ಅಂಗಿಲ್ಲದೆ ನಡೆಯುತ್ತಿದೆ ಹಂದಿಗುಂದ ಗ್ರಾಮಪಂಚಾಯಿತಿಯಲ್ಲಿ ಅವ್ಯವಹಾರದ ಕಂತೆ…!!”

ವರದಿ. ಎಚ್ಚರಿಕೆ ವಾರ ಪತ್ರಿಕಾ ವರದಿಗಾರ

ರಾಜ್ಯ ಸರ್ಕಾರ ಹತ್ತು ಹಲವು ಯೋಜನೆಗಳನ್ನು ನಮ್ಮ ಒಂದು ಸಾರ್ವಜನಿಕರ ಒಂದು ಅನುಕೂಲಕ್ಕೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಬಳುವಳಿಯಾಗಿ ಕೊಟ್ಟರು, ಕೆಲವು ದುಷ್ಟ ಅಧಿಕಾರಿಗಳು ತಮ್ಮ ಒಂದು ಅನುಕೂಲಕ್ಕೆ ಕೊಳ್ಳೇಹೊಡೆದು ತಮ್ಮ ಒಂದು ಅನುಕೂಲಕ್ಕೆ ತಕ್ಕಂತೆ ಅದಲು ಬದಲು ಮಾಡಿ ಸಾರ್ವಜನಿಕರ ಕಣ್ಣಿಗೆ ಮಣ್ಣೇರುಚುವ ಕೆಲಸ ಮಾಡುವುದಲ್ಲದೆ ಸರ್ಕಾರಕ್ಕೆ ಕಣ್ಣುಮುಚ್ಚಾಲೆ ಆಟವನ್ನು ಆಡುವುದು ಎಷ್ಟು ಸರಿ ಏಳಿ ಮತ್ತು ನಮ್ಮ ಒಂದು ಬಡ ಜನರ ಬದುಕನ್ನು ಮಟಕುಗೊಳಿಸಿ ಅವರ ಒಂದು ನೋವಿನ ಜೀವನದ ಮೇಲೆ ತಮ್ಮ ನಗುವನ್ನು ನೋಡುವುದು ಎಷ್ಟು ಸರಿ ನೀವೇ ಹೇಳಿ, ಮತ್ತು ಇವರ ಒಂದು ಕಳ್ಳತನವನ್ನು ಯರು ಸಹ ಬಯಲು ಮಾಡಬಾರದು ಎನ್ನುವ ಒಂದು ದುರು ದ್ದೇಶದಿಂದ ಸಂಘಟನೆಯನ್ನು ಕಟ್ಟಿಕೊಂಡು ತಾವುಗಳು ಸೇಫ್ ಆಗಿ, ಸಾರ್ವಜನಿಕರ ಜೀವನವನ್ನು ಬೀದಿಗೆ ತಳ್ಳುವುದು ಎಷ್ಟು ಸರಿ ಹೇಳಿ.

