ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ

*ನೆಲಗೊಂಡನಹಳ್ಳಿ ಕ್ರಾಸ್:ವಾಹನ ತಡೆದು ಹಣ ವಸೂಲಿ,ಇಬ್ಬರು ಆರೋಪಿಗಳ ಬಂಧನ*<>ವಿಜಯನಗರ ಜಿಲ್ಲೆ ಹರಪನಹಳ್ಳಿಯ ನೆಲಗೊಂಡನಹಳ್ಳಿ ಕ್ರಾಸ್ ಹತ್ತಿರ ಅರಸಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಜರುಗಿದೆ,ಕಬ್ಬಿಣದ ರಾಡ್ ಹೊಂದಿದ್ದ ಅಪರಿಚಿತರು ವಾಹನ ತಡೆದು ಹಣ ವಸೂಲಿ ಮಾಡಿರುವ ಘಟನೆ ಮಂಗಳವಾರ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.ರಾತ್ರಿ ಹೊತ್ತಲ್ಲಿ ವಾಹನ ಸಂಚರಿಸುವ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು ವಾಹನ ತಡೆದು ಚಾಲಕನಿಗೆ ಹಲ್ಲ್ಯೆ ಮಾಡಿ ಹಣ ವಸೂಲಿ ಮಾಡಿರುವುದಾಗಿ ತಿಳಿದು ಬಂದಿದೆ,ಹರೀಶ್ ಎಂಬ ಚಾಲಕನು ತಮ್ಮ ಮಹೀಂದ್ರ ಬೊಲೇರೊ ವಾಹನದಲ್ಲಿ ಹರಪನಹಳ್ಳಿಗೆ ತೆಂಗಿನ ಕಾಯಿಗಳನ್ನು ತಂದು.ಅನ್ ಲೋಡ್ ಮಾಡಿ ವಾಪಾಸ್ ತೆರಳುವಾಗ ನೆಲಗೊಂಡಹನಹಳ್ಳಿ ಕ್ರಾಸ್ ಬಳಿ ಘಟನೆ ಜರುಗಿರುಗಿದೆ,ಚಾಲಕ ಹೇಳಿಕೆಯಂತೆ ತಡ ರಾತ್ರಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಹಾಕಿ ವಾಹನ ತಡೆದು ಸುಮಾರು 25-30ವಯಸ್ಸಿನ ಮೂವರು ಅಪರಿಚಿತರು.ಕಪ್ಪು ಬಣ್ಣದ ಪಲ್ಸ್ ರ್ ಬೈಕ್ ನಿಂದ್ದು ಚಾಲಕ ವಾಹನವನ್ನು ನಿಧಾನ ಮಾಡಿ ಹೆಡ್ ಲೈಟ್ ಆರಿಸಿದಾಗ,ಮೂರಲ್ಲಿ ಇಬ್ಬರು ಕಬ್ಬಿಣದ ರಾಡು ಹಿಡಿದು ಬಂದು ಹಲ್ಲೆ ಮಾಡಿ ಕೈಗೆ ಗಾಯ ಮಾಡಿ ಜೇಬಲ್ಲಿದ್ದ 2ರೂಹಣ ದೋಚಿದ್ದಾರೆ.ಇದೇ ಸಮಯದಲ್ಲಿ ಇತರೆ ವಾಹನಗಳನ್ನು ತಡೆಯೋ ಯತ್ನ ನಡೆಸಿದ್ದು ವಿಫಲವಾಗಿದೆ ಎಂದು ಚಾಲಕ ಹೇಳಿಕೆಯಲ್ಲಿ ದೂರಿದ್ದಾನೆ.ಹಲ್ಲ್ಯೆಗೊಳಗಾದ ಮಹೀಂದ್ರ ಪಿಕಪ್ ಚಾಲಕ ಸೇರಿ ಇತರರು ಅರಸಿಕೆರಿ ಠಾಣೆಯಲ್ಲಿ ದೂರು ನಿಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಪಿಎಸ್ಐ ಕಿರಣ್ ಕುಮಾರ್ ಮಾರ್ಗದರ್ಶನದಲ್ಲಿ ಎಎಸ್ಐ ರಾಮಚಂದ್ರಪ್ಪ 3ಸಿಬ್ಬಂದಿ ತಂಡ ಘಟನಾ ಸ್ಥಳಕ್ಕೆ ಪರಿಶೀಲಿಸಿದ್ದಾರೆ,ಪೊಲೀಸ್ ವಾಹನ ಕಂಡ ಆರೋಪಿಗಳು ಪಲಾಯನಗೈದಿದ್ದಾರೆ.ಆರೋಪಿಗಳನ್ನು ಚೇಸ್ ಮಾಡಲೆತ್ನಿಸಿದ್ದು ವಾಹನ ರಸ್ಥೆಪಕ್ಕದ ಗುಂಡಿಗೆ ಬಿದ್ದಿದ್ದು,ವಾಹನ ಜಖಂಗೊಂಡಿದೆ ಈ ಸಂದರ್ಭದಲ್ಲಿ ಪೊಲಿಸ್ ರು ಹಾಗೂ ಆರೋಪಿಗಳ ನಡುವೆ ಘರ್ಷಣೆ ನಡೆದಿದ್ದು.ಎಎಸ್ಐ ರಾಮಚಂದ್ರಪ್ಪ ಹಾಗೂ ಪೇದೆ ಮಹಾಂತೇಶ ಗಾಯಗೊಂಡಿದ್ದು ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ,ಘಟನಾ ಸ್ಥಳಕ್ಕೆ ಡಿವೈಎಸ್ಪಿ ಹಾಲಮೂರ್ತಿರಾವ್ ಸಿಪಿಐ ನಾಗರಾಜ್ ಕಮ್ಮಾರ್ ಹಾಗೂ ಪಿಎಸ್ಐ ಕಿರಣ್ ಕುಮಾರ ಭೆಟ್ಟಿನೀಡಿ ಪರಿಶೀಲಿಸಿದ್ದಾರೆ.ಓರ್ವ ಆರೋಪಿ ತಪ್ಪಿಸಿಕೊಂಡಿದ್ದು ಪತ್ತೆಗಾಗಿ ಬಲೆಬೀಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
