ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಮಹಿಳಾ ಸಬಲೀಕರಣಕ್ಕೆ ಹೆಚ್ಚು ಆಧ್ಯತೆ-ಹಿರಿಯ ಶ್ರೇಣಿ ನ್ಯಾ, ಕೆ.ಎ.ನಾಗೇಶ*-ವಿಜಯನಗರ ಜಿಲ್ಲೆ ಕೂಡ್ಲಿಗಿ:ಮಹಿಳಾ ಸಬಲೀಕರಣಕ್ಕಾಗಿ ಎಲ್ಲರೂ ಆಧ್ಯತೆ ನೀಡೋ ಮೂಲಕ, ಮಹಿಳೆಯರ ಸರ್ವತೋಮುಖ ಏಳ್ಗೆಗೆ ನಾವೆಲ್ಲರೂ ಒತ್ತು ನೀಡೋಣ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶರವರು ಕರೆ ನೀಡಿದರು. ಅವರು ನ್ಯಾಯಾಲಯದ ಆವರಣದಲ್ಲಿ ಮಾ9ರಂದು,ಕೂಡ್ಲಿಗಿ ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ.ಹಾಗೂ ವಿವಿದ ಸಂಘ ಸಂಸ್ಥೆಗಳು ಹಾಗು ವಿವಿದ ಇಲಾಖೆಗಳ ಸಹಯೋಗದೊಂದಿಗೆ, ಆಯೋಜಿಸಲಾಗಿದ್ದ “ಅಂತರಾಷ್ಟ್ರೀಯ ಮಹಿಳಾ” ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿನ ಕಂದಾಚಾರಗಳನ್ನ ಸಂಪೂರ್ಣ ತೊಲಗಿಸಬೇಕು, ಶೋಷಣೆಗಳು ಸಂಪೂರ್ಣ ನಿಲ್ಲಬೇಕು ಅದಕ್ಕಾಗಿ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದರು.ಕಿರಿಯ ಶ್ರೇಣಿ ನ್ಯಾಯಾಧೀಶ ಮುರುಗೇಂದ್ರ ತುಬಾಕೆ ಮಾತನಾಡಿದರು, ಮಹಿಳೆಯರು ಶೋಷಣೆ ವಿರುದ್ಧ ಹೋರಾಡಲು ನ್ಯಾಯಾಂಗ ಇಲಾಖೆ ಮಹಿಳೆಯರ ಪರ ಸಾಕಷ್ಟು ನೆರವು ನೀಡಲಿದೆ.ಮಹಿಳಾ ರಕ್ಷಣೆ ಮತ್ತು ಕಾನೂನು ಸುವ್ಯ ವಸ್ಥೆಯಲ್ಲಿ ಮಹಿಳಾ ಮಕ್ಕಳ ರಕ್ಷಣೆಗೆ ಹೆಚ್ಚು ಆಧ್ಯತೆ ನೀಡಲಾಗಿದೆ,ಮಹಿಳೆಯರು ಉಚಿತ ಕಾನೂನು ಸಲಹಾ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಲಿ. ಕಾನೂನು ಸಲಹೆ ಸಹಕಾರಗಳನ್ನ ಸದುಪಯೋಗ ಪಡಿಸಿಕೊಳ್ಳಲಿ ಎಂದರು.ಹಿರಿಯ ಮಹಿಳಾ ನ್ಯಾಯವಾದಿ ಕೆ.ಹೆಚ್.ಎಮ್.ಶೈಲಜಾ,ಸಿಡಿಪಿಓ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣಮ್ಮ,ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ವಸವಡ್ರು ಅಣ್ಣೇಶ,ಹಿರಿಯ ಮಹಿಳಾ ನ್ಯಾಯವಾದಿ ಸವಿತಾಬಾಯಿ, ಸಿಡಿಪಿಓ ನಾಗನಗೌಡ,ವಕೀಲರ ಸಂಘದ ಉಪಾಧ್ಯಕ್ಷ ಪಾಪಯ್ಯ ವೇದಿಕೆಯಲ್ಲಿದ್ದರು.ಸ್ನೇಹ ಸಂಸ್ಥೆ ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಹೋರಾಟಗಾರ ವಕೀಲರಾದ ಸಿ.ವಿರುಪಾಕ್ಷಪ್ಪ ನಿರೂಪಸಿದರು,ಜಿ.ಎಮ್.ಮಲ್ಲಿಕಾರ್ಜುನಯ್ಯ ಸ್ವಾಗತಿಸಿ ವಂದಿಸಿದರು….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
