;

ಸಮಾಜಮುಖಿ ಟ್ರಸ್ಟ್ ಸಹಯೋಗದಲ್ಲಿ ಬಡ ಯುವಕ ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮ….!!!

ಎಚ್ಚರಿಕೆ ಪತ್ರಿಕಾ ವರದಿಗಾರ

ಇಂದು ದಿನಾಂಕ 22/01/2021 ರಂದು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ಕೌಶಲ್ಯ ಕರ್ನಾಟಕ, ಕರ್ನಾಟಕ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ *ಶ್ರೀಮತಿ ಎಂ.ಪಿ. ವೀಣಾ ಮಹಾಂತೇಶ್ ಅಧ್ಯಕ್ಷರು *ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್* ಹರಪನಹಳ್ಳಿ ಇವರ ಸಹಯೋಗದಲ್ಲಿ ಬಡ ಯುವಕ ಯುವತಿಯರಿಗೆ ವಿಶೇಷವಾಗಿ ನಿರುದ್ಯೋಗ ಹೆಣ್ಣು ಮಕ್ಕಳಿಗೆ *ಉಚಿತ ಕೌಶಲ್ಯ ತರಬೇತಿ* ಕಾರ್ಯಕ್ರಮದ ಅಡಿಯಲ್ಲಿ ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 18 ಟೈಲರಿಂಗ್ ತರಬೇತಿ ಕೇಂದ್ರಗಳು ಪ್ರಾರಂಭಗೊಳ್ಳಲಿವೆ . ಮೊದಲ ಹಂತದಲ್ಲಿ ಇಂದು ಈ ಕೆಳಕಂಡ ಗ್ರಾಮಗಳಲ್ಲಿ ಪ್ರಾರಂಭ ಮಾಡಲ್ಪಟ್ಟವು ‌

#ನಂದಿಬೇವೂರು
#ಬಾಗಳಿ
#ಹರಪನಹಳ್ಳಿ
#ದೇವರ ತಿಮ್ಲಾಪುರ
#ಹಾರಕನಾಳು
ಹಂತಹಂತವಾಗಿ ಇನ್ನೂ ಅನೇಕ ಗ್ರಾಮಗಳಲ್ಲಿ ಪ್ರಾರಂಭ ಮಾಡಲಾಗುವುದು. ಹರಪನಹಳ್ಳಿ ತಾಲೂಕಿನ ಜನರ ಏಳಿಗೆಗಾಗಿ ಹಾಗೂ ಶ್ರೇಯೋಭಿವೃದ್ಧಿಗಾಗಿ ಉಚಿತವಾಗಿ ಕೌಶಲ್ಯ ತರಬೇತಿಗಳನ್ನು ಪ್ರಾರಂಭ ಮಾಡಲಾಗುವುದು .ಉದ್ಘಾಟನಾ ಸಮಾರಂಭವನ್ನು ನಂದಿಬೇವೂರು ಗ್ರಾಮದ ಮುಖಂಡರಾದ
ಶ್ರೀಮತಿ ಶೀಲಮ್ಮ ಆರ್ ಎಂ ಗ್ರಾಮ ಪಂಚಾಯಿತಿ ಸದಸ್ಯರು , ಶ್ರೀ ಕಡಬಗೇರಿ ಪಂಚಾಯತಿ ಸದಸ್ಯರು ನಂದಿಬೇವೂರು ತಾಂಡ, ಶ್ರೀ ಕೃಷ್ಣ ನಾಯಕ್ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ನಂದಿಬೇವೂರ್ ತಂಡಾ, ಶಿವರಾಜ್ ಮಚಿಹಳ್ಳಿ ಹಾಗೂ ಬಾಗಳಿ ಮುಖಂಡರಾದ ಶ್ರೀ ಚಿಕ್ಕಳ್ಳಿ ನಾಗಪ್ಪ , ಶ್ರೀ ಬಡವರ ನಾಗರಾಜ, ಶ್ರೀಮತಿ ಉತ್ತಂಗಿ ರೇಣುಕಮ್ಮ ಗ್ರಾಮ ಪಂಚಾಯತಿ ಸದಸ್ಯರು, ಶ್ರೀಮತಿ ಸಾಲಿ ಕೊಟ್ರೇಶಪ್ಪ , ಕರಿಯಮ್ಮ , ಶ್ರೀ ಪರಮೇಶಪ್ಪ, ಶ್ರೀ ಯು.ಕೆ. ಕೊಟ್ರ ಬಸಪ್ಪ , ಶ್ರೀಮತಿ ಪಾರ್ವತಮ್ಮ ಚಲವಾದಿ ಗ್ರಾಮ ಪಂಚಾಯತಿ ಸದಸ್ಯರೂ, ಶ್ರೀ ಯಾಪಾರಿ ಬಸವರಾಜಪ್ಪ, ಶ್ರೀ ನಮ್ಮ ಕುಂದಿ ದಾನಪ್ಪ , ಶ್ರೀ ಕೃಷ್ಣ ಕಣವಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಶ್ರೀ ಪಿಟಿ ಪ್ರವೀಣ್ ನಂದಿಬೇವೂರು ತಂಡ ಗ್ರಾಮ ಪಂಚಾಯತಿ ಸದಸ್ಯರು, ಶ್ರೀ ಲಿಂಗರಾಜ್ ನಾಯಕ್ ಗ್ರಾಮ ಪಂಚಾಮ ಪಂಚಾಯತಿ ಸದಸ್ಯರು, ಶ್ರೀ ಕಬಡಿ ಶಿವಮೂರ್ತಿ, ಶ್ರೀ ಗಂಟೆ ರಾಜಪ್ಪ, ಶ್ರೀ ಹಡಪದ ದ್ವಾರಕಪ್ಪ, ಶ್ರೀಮತಿ ರೇಣುಕಮ್ಮ ಮತ್ತು ಅನೇಕ ಊರಿನ ಮುಖಂಡರು ಯುವಕರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;