ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ.1.2.2021. ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಸಿದ್ದಾಪುರ*
*ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ:—- ತಾಲೂಕಿನ ಸಿದ್ದಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದರು. ಪ್ರಾರಂಭದಲ್ಲಿಯೇ ಸಿದ್ದಾಪುರ ಗ್ರಾಮದಿಂದ ಗುಂಡುಮುಣುಗು ಗ್ರಾಮಪಂಚಾಯಿತಿ ಗೆ ಆಯ್ಕೆಯಾಗಿರುವ ನೂತನ ಸದಸ್ಯರಾದ ವಿಜಯಕುಮಾರ್ ತಮ್ಮ ಮಗುವಿಗೆ ಪೋಲಿಯೋ ಹನಿ ಹಾಕಿಸುವುದರ ಮೂಲಕ ಇತರ ಪೋಷಕರಿಗೆ ಪ್ರೇರಣೆಯಾದರು ಸಿದ್ದಾಪುರ ಗ್ರಾಮದ ಆಶಾ ಕಾರ್ಯಕರ್ತೆ ಯಾದ ಗೀತಮ್ಮ ನವರು ಹಾಗೂ ಅಂಗನವಾಡಿ ಕರ್ತೆಯರದ ನಂದಿನಿ ಮತ್ತು ಭಾಗ್ಯಮ್ಮನ ವರು ಮಕ್ಕಳಿಗೆ ನಿಯಮಾನುಸಾರ ಪೋಲಿಯೋ ಹನಿ ಹಾಕಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಗಂಗಮ್ಮ ನವರು ವರದಿಗಾರರಾದ ಡಿಎಂ ಈಶ್ವರಪ್ಪ. ಈರಮ್ಮ ಮಹಿಳೆಯರು ಮಕ್ಕಳು ಸೇರಿದಂತೆ ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
