ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು ನೇಕಾರ ಸಮುದಾಯಕ್ಕೆ 2ಎ ಪ್ರವರ್ಗದಲ್ಲಿ ಶೇ. 6 ರಷ್ಟು ಒಳಮೀಸಲಾತಿ ನೀಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಪ್ರತಿಭಟನೆ. ಮೀಸಲಾತಿ ಹಾಗೂ ನೇಕಾರ ನಿಗಮ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ತಾಲೂಕು ನೇಕಾರರ ಸಮುದಾಯಗಳ ಒಕ್ಕೂಟದಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಪಟ್ಟಣದ ನುಂಕಪ್ಪನ ಕಟ್ಟೆಯಿಂದ ಮಂಗಳವಾರ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ನೇಕಾರ ಸಮುದಾಯದ ಮುಖಂಡರು ತಾಲೂಕು ಕಚೇರಿ ಆವರಣದಲ್ಲಿ ಸಭೆ ನಡೆಸಿ ಮನವಿ ಸಲ್ಲಿಸಿದರು. ನೇಕಾರ ಸಮುದಾಯದಲ್ಲಿ ಪದ್ಮಶಾಲಿ, ಪಟ್ಟಸಾಲಿ, ದೇವಾಂಗ, ಕುರುಹಿನ ಶೆಟ್ಟಿ, ಸ್ವಕುಳ ಸಾಳಿ, ತೊಗಟವೀರ ಹಟಗಾರ ಜಾಡ, ನೇಯ್ದೆ ಜೇಡ ಎನ್ನುವ 26 ಒಳಪಂಗಡಗಳು ಹಿಂದುಳಿದ 2ಎಅಡಿಯಲ್ಲಿ ಇದ್ದು, ಬಹುತೇಕರು ಕೈಮಗ್ಗಗಳಿಂದ ಜೀವನಷನಡೆಸುತ್ತಿದ್ದಾರೆ. ಕಾಲ ಬದಲಾದಂತೆ ಬೆಲೆ ಏರಿಕೆ ಮತ್ತು ಇನ್ನಿತರೆ ಕಾರಣಗಳಿಂದ ನೇಕಾರಿಕೆ ಕಡಿಮೆಯಾಗಿ ಇಡೀ ಸಮುದಾಯ ಕೂಲಿ ಮಾಡಿ ಜೀವನ ನಡೆಸುವಂತಾಗಿದೆ. ಜತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದು, ನೇಕಾರರ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದರು. ನೇಕಾರ ಸಮುದಾಯ ಈಗಾಗಲೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದರೂ, ಪ್ರಬಲ ಸಮುದಾಯಗಳಜತೆಯಲ್ಲಿ ನೇಕಾರ ಸಮುದಾಯ ಪೈಪೋಟಿ ಮಾಡಲಾಗದೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲದಾಗಿದೆ. ಸರ್ಕಾರ ಈಗಾಗಲೇ ಜಾರಿಷಮಡಿರುವ ಕೈಮಗ್ಗ ನಿಗಮ, ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದಿಂದ ನೇಕಾರಿಕೆ ಮಾಡುವಂತ ಎಲ್ಲ ವರ್ಗಕ್ಕೂ ಅನುಕೂಲವಾಗುತ್ತಿರುವುದರಿಂದ ಪ್ರತ್ಯೇಕವಾಗಿ ನೇಕಾರ ಸಮುದಾಯಕೆ ಲಾಭವಾಗುತ್ತಿಲ್ಲ. ಹಾಗಾಗಿ, ಸರ್ಕಾರ ಕೂಡಲೆ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ನೇಕಾರ ಸಾಲ ಮನ್ನಾ ಯೋಜನೆಯನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೂ ವಿಸ್ತರಿಸುವ ಜತೆಗೆ ಸಹಕಾರ ಬ್ಯಾಂಕ್‌ಗಳಲ್ಲಿ ಕ್ಯೂರಿಟಿ ಹಿತವಾಗಿ ಸಾಲ ನೀಡಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ,ಪಂಗಡಗಳಿಗೆ ನೀಡುವ ಉದ್ಯೋಗ, ವಿದ್ಯಾರ್ಥಿ ವೇತನ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸಿ ನೇಕಾರರ ಉದ್ಯಮಕ್ಕೆ ಪವರ್ ಲೂಮ್ ಘಟಕಗಳನ್ನು ಸ್ಥಾಪಿಸಲು ನೇಕಾರ ಸಮುದಾಯದ 26 ಪಂಗಡಗಳಿಗೂ ಶೇ.90% ಸಹಾಯಧನ ತಹಸೀಲ್ದಾರ್ ಕಲ್ಪಿಸಬೇಕು, ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಇಲಾಖೆ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಆನಂದ ಮೂರ್ತಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನೇಕಾರ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಸಿ.ಮಂಜುನಾಥ .ಟಿ.ಎನ್ ಶ್ರೀನಿವಾಸ, ಜಿಂಕಾ ಶ್ರೀನಿವಾಸ ಮೂರ್ತಿ, ಡಿ ಎಂ,ಈಶ್ವರಪ್ಪ, ಎಂ.ಸಿ ದೇವದಾಸ್, ಜಿಂಕಾ ನರಸಿಂಹ ಮೂರ್ತಿ, ಅಶೋಕ ಗಾಯಕವಾಡ್ ಡಾ.ಜ್ಞಾನದೇವ್, ಶಿವಾಜಿ ವಾಂಜೆ, ಬಿ.ಎಸ್. ಮಲ್ಲೇಶಪ್ಪ ಬಿ.ಟಿ.ಚನ್ನಬಸಪ್ಪ, ಎ.ಟಿ.ನಾಗರಾಜ. ಬಿ.ಆರ್.ಕೇಶವಮೂರ್ತಿ,ಕಿರಣ್, ಗೋವಿಂದಪ್ಪ ಗಾಯಕವಾಡ್, ಏ.ದಿನೇಶ, ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
