ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ನೇತ್ರನಹಳ್ಳಿ ಗ್ರಾಮದಲ್ಲಿ ನಡೆದ ಜೋಡು ಎತ್ತುಗಳ ಕಲ್ಲುಕಂಬ ಎಳೆಯುವ ಸ್ಪರ್ಧೆ ತಾಲೂಕಿನಲ್ಲಿ ವಿವಿಧ ಭಾಗಗಳ 12 ಜೋಡಿ ಎತ್ತುಗಳು ಭಾಗವಹಿಸಿದ್ದವು. ಅಂದಾಜು 3 ಟನ್ ತೂಕದ 7 ಅಡಿ ಉದ್ದ ಕಲ್ಲು ಕಂಬವನ್ನು 250 ಮೀಟರ್ ಹಂತದ ಉದ್ದದಲ್ಲಿ 20ನಿಮಿಷ ಸಮಯದಲ್ಲಿ ಜೋಡು ಎತ್ತುಗಳು ಎಳೆಯಬೇಕುಗಿತ್ತು. ತಾಲೂಕಿನ ಸುತ್ತಮುತ್ತಲಿನ ಹತ್ತಾರು ಹಳ್ಳಿ ಜನರು ತಮ್ಮ ಜೋಡೆತ್ತುಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಲ್ಲು ಕಂಬದ ಎಳೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ನೇತ್ರನ ಹಳ್ಳಿ ಗ್ರಾಮದ ತಿಪ್ಪಯ್ಯ ಎಂಬುವವರ ಎತ್ತುಗಳು 11 ಸುತ್ತು ತಿರುಗಿ ಹದಿನೈದು ಸಾವಿರ ಬಹುಮಾನ ಪಡೆದಿತ್ತು. ಹಾಗೂ ಕೋನಸಾಗರದ ಚಂದ್ರಣ್ಣನ ಎತ್ತುಗಳು 10 ಸುತ್ತು ತಿರುಗಿ ದ್ವಿತೀಯ ಬಹುಮಾನ 10 ಪಡೆದಿದೆ. ತೃತೀಯ ಬಹುಮಾನ ಭದ್ರಯ್ಯನ ತೋಪ್ಲುಎತ್ತುಗಳು ಒಂಬತ್ತು ಸುತ್ತು ತಿರುಗಿ 5000 ಸಾವಿರ ರೂಪಾಯಿ ಬಹುಮಾನ ಪಡೆದಿದೆ. ಈ ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಅವರು ಉಪಸ್ಥಿತರಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಮುಖಂಡರಾದ ಸೂರಯ್ಯ, ಮಲ್ಲಯ್ಯ, ಸೂರಯ್ಯ, ತಿಪ್ಪೇಸ್ವಾಮಿ, ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯಧ್ಯಕ್ಷರಾದ ಜಿ.ಎನ್.ಜಗದೀಶ್, ಊರಿನ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
