ಕಮಲಾಪುರ ಬಾಲಕಿ ಕಾಣೆ ಪತ್ತೆಗಾಗಿ ಪ್ರಕಟಣೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಕಮಲಾಪುರ:ಬಾಲಕಿ ಕಾಣೆ ಪತ್ತೆಗಾಗಿ ಪ್ರಕಟಣೆ*<>ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ,ಮೂಲ ಸ್ಥಾನದ ಬಾಲಕಿ ಕಾಣೆಯಾಗಿರುವುದಾಗಿ ಪ್ರಕರಣ ದಾಖಲಾಗಿದೆ.ಧಾರವಾಡ ಜಿಲ್ಲೆ ಅಳ್ಳಾವರ ತಾಲೂಕು ಹೊನ್ನಾಪುರ ಗ್ರಾಮದ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ವಾಸವಿದ್ದು,ಅಲ್ಲಿಯೇ ಕೂಲಿಕೆಲಸ ಮಾಡುತ್ತಿದ್ದ ಕುಟುಂಬದ 13ವರ್ಷದ ಬಾಲಕಿ ಜ 26ರಂದು ಕಾಣೆಯಾಗಿರುವ ಕುರಿತು. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ.
*ಕಾಣೆಯಾದ ಬಾಲಕಿ ಚಹರೆ*-ವಯಸ್ಸು 13,ಎತ್ತರ 4.5ಅಡಿ,ಸಾಧಾರಣ ಮೈಕಟ್ಟು,ಕಂದು ಮೈಬಣ್ಣ,ದುಂಡು ಮುಖ,ಕಪ್ಪು ಕೂದಲು,ತುಟಿ ಕೆಳಗೆ ಕಪ್ಪು ಮಚ್ಚೆ ಇುತ್ತದೆ.ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ,ಹಸಿರು ಬಣ್ಣದ ಚೂಡಿದಾರ ಮತ್ತು ಕಪ್ಪು ಬಣ್ಣದ ವೇಲು ಧರಿಸಿರುತ್ತಾಳೆ.ಈ ಮೇಲ್ಕಂಡ ಬಾಲಕಿಯ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.ಅಥವಾ08394 241240ಗೆ ಸಂಪರ್ಕಿಸಬಹುದಾಗಿದೆ ಎಂದು ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend