ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ವಿದ್ಯಾರ್ಥಿಗಳು 20ವರ್ಷ ಶ್ರಮಿಸಿದರೆ,80ವರ್ಷ ಸುಖವಾಗಿರಬಹುದು-ಉಜ್ಜಿನಿ ಶ್ರೀಗಳು*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಎಸ್ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ,ಕಾಲೇಜು ಭೂದಾನಿ ಹಾಗೂ ಶಿಕ್ಷಕರಾದ ದಿವಂಗತ ಅಂಗಡಿ ಸಿದ್ದಣ್ಣನವರ ಜೀವನ ಚರಿತ್ರೆಯ “ಪ್ರಸಿದ್ಧ ಪರ್ವ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಪುಸ್ತಕ ಬಿಡುಗಡೆ ಗೊಳಿಸಿ,ಉಜ್ಜಿನಿ ಸದ್ಧರ್ಮ ಪೀಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಮಾತನಾಡಿದರು.ಯುವ ಪೀಳಿಗೆ ಮೊಬೈಲ್ ಗೀಳಿನಿಂದಾಗಿ ಅಧ್ಯಯನ ಕಡೆ ನಿಗಾ ಕೊಡುತ್ತಿಲ್ಲ, ಇದರಿಂದ ಯುವಪೀಳಿಗೆ ಅಮೂಲ್ಯವಾದ 20ವರ್ಷಗಳನ್ನು ಮೋಜಿನಲ್ಲಿ ಕಾಲಹರಣ ಮಾಡುತ್ತಾರೆ,ನಂತರ ಜೀವನ ಪೂರ್ತಿ ಕಷ್ಟ ಅನುಭವಿಸುತ್ತಾರೆ ಪಶ್ಚಾತ್ತಾಪ ಪಡುತ್ತಾರೆ. ವಿದ್ಯಾಭ್ಯಾಸದ 20ವರ್ಷದ ಅವಧಿ ಬಹು ಅಮೂಲ್ಯ,ಅದನ್ನ ಅಧ್ಯಯನ ಸಾಧನೆಗೆ ಬಳಸಿದ್ದಲ್ಲಿ ಉಳಿದ ಆಯುಷ್ಯ ಪೂರ್ತಿ ತಾನು ತನ್ನ ಸಂಸಾರದವರೆಲ್ಲರೂ ಸುಖವಾಗಿರಹುದು.ವಿಲಾಸಿ ಜೀವನ ಬಿಟ್ಟು ಅಧ್ಯಯನದಲ್ಲಿ ಶ್ರಮ ವಹಿಸಬೇಕೆಂದು ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಭೂ ದಾನ ಮಾಡೋ ಮೂಲಕ ಶಿಕ್ಷಣ ಪ್ರೇಮ ಮೆರೆದ ಸಿದ್ದಣ್ಣನವರ ಜೀವನ ದಿನಗಳೆಲ್ಲವೂ ಮಹತ್ವದ ಪರ್ವದ ದಿನಗಳಾಗಿದ್ದು, ಸಾಧಕರ ಕುರಿತ ಅಮೂಲ್ಯ ಮಾಹಿತಿ,ಹಲವು ಕ್ಷಣಗಳನ್ನು ಸಂಗ್ರಹಿಸಿರುವ ಲೇಖಕರಾದ ಕೆ.ಎಮ್.ವೀರೇಶರವರು ತುಂಬಾ ಕಾಳಜಿ ವಹಿಸಿ ಹಾಗೂ ತುಂಬಾ ಶ್ರಮ ವಹಿಸಿ ಪುಸ್ತಕ ರಚಿಸಿದ್ದಾರೆ.ಸಾಧಕರ ಆದರ್ಶಗಳ ಸಾರಾಂಶಗಳನ್ನ ಒಟ್ಟುಗೂಡಿಸಿ ಪುಸ್ತಕದಲ್ಲಿ ಅಡಗಿಸಿಟ್ಟಿದ್ದಾರೆ.