ವರದಿ. ಬಸವರಾಜ್ ಹಿರೇಮಠ್

ಲಿಂಗಸಗೂರು
ಪೋಲಾಗುತ್ತಿರುವ ನೀರು. ಲಿಂಗಸುಗೂರು ಪುರಸಭೆಯ ದಿವ್ಯ ನಿರ್ಲಕ್ಷ.!!
ಮನುಷ್ಯನಿಗೆ ಮೂಲಭೂತ ಅವಶ್ಯಕತೆಗಳಲ್ಲಿ ನೀರು ಪ್ರಮುಖವಾದದ್ದು .
ಬೇಸಿಗೆ ಬಂತೆಂದರೆ ಎಲ್ಲಡೆಯೂ ನೀರಿನ ಆಹಾಕಾರ ಪ್ರಾರಂಭವಾಗುತ್ತದೆ .
.ಅಂತದರಲ್ಲಿ ಲಿಂಗಸುಗೂರು ಪಟ್ಟಣ ಸೇರಿದಂತೆ ಅನೇಕ ಕಡೆ ನೀರು ಸರಬರಾಜು ಪೈಪುಗಳು ಹಾಳಾಗಿ ಅಲ್ಲಲ್ಲಿ ನೀರು ಪೋಲಾಗುತ್ತಿದೆ .
ಕಳೆದ ಒಂದು ವಾರದಿಂದ ನಗರದ ಸಹಾಯಕ ಆಯುಕ್ತರ ಕಚೇರಿಯ ಮುಂದೆ ಪಹಣಿ ವಿತರಣ ಕಚೇರಿಯ ಪಕ್ಕ ನೀರು ಸರಬರಾಜು ಪೈಪು ಹೊಡೆದು ಸಾಕಷ್ಟು ಪ್ರಮಾಣದ ನೀರು ಪೋಲಾಗುತ್ತಿದೆ. ಇದನ್ನು
ಯಾವೊಬ್ಬ ಅಧಿಕಾರಿಗಳು ಗಮನ ಹರಿಸದಿರುವುದು ದುರದೃಷ್ಟಕರ .ಇಂತಹ ನಿರ್ಲಕ್ಷತನದಿಂದ ಸಾರ್ವಜನಿಕರಿಗೆ ನೀರಿನ ಅಭಾವ ಉಂಟಾಗುತ್ತಿದೆ.
ಈಗಾಗಲೇ ಲಿಂಗಸುಗೂರಿನ ಪುರಸಭೆ ವ್ಯಾಪ್ತಿಗೆ ಬರುವ ಕರಡಕಲ್ಲ. ಕಸಬಾ ಲಿಂಗಸೂರು. ಮತ್ತು ಲಿಂಗಸ್ಗೂರು ನಗರಕ್ಕೆ
ಮೂರು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ
ಇದನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರ ವರ್ಗದವರು ಮತ್ತು ಜನಪ್ರತಿನಿಧಿಗಳು ಕುಂಭಕರ್ಣನ ಗಾಢ ನಿದ್ರೆಗೆ ಜಾರಿದ್ದಾರೆ.
ಶೀಘ್ರವೇ ಪಟ್ಟಣದ ಅನೇಕ ಕಡೆ ನೀರು ಪೋಲಾಗುವುದನ್ನು ತಡೆದು. ಪುರಸಭೆಯವರು ಮತ್ತು ಜನಪ್ರತಿನಿಧಿಗಳು ಲಿಂಗಸೂರು ಜನತೆಗೆ ಪ್ರತಿದಿನವೂ ಕುಡಿಯುವ ನೀರು ಲಭಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು
ಆಗ್ರಹಿಸುತ್ತಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
