ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

ರಾಯಬಾಗ ತಾಲೂಕಿನ ಕ್ರೀಡಾಂಗಣ 2002ರಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆ ರವರಿಂದ ಉದ್ಘಾಟನೇಗೋಂಡಿದ್ದು ಸುಮಾರು 18 ವಷ೯ಗಳಿಂದ ಮೂಲಭೂತ ಸೌಕರ್ಯಗಳ ಕೊರತೆ ಇದೆ ಇಲ್ಲಿ ಡ್ರೆಸಿಂಗ್ ರೂಮ್, ರನ್ನಿಂಗ್ ಟ್ರ್ಯಾಕಿಂಗ್ ಲೈನ್, ವಿಶ್ರಾಂತಿ ರೂಮ್, ಜಿಮ್, ಈಜುಕೊಳ,ನೆರಳಿನ ವ್ಯವಸ್ಥೆ,ಲೈಟಿಂಗ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ, ನೇಟ್ ಬಾಲ್, ಗ್ರೌಂಡ್ ಹುಲ್ಲುಗಾವಲಿನ ವ್ಯವಸ್ಥೆ, ಮತ್ತು ಅರಣ್ಯ ಇಲಾಖೆಯವರು ನೆಟ್ಟ ಗಿಡಗಳೇಲ್ಲ ಸರಿಯಾದ ನಿವ೯ಹಣೇ ಇಲ್ಲದೇ ಹಾಳಾಗುತ್ತಿದೆ, ಬೋರವೇಲ್ ಇದರು ನೀರಿನ ಸಮಸ್ಯೆ ಇದೇ, ವಾಹನಗಳ ನಿಲುಗಡೆ ಗೇಟ್ ಹೊರಗೆ ಇರುತ್ತವೆ ನಿವ೯ಹಣೇ ಇಲ್ಲದೇ ಪ್ರತಿ ಕೋಣೆಗಳು ಕೀಲಿ ಹಾಕಿದ್ದು ಕಂಡು ಬರುತ್ತದೆ ಆದರೆ ನಮ್ಮ ರಾಯಬಾಗದ ಕ್ರೀಡಾ ಸಾಧನೆ ಮಾತ್ರ ದೇಶದಲ್ಲಿ ರಾರಾಜಿಸುತ್ತಿರುವುದು ನಮ್ಮ ಹೆಮ್ಮೆ ರನ್ನಿಂಗ್ ದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದನ್ನು ಇನ್ನೂ ಯಾರು ಅಳಿಸಲು ಆಗಿಲ್ಲ, ಮತ್ತು ವಾಲಿಬಾಲ್ ಆಟವಂತೂ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದೇ, ಕಬ್ಬಡಿ, ಖೋ ಖೋ, ಹಾಕಿ, ಪುಟ್ಬಾಲ್ ,ಯೋಗ ಕರಾಟೆ ಟೇಕ್ವಾಂಡೋ ಆಟಗಳಲ್ಲಿ ರಾಜ್ಯ ಮಟ್ಟದಲ್ಲಿ ರಾಯಬಾಗ ತಾಲೂಕಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅದ್ಭುತ ಸಾಧನೇಗಳನ್ನು ಮಾಡುತ್ತಿದ್ದಾರೆ ಎಷ್ಟೋ ಜನ ಕ್ರೀಡೆಯಿಂದ ನೌಕರಿ ಕೂಡಾ ಪಡೆದು ಉನ್ನತವಾದ ಸ್ಥಳಗಳಲ್ಲಿ ಇದ್ದಾರೆ,ಅದಕ್ಕಾಗಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಮೂಲಕ ಅವರನ್ನು ಕ್ರೀಡಾ ಸಾಧನೆಗೆ ಅಣಿಗೊಳಿಸುವ ಕೇಲಸ ಶುರು ಆಗಬೇಕು ಮತ್ತು ಕ್ರೀಡಾಂಗಣ ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಆಶಯ ಆ ನಿಟ್ಟಿನಲ್ಲಿ ಕ್ರೀಡಾಂಗಣ ಅಭಿವೃದ್ಧಿಯೇ ನಮ್ಮ ಮುಂದಿನ ಹೋರಾಟ ನೀವು ಸಹಕರಿಸುವಿರಿ ಎಂಬ ಆಶಯದೊಂದಿಗೆ “ಹೇಣ್ಣಿರಲಿ ಗಂಡ ಇರಲಿ ಮನೇಗೋಂದು ಕ್ರೀಡಾಪಟುವಿರಲಿ” ನಮ್ಮ ರಾಯಬಾಗದ ಕ್ರೀಡಾಪಟುಗಳು ಸಹಿತ ಮುಂದೆ ಒಲಂಪಿಕ್ಸ್, ಕಾಮನ್ವೆಲ್ತ್, ಕ್ರೀಡೆಯಲ್ಲಿ ಭಾಗವಹಿಸಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳನ್ನು ಪಡೆದು ನಮ್ಮ ರಾಯಬಾಗದ ಹೇಸರಿನ ಕೀರ್ತಿ ಪತಾಕೆಯನ್ನು ಹಾರಿಸಲಿ ,,,,
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