ಅತ್ಯಧ್ಬುತವಾದ ಪುಸ್ತಕ ರೂಪು ಪಡೆದಿರುವ ದಿವಂಗತ ಅಂಗಡಿ ಸಿದ್ದಣ್ಣನವರ ಜೀವನ ಚರಿತ್ರೆಯ,”ಪ್ರಸಿದ್ದ ಪರ್ವ” ಕೂಡ್ಲಿಗಿ ಮಾತ್ರವಲ್ಲ ನಾಡಿನಾಧ್ಯಂತ ದಾನಿಗಳನ್ನ ಹುಟ್ಟು ಹಾಕುವಂತಿದೆ. ಅವರ ಶೈಕ್ಷಣಿಕ ಪ್ರೇಮದ ಕೂಸು ಆದ ಶಾಲಾ ಕಾಲೇಜುಗಳಿಂದ,ಶಿಕ್ಷಣ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿ ಸಿದ್ದಣ್ಣನವರ ಧ್ಯೇಯ ಪೂರೈಸಿದ್ದಲ್ಲಿ ಅವರ ಶ್ರಮ ಸಾರ್ಥಕ ಸಾಧ್ಯವಾಗಲಿದೆ.ಅಂದಾಗ ಮಾತ್ರ ನಾಡಿನಲ್ಲಿಯೇ ಕೂಡ್ಲಿಗಿ ತಾಲೂಕಿನ ಹೆಸರು ಅವಿಸ್ಮರಣೀಯವಾಗಲಿದೆ, ಅದಕ್ಕಾಗಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ವಹಿಸಿ ಸಾಧಿಸಬೇಕು ಎಂದರು.ಕೂಡ್ಲಿಗಿ ಹಿರೇಮಠ ಶ್ರೀಪ್ರಶಾಂತಸಾಗರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಸಂಸದರಾದ ವೈ.ದೇವೇಂದ್ರಪ್ಪ, ತಹಶಿಲ್ದಾರರಾದ ಎಸ್.ಮಹಾಬಲೇಶ್ವರ,ಸಿಪಿಐ ವಸಂತ ಅಸೋದೆ, ಕೆ.ಎಮ್.ತಿಪ್ಪೇಸ್ವಾಮಿ,ಹಿರಿಯ ವಕೀಲ ಎಮ್.ಎಮ್.ಜೆ.ಸ್ವರೂಪಾನಂದ, ನೌಕರರ ಸಂಘದ ಪಿ.ಶಿವುರಾಜ್, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು,ಅಂಗಡಿ ಸಿದ್ದಣ್ಣನವರ ಕಿರಿಯ ಪುತ್ರ ಹಾಗೂ ಪತ್ರಕರ್ತ ವೀರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಎಮ್.ಶಾರದಾಬಾಯಿ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ನಾಗರತ್ನಮ್ಮ,ವೀರನಗೌಡ್ರು ವೇದಿಕೆಯಲ್ಲಿದ್ದರು.ಅಂಗಡಿ ಸಿದ್ದಣ್ಣನವರ ಹಿರಿಯ ಪುತ್ರ ಹಾಗೂ ವಕೀಲರಾದ ಅಂಗಡಿ ಶಿವುರಾಜ್ ಸ್ವಾಗತಿಸಿದರು.ಶಿಕ್ಷಕಿ ಬಿ.ಚೌಡಮ್ಮರವರು ಪ್ರಾರ್ಥಿಸಿದರು. ಲೇಖಕರಾದ ಕೆ.ಎಮ್.ವೀರೇಶ್ ರವರು ನಿರೂಪಿಸಿ ವಂದಿಸಿದರು.ರಂಗ ಕಲಾವಿದರು,ಶಿಕ್ಷಕರು,ಸಿದಣ್ಣ ಮೇಸ್ಟ್ರು ರವರ ನೂರಾರು ಅಭಿಮಾನಿಗಳು.ಜನಪ್ರತಿನಿಧಿಗಳು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಹಿರಿಯ ನಾಗರೀಕರು ಹಾಗೂ ಶಾಲೆ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮಲ್ಲಿ ಭಾಗವಹಿಸಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
