಾರ್ಯದರ್ಶಿ ಚಂದ್ರಣ್ಣ ಅವರು, ಕಿ.ಮ.ಆ.ಸ ಪ್ರೇಮ, ರಾಘವೇಂದ್ರ, ನಾಗೇಶ್, ಪವನ್, ಆಶಾ ಕಾರ್ಯಕರ್ತೆಯರು ನಾಗಮ್ಮ, ಕರಿಬಸಮ್ಮ, ಅಂಬುಲೆನ್ಸ್ ಚಾಲಕರು ರಾಜೇಶ್, ಹಾಗೂ ಗ್ರಾ.ಪಂ ಸದಸ್ಯರುಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
