;

ಎಲ್ಲರ ಕಣ್ಣು ತಪ್ಪಿಸಿ ನ್ಯಾಯದೀಶರ ಮುಂದೆ ಹಾಜರಾದ ಸಿಡಿ ಲೇಡಿ….!!!

ವರದಿ. ನಳಿನಿ ಬೆಂಗಳೂರು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮಹತ್ವದ ಘಟ್ಟ ತಲುಪಿದ್ದು, ಸಂತ್ರಸ್ತ ಯುವತಿ 24ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಳೆ.

ಬಿಗಿ ಪೊಲೀಸ್ ಭದ್ರತೆಯಲ್ಲಿ ಮಾಧ್ಯಮಗಳು, ನೆರೆದಿದ್ದ ಜನರ ಕಣ್ತಪ್ಪಿಸಿ ಯುವತಿ ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದು, ತನ್ನ ಹೇಳಿಕೆ ದಾಖಲಿಸುತ್ತಿದ್ದಾಳೆ.

 

ಈ ಕುರಿತು ಸಿಡಿ ಯುವತಿ ಪರ ವಕೀಲ ಜಗದೀಶ್ ಮಾಹಿತಿ ನೀಡಿದ್ದು, ಸಂತ್ರಸ್ತ ಯುವತಿ ಈಗಾಗಲೇ ಕೋರ್ಟ್ ಹಾಲ್ ನಲ್ಲಿದ್ದು, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತಿದ್ದಾಳೆ. ಯುವತಿಯ ಭದ್ರತೆ ದೃಷ್ಟಿಯಿಂದ ಮಾಧ್ಯಮಗಳ ಕಣ್ತಪ್ಪಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದೇವೆ ಎಂದು ಹೇಳಿದ್ದಾರೆ.

ಯುವತಿ ಮಾನಸಿಕವಾಗಿ ಸದೃಢವಾಗಿದ್ದಾಳೆ, ದೈಹಿಕವಾಗಿ ಸ್ವಲ್ಪ ಸುಸ್ತಿನಲ್ಲಿದ್ದು, ಧೈರ್ಯದಿಂದ ಇದ್ದಾರೆ. ತನಗಾದ ಅನ್ಯಾಯದ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;