;

ನಿದ್ರಿಸುತ್ತಿರುವ ಪಪಂ..ಬಲಿಗಾಗಿ ಕಾದು ಕುಳಿತ ಜವರಾಯ…???

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ನಿದ್ರಿಸುತ್ತಿರುವ ಪಪಂ..ಬಲಿಗಾಗಿ ಕಾದು ಕುಳಿತ ಜವರಾಯ.!?*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 2ನೇವಾರ್ಡ್ ಪಟ್ಟಣ ಪಂಚಾಯ್ತಿ ಕಚೇರಿ ಹಿಂಭಾದಲ್ಲಿ,ಗಲ್ಲಿಯೊಂದರ ಕಾಲುವೆಯ ಮೇಲ್ಭಾಗ ಬಾಯಿ ತೆರೆದು ಬಲಿಗಾಗಿ ಕಾದು ಜವರಾಯನಂತೆ ಕಾಣುತಿದ್ದೆ.ರಸ್ತೆಯ ಮಧ್ಯದಲ್ಲಿರುವ ಕಾಲುವೆಯ ಮೇಲ್ಭಾಗದ ಹೊದಿಕೆ ಕಿತ್ತು ವರ್ಷಗಳೇ ಕಳೆದರು ದುರಸ್ತಿ ಕಂಡಿಲ್ಲ,ಬಚ್ಚಲ ಮೋರೆಗಳ ನೀರು ಹಾಗೂ ಕಸ ಸಮ್ಮಿಶ್ರವಾಗಿ ಕೊಳೆತು ಗಬ್ಬೆದ್ದು ನಾರುತ್ತಿದೆ.ಕಾಲುವೆಯ ಮೇಲ್ಭಾಗ ಕುತ್ತು ಬಾಯಿತೆರೆದು ಎರೆಡು ವರ್ಷಗಳಾದವು ಸಾಕಷ್ಟು ಭಾರಿ ಅಧಿಕಾರಿ ಗಮನಕ್ಕೆ ತಂದಿದೆ ಪ್ರಯೋಜನವಾಗಿಲ್ಲ,ಸೊಳ್ಳೆಗಳು ಉತ್ಪನ್ನವಾಗುವ ಕಾರ್ಖಾನೆಯ‍ಾಗಿದೆ ಹತ್ತಾರು ಮಕ್ಕಳು ಹಾಗೂ ವೃದ್ಧರು ಕಾಲುವೆಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಪಪಂ ಅಧಿಕಾರಿಗೆ ಧುರಸ್ಥಿಗೊಳಿಸುವಂತೆ ಹಲವು ಭಾರಿ ಕೋರಲಾಗಿದೆ,ಪಪಂ ಅಧಿಕಾರಿ ಜನಪ್ರತಿನಿಧಿ ಗಳು ಸೌಜನ್ಯಕ್ಕೂ ಬೆಟ್ಟಿ ನೀಡಿ ಪರಿಶೀಲಿಸಿಲ್ಲ,ಭಾರೀ ನಿರ್ಲಕ್ಷ್ಯ ತೋರಿದ್ದಾರೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಾದಾಚಾರಿಗಳು ಹಾಗೂ ಬೈಕ್ ಸವಾರರು ನಿತ್ಯ ಪ್ರಾಣವನ್ನ ಕೈಯಲ್ಲಿಡಿದುಕೊಂಡೇ ಸಂಚರಿಸುವಂತಾಗಿದೆ,ಕಸ ತ್ಯಾಜ್ಯ ಕೊಳೆತು ನಾರುವ ಕಾಲುವೆಯು ಬಾಯಿತೆರೆದು ದುರ್ವಾಸನೆ ಬೀರುತ್ತಿದೆ.ಇದರಿಂದಾಗಿ ಸೊಳ್ಳೆಗಳ ಹಾವಳಿ ಮಿತಿ ಮೀರಿದೆ,ಇದರಿಂದಾಗಿ ತಾವು ನಿತ್ಯ ನರಕಯಾತನೆ ಅನುಭವುಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಕೊರೋನಾದಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಸೃಷ್ಠಿಸುತ್ತಿರುವ ಕಾಲುವೆ ಬಾಯ್ತೆರೆದು ಕೊಂಡಿದೆ, ಆಪತ್ತು ಸೃಷ್ಠಿಸುವ ಜವರಾಯನಂತೆ ಭಾಸವಾಗುತ್ತಿರುವ ಕಾಲುವೆಯಿಂದಾಗಿ ನೆಮ್ಮದಿ ಕಾಣದಾಗಿದೆ ಎಂದು ನಾಗರೀಕರು ದೂರಿದ್ದಾರೆ.ಕಾರಣ ಸಂಬಂಧಿಸಿದಂತೆ ಪಪಂ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಶೀಘ್ರವೇ ಸ್ಥಳ ಪರಿಶೀಲಿಸಬೇಕು ಮತ್ತು ಸೂಕ್ತ ಕ್ರಮಗಳನ್ನ ಜರುಗಿಸಬೇಕಿದೆ ಎಂದು, ನಾಗರೀಕರು ವಿವಿದ ಪದಾಧಿಕಾರಿಗಳು ಈ ಮೂಲಕ ಒತ್ತಾಯಿಸಿದ್ದಾರೆ….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;