ಇದಕ್ಕೆಲ್ಲ ಕುಮ್ಮಕ್ಕು ಎಂಬಂತೆ ಸಂಬಂಧ ಪಟ್ಟ ಸಚಿವರ ಸಾತು ಏನಿದು ವಿಪರ್ಯಾಸ ಅಂದರೆ ತಾವೇನು ತಪ್ಪುಗಳನ್ನು ಮಾಡಿದರು ಬೇರೊಬ್ಬರೂ ನಮ್ಮ ಮೇಲೆ ಎರಗಬಾರದು ಎನ್ನುವ ಒಂದು ಸಂಚಿನ ಜೇಡರ ಬಲೇ ಇದಕ್ಕೆಲ್ಲ ನಮ್ಮ ಘನತೆಯೇತ್ತ ಸರ್ಕಾರ ಕುಮ್ಮಕ್ಕನ್ನು ಕೊಡದೆ, ನ್ಯಾಯಲಯ ನೀಡಿರುವ ಒಂದು ನಿಲುವಿನಂತೆ ಅಂದರೆ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು ತಮ್ಮ ಒಂದು ಒಳಿತಿಗಾಗಿ ಸಂಘಟನೆಗಳನ್ನು ಕಟ್ಟಬಾರದು ಎನ್ನುವ ಒಂದು ನಡೆಗೆ ಬೆನ್ನೆಲುಬಾಗಿರಲಿ ಎನ್ನುವುದೇ ನಮ್ಮ ಒಂದು ಉದ್ದೇಶ.
ಅದೇನೇ ಇರಲಿ ಈಗ ನಾವು ಹೇಳಹೊರಟಿರುವ ಗ್ರಾಮಪಂಚಾಯಿತಿ ಇರುವುದು, ಬೆಳಗಾವಿ ಜಿಲ್ಲೆಯ, ರಾಯಬಾಗ ತಾಲೂಕಿನ, ಹಂದಿಗುಂದ ಎನ್ನುವ ಒಂದು ಗ್ರಾಮಪಂಚಾಯಿತಿಯ ಅಡ್ನಾಡಿ ಅವ್ಯವಸ್ಥೆಯ ಬಗ್ಗೆ ಈ ಒಂದು ಗ್ರಾಮಪಂಚಾಯಿತಿಯಲ್ಲಿ ಸರಿಸುಮಾರು 2.5ಕೋಟಿಗೂ ಅಧಿಕವಾದ ಸರ್ಕಾರದ ಹಣ ದುರುಪಯೋಗವಾಗಿದೆ ಎನ್ನುವುದು ಸಾರ್ವಜನಿಕರ ಹಾಗೂ ಸಾಮಾಜಿಕ ಹೋರಾಟಗಾರರ ಒಂದು ಅಳಲು.
ಈ ಒಂದು ಗ್ರಾಮಪಂಚಾಯಿತಿಯಲ್ಲಿ ನರೇಗಾ ಯೋಜನೆಯಿಂದ ಇಡಿದು, ನಡೆದಾಡುವ ರಸ್ತೆಯ ತನಕ ಲಪಂಗ ಅಧಿಕಾರಿಗಳಿಂದ ಲೂಟಿ ಲೂಟಿ ಎನ್ನುತ್ತಾರೆ ಅಲ್ಲಿನ ಗ್ರಾಮದ ಗ್ರಾಮಸ್ಥರು.

ಸುಮಾರು ಅಂದರೆ ಸಾರ್ವಜನಿಕರ ಸ್ವತ್ತಾದ ಶಾಲೆಯ ಅಂದರೆ ಸಾರ್ವಜನಿಕರ ವಿದ್ಯಾದೇಗುಲದ ಆಟದ ಬಯಲಿನಿಂದ ಇಡಿದು, ಬಯಲು ಮುಕ್ತ ಶೌಚಾಲಯದ ವರೆಗೂ ಅವ್ಯವಹಾರದ ಆಗರ ನಡೆದಿದೆ ಇದನ್ನೆಲ್ಲಾ ಹಲವು ಮಾಧ್ಯಮಗಳಲ್ಲಿ ಸುದ್ದಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಅನ್ನುತ್ತಾರೆ ಅಲ್ಲಿನ ಗ್ರಾಮದ ಗ್ರಾಮಸ್ಥರು ಆಗೂ ಶಾಲಾ ಸಿಬ್ಬಂದಿಗಳು. ಇದನ್ನೆಲ್ಲಾ ನೋಡಿದರೆ ನಮ್ಮ ಸರ್ಕಾರಿ ಅಧಿಕಾರಿಗಳು ನಮಗಿರುವುದು ಸುಮ್ಮನೆ ವ್ಯರ್ಥ ಅನ್ನುವುದರಲ್ಲಿ ಅನುಮಾನವೇ ಇಲ್ಲ ಇಂತವರ ಬೆಂಬಲಕ್ಕೆ, ಪಂಚಾಯ್ತಿ ಅಭಿರುದ್ದಿ ಅಧಿಕಾರಿಗಳ ಸಂಘಟನೆ ಬೇರೆ ಕೇಡು ಅಲ್ವಾ ಇವರೆಲ್ಲ ಮಾಡಿರುವ ಅಗರಣವನ್ನು ಮುಚ್ಚಿಹಾಕಲು ಇದು ಬೇರೆ ಕೇಡು.
ಇನ್ನೂ ಇದೆ ನೋಡಿ ಇಲ್ಲಿನ ಗ್ರಾಮಪಂಚಾಯಿತಿಯ ಭ್ರಷ್ಟಾಚಾರದ ಚರಿತ್ರೆ ನರೇಗಾ ಯೋಜನೆಯನ್ನು ನಾಲಿಗೆಗೆ ನಿಗುವ ತನಕ ನುಂಗಿ ನಿರುಕುಡಿದಿರುವರು ಇಲ್ಲಿನ ಗ್ರಾಮಪಂಚಾಯಿತಿಯ ಆಡಳಿತಧಿಕಾರಿಗಳು ಇದಕ್ಕೆಲ್ಲ “ಆಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿಯಾಗಿ ಇಲ್ಲಿನ ಮೇಲಾಧಿಕಾರಿಗಳ ಕುಮ್ಮಕ್ಕು “ಹೇಗಿದೆ ಅಲ್ವಾ ನಮ್ಮ ರಾಜ್ಯದ ಸಾರ್ವಜನಿಕರ ಪಾಡು.

