ವರದಿ. ವಿರೇಶ್ ಸಂಡೂರು

ಯರದಮ್ಮನಹಳ್ಳಿ:108ನಲ್ಲಿ ಹೆಣ್ಣುಮಗು ಜನನ*<->ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಯರದಮನಹಳ್ಳಿ ಗ್ರಾಮದ, ತುಂಬು ಗರ್ಭಿಣಿ ರಾಜಮ್ಮ ಎಂಬುವರು ಜ22ರಂದು ರಾತ್ರಿ11ಗಂಟೆ ಯಲ್ಲಿ.
108ಅಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸಂಡೂರು ತಾಲೂಕು
ಯರದಮ್ಮನಹಳ್ಳಿ ಗ್ರಾಮದಲ್ಲಿದ್ದ ಅವರಿಗೆ,ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಾಗ 108ಸಂಪರ್ಕಿಸಿದ್ದಾರೆ.
ನೆರವಿಗೆ ಆಗಮಿಸಿದ ಚೋರನೂರು108 ಸಿಬ್ಬಂದಿ,ತುಂಬು ಗರ್ಭಿಣಿ ರಾಜಮ್ಮಳನ