;

ಕೂಡ್ಲಿಗಿ:ನಾಗರೀಕರ ನೆಮ್ಮದಿ ಕೆಡಿಸಿರುವ ಯೂಜಿಡಿ, ಅವೈಜ್ಞಾನಿಕ ಕಾಮಗಾರಿ-ದುರಸ್ತಿಗೆ ಆಗ್ರಹ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಕೂಡ್ಲಿಗಿ:ನಾಗರೀಕರ ನೆಮ್ಮದಿ ಕೆಡಿಸಿರುವ ಯೂಜಿಡಿ, ಅವೈಜ್ಞಾನಿಕ ಕಾಮಗಾರಿ-ದುರಸ್ತಿಗೆ ಆಗ್ರಹ*
-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಜವಾಬ್ದಾರಿಹೊತ್ತ,ಯೂಜಿಡಿಯ ಅವೈಜ್ಞಾನಿಕ ಕಾಮಗಾರಿ ನಾಗರೀಕರ ನೆಮ್ಮದಿ ಹಾಳು ಮಾಡಿದೆ ಎಂದು ನಾಗರೀಕರು ದೂರಿದ್ದಾರೆ.ಈ ಸಂಬಂಧಿಸಿದಂತೆ ಪಟ್ಟಣದ ಬಹುತೇಕ ಕಡೆಗಳಿಂದ ದೂರು ಮತ್ತು ಆಕ್ರೋಶ ಕೇಳಿಬಂದಿದ್ದು,ಸಮಸ್ಯೆಗೆ ಸ್ಪಂದಿಸಬೇಕಾಗಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಗಪ್ ಚುಪ್ ಆಗಿರುವುದು ಹತ್ತಾರು ಅನುಮಾನಗಳನ್ನ ಸೃಷ್ಟಿಸಿದೆ.10 ಹಾಗೂ 11ನೇವಾರ್ಡ್ ಗೆ ಹೊಂದಿಕೊಂಡಿರುವ
ಶ್ರೀಊರಮ್ಮ ದೇವಿ ದೇವಸ್ಥಾನದ ಹಿಂಭಾದಲ್ಲಿ,ಕಾಲುವೆಗಳು ಸಂಪೂರ್ಣ ಕುಸೀದು ಹೋಹಿವೆ ಹಲವೆಡೆ ಖಾಯಂ ಮುಚ್ಚಿಹೋಗಿವೆ. ಯೂಜಿಡಿಯವರ ಅವೈಜ್ಞಾನಿಕ ಕಾಮಗಾರಿ ಹಾಗೂ ಪಪಂ ನಿರ್ವಹಣೆಯ ಕೊರತೆಯಿಂದಾಗಿ ಕಾಲುವೆಗಳು ಬಂದ್ ಆಗಿವೆ ಎಂದು ನಾಗರೀಕರು ದೂರಿದ್ದಾರೆ,ಶೆಟ್ರುಕಾಳಪಮ್ಮರವರ ಮನೆಯ ಮುಂಭಾದಲ್ಲಿ ಎರೆಡೂ ಗಲ್ಲಿಯ ಕಾಲುವೆ ಸೇರುತ್ತಿದ್ದು,ಇಲ್ಲಿಯೇ ಯೂಜಿಡಿಯವರು ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಕಾರಣ,ಕಾಲುವೆ ಸಂಪೂರ್ಣ ಬಂದ್ ಆಗಿದೆ ತ್ಯಾಜ್ಯ ನೀರು ತುಂಬಿ ಕಸ ಕೊಳೆತು ಚರಂಡಿ ದುರ್ನಾಥ ಬೀರುತ್ತಿದೆ,ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ ಹಾಗೂ ಮಕ್ಕಳನ್ನು ಬಲಿತೆಗೆದುಕೊಳ್ಳವ ಜವರಾಯನಂತೆ ಭಾಸವಾಗುತ್ತಿದೆ.ಸಂಬಂಧಸಿದಂತೆ ಪಪಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆಯಾದರೂ ಪ್ರಯೋಜನವಾಗಿಲ್ಲ ಎಂದು ಕಾರ್ಮಿಕ ಮುಖಂಡ ಯಲ್ಲಪ್ಪ ಆಕ್ರೋಶವ್ಯೆಕ್ತಪಡಿಸಿದ್ದಾರೆ.
ಸುದ್ದಿ ತಿಳಿದ ಕಮ್ಯೂನಷ್ಟ್ ಮಿಖಂಡ ಕಾಂ ಹೆಚ್.ವೀರಣ್ಣ ಸ್ಥಳ ಪರಿಶೀಲಿಸಿದರು,ಪಪಂ ಅಧಕಾರಿಗಳನ್ನ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ವಿವರಿಸಿದರು.ಚುನಾವಣಾ ಕರ್ಥವ್ಯದಲ್ಲಿದ್ದ ಪಪಂ ಆರೋಗ್ಯಾಧಿಕಾರಿ ಸಿಬ್ಬಂದಿ ಕಳುಹಿಸಿದ್ದರು,ಅವರಿಗೆ ಸಮಸ್ಯೆ ಮನವರಿಕೆ ಮಾಡಿಕೊಡಲಾಯಿತು.
ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕೆಲ ದಿನಗಳ ಕಾಲಾವಕಾಶ ಕೋರಿದಾಗ, ಒಂದು ವಾರದ ಗಡುವು ನೀಡಲಾಗಿ ಸಮಸ್ಯೆಗೆ ಖಾಯಂ ಪರಿಹಾರ ದೊರಕಿಸದಿದ್ದಲ್ಲಿ,ಪಪಂ ಆವರಣದಲ್ಲಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಯಲ್ಲಪ್ಪನವರು ಮಾತನಾಡಿದರು,
ಈ ಸಮಸ್ಯೆ ಇಪ್ಪತ್ತು ವರ್ಷಗಳ ಸಮಸ್ಯೆ ಯೂಜಿಡಿಯವರ ಅವೈಜ್ಞಾನಿಕ ಕಾಮಗಾರಿಯಿಂದ ಇನ್ನಷ್ಟು ಹೆಚ್ಚಾಗಿದೆ.ಕಾಲುವೆ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಿ ಸ್ಲಾಬ್ ನಿರ್ಮಿಸಬೇಕು,ಬಾಯಿತೆರೆದ ದುರ್ನಾಥ ಬೀರುವ ಕಾಲುವೆಯಿಂದಾಗಿ ನಾಗರೀಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ,ನೆಮ್ಮದಿ ಹಾಳಾಗಿದೆ ಮಕ್ಕಳು ಕಾಲುವೆಲ್ಲಿ ಬೀಳುವ ಸಾಧ್ಯತೆ ಇದೆ ಸ್ಲಾಬ್ ನಿರ್ಮಿಸಬೇಕೆಂದು ಒತ್ತಾಯಿಸಿದರು.


ಕಾರ್ಮಿಕ ಮುಖಂಡ ವೀರಣ್ಣ ಮಾತನಾಡಿ ಒಂದು ವಾರದೊಳಗಾಗಿ ಖಾಯಂ ಪರಿಹಾರ ದೊರಕದಿದ್ದಲ್ಲಿ,ಹೋರ‍ಟ ಅನಿವಾರ್ಯ ಎಂದು ಪಪಂ ಅಧಿಕಾರಿಗೆ ದೂರವಾಣಿ ಮೂಲಕ ಹಾಗೂ ಹಾಜರಿದ್ದ ಸಿಬ್ಬಂದಿಗೆ ನೇರವಾಗಿ ಎಚ್ಚರಿಸಿದರು.
*ಪಪಂ ಆರೋಗ್ಯಾಧಿಕಾರಿ ಸ್ಪಂಧನೆ*-ಪಪಂ ಆರೋಗ್ಯಾಧಿಕಾರಿ ಗೀತಾರವರು ಕೂಡಲೇ ಸ್ಪಂಧಿಸಿದ್ದಾರೆ ಸಿಬ್ಬಂದಿ ನಿಯೋಜಿಸಿ, ಕಾಲುವೆಯಲ್ಲಿ ನಿಂತಿದ್ದ ತ್ಯಾಜ್ಯ ನೀರು ಹರಿದುಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ.ಮುಖ್ಯ ಪೌರಸೇವಾನೌಕರ ಪರಶುರಾಮಪ್ಪ ನೇತೃತ್ವದಲ್ಲಿ ಪೌರಸೇವಾ ಸಿಬ್ಬಂದಿ ಸ್ವಚ್ಚತಾ ಕಾಮಾಗಾರಿ ನೆರವೇರಿಸಿದ್ದಾರೆ.ಇದು ಸಮಾಧಾನಕರ ಸಂಗತಿಯಾಗಿದೆಯಾದಯರೂ ಖಾಯಂ ಪರಿಹಾರವಲ್ಲ.ಆದರೆ ಇಪ್ಪತ್ತು ವರ್ಷಗಳಿಂದ ನೆಮ್ಮದಿ ಕೆಡಿಸಿರುವ ಅವೈಜ್ಞಾನಿಕ ಕಾಲುವೆ ನಿರ್ಮಾಣ ಸಮಸ್ಯೆಗೆ,ಪಪಂ ಅಧಿಕಾರಿಗಳು ಜನಪ್ರತಿನಿಧಿಗಳು ಖಾಯಂ ಪರಿಹಾರ ಕಂಡುಕೊಳ್ಳಬೇಕಿದೆ ಅಲ್ಲಿಯವರೆಗೆ ತಮ್ಮ ಹೋರಾಟ ನಿಲ್ಲದು ಎನ್ನುತ್ತಾರೆ ಕಾರ್ಮಿಕ ಮಖಂಡ ಯಲ್ಲಪ್ಪ. ನಾಗರೀಕರಾದ ಬಣಕಾರ ಶಿವುಕುಮಾರ,ಮಠಪತಿ ಮಂಜಣ್ಣ,ಸೋಗಿ ರುದ್ರಪ್ಪ,ಮಂಜುನಾಥ ಸ್ವಾಮಿ,ಶೆಟ್ರು,ಮುಂತಾದವರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;