ಕೆಲಸವನ್ನು ಮಾಡದೇ ಹತ್ತು ಹಲವು, ಸರ್ಕಾರದ ಬಿಲ್ ಗಳನ್ನು ನುಂಗಿ ನೀರನ್ನು ಕುಡಿದಿರುವ ಖದೀಮರು ಸುಮಾರು ಬಡ ಜನಗಳ ಬಾಯಿಗೆ ಮಣ್ಣುನ್ನು ಹಾಕಿ ತಾವುಗಳು ಮಾತ್ರ ಅಲ್ಲಿನ ಸರ್ಕಾರಿ ಅಧಿಕಾರಿಗಳ ಒಂದು ದುರಡಳಿತದ ಒಂದು ಸದುಪಯೋಗವನ್ನು ಪಡೆದುಕೊಂಡು ಸಂಪನ್ನರಂತೆ ಇರುವುದನ್ನು ನೋಡಿದರೆ ಅಲ್ಲಿರುವ ಸಾರ್ವಜನಿಕರು ಮಾತ್ರ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಯಂತ್ರಗಳಂತೆ ಮತವನ್ನು ಹಾಕಿ ಮಾತು ಬಾರದೇಇರುವರ ರೀತಿಯಲ್ಲಿ ಇರುವುದು ಎಷ್ಟು ಸರಿ ಹೇಳಿ, ಇದೆಯಾ ನಮ್ಮ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ಇದು ನಮಗೆ ಬೇಕಾ ಎನ್ನುವ ಒಂದು ಅನುಮಾನವಂತೂ ಮೂಡುವುದರಲ್ಲಿ ಅನುಮಾನವೇ ಇಲ್ಲ ಬಿಡಿ ಇನ್ನೂ ಇದೆ ನೋಡಿ ಇಲ್ಲಿನ ಅವ್ಯವಸ್ಥೆಯ ಆಗರ.

ಯಂತ್ರಗಳಿಂದ ಕೆಲಸವನ್ನು ಮಾಡಿಸಿ ಬಿಲ್ ಅನ್ನು ಎತ್ತಿಕೊಂಡು ಗುಳುಂ ಮಾಡಿ ನೋಡುವವರ ಕಣ್ಣಿಗೆ ಮಾತ್ರ ಸಾಚಾಗಳಂತೆ ವರ್ತನೆಮಾಡುವುದು ಎಷ್ಟು ಸರಿ ಏಳಿ, ಇದನ್ನೆಲ್ಲಾ ಕೆಳಲು ವಿದ್ಯಾವಂತ ಯುವಕರು ಮುಂದಾದರೆ ಅವರಿಗೆ ಇಲ್ಲ ಸಲ್ಲದ ಬೆದರಿಕೆ ಹೊಡ್ದುವ ಪುಡಾರಿ ರಾಜಕೀಯ ವ್ಯಕ್ತಿಗಳ ತೊಲ್ಬಾಳಕ್ಕೆ ಅಲ್ಲಿನ ಅಧಿಕಾರಿಗಳ ಕುಮ್ಮಕ್ಕು ಇದೆ ನೋಡಿ ನಮ್ಮ ರಾಜ್ಯದ ಅವ್ಯವಸ್ಥೆಯ ಆಗರ,ಇದನೆಲ್ಲ ನೋಡಿ ನೋಡದೆ ಇದ್ದರೆ ಮಾತ್ರ ನಮ್ಮಂತ ಸಮಾಜ ಸೇವಕರಿಗೆ ಉಳಿಗಾಲ ಇಲ್ಲದಿದ್ದರೆ ಅಳಿಗಾಲ ಎನ್ನುತ್ತಾರೆ ಇಲ್ಲಿನ ಕೆಲ ಸಮಾಜ ಸೇವಕರು, ಮತ್ತು ಕೃಷಿಹೊಂಡ ಕಾಮಗಾರಿಯನ್ನು ಜನಗಳಿಂದ ಕೆಲಸವನ್ನು ಮಾಡಿಸಿ ಉದ್ಯೋಗಕೊಡದೆ ಜೆಸಿಬಿ ಯಂತ್ರಗಳ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ದುರ್ಬಳಕೆ ಮಾಡಿರುವ ಹಲವಾರು ಸುಮಾರು ಉದಾಹರಣೆಗಳು ಸಾಕಷ್ಟಿದ್ದರು ಸಹ ನೋಡುಗರು ಮಾತ್ರ ಮಾತುಗಳು ಬಾರದೇ ಆಗೇ ಇರಬೇಕು ಇಲ್ಲವಾದರೆ ಜೀವದ ಆಸೆ ಬಿಡಬೇಕು ಎನ್ನುತ್ತಾರೆ ಕೆಲವರು.

ಸುಮಾರು ಕೆಲಸಗಳನ್ನು ಮಾಡದೇ ಅಲವು ಬಿಲ್ ಗಳನ್ನು ತೆಗೆದುಕೊಂಡು ನಾನೇ ರಾಜ ಎನ್ನುವಂತ್ತಿದ್ದಾರೆ ಇಲ್ಲಿನ ಹಲವು ಖದೀಮರು ಮತ್ತು ಹಲವು ಕಳಪೆ ಕಾಮಗಾರಿಗಳನ್ನು ಮಾಡಿ ಸ್ಥಳೀಯರ ಆಕ್ರೋಶಕ್ಕೆ ಕೂಡ ಒಳಗಾಗಿರುವುದುoಟು ಇವನ್ನೆಲ್ಲ ನೋಡಿದರೆ ಇಂತಹ ಒಂದು ದುರಡಾಳಿತ ವ್ಯವಸ್ಥೆ ಬೇಕಾ ನಮ್ಮ ಒಂದು ಸಮಾಜಕ್ಕೆ ಮತ್ತು ಇದಕ್ಕೆಲ್ಲ ಕೊನೆಯಾವಾಗ ಎನ್ನುವ ಒಂದು ಪ್ರಶ್ನೆ ಮಾತ್ರ ನಮ್ಮಲ್ಲಿ ಹಾಗೆ ಉಳಿಯುದು ಅನ್ನುವುದರಲ್ಲಿ ಅನುಮಾನವೇ ಇಲ್ಲ ಬಿಡಿ ನೋಡೋಣ ಇಂತಹ ಭ್ರಷ್ಟ ಅಧಿಕಾರಿಗಳ ಆಡಳಿತಕ್ಕೆ ಕೊನೆಯವಾಗ ಎನ್ನುವುದನ್ನು ಕಾಯ್ದು ನೋಡೋಣ….
ಇನ್ನೂ ಸುದ್ದಿಯನ್ನು ಬಿತ್ತರಿಸಲಾಗುವುದು ಮುಂದಿನ ಸಂಚಿಕೆಯಲ್ಲಿ  ಬಿತ್ತರಿಸಲಾಗುವುದು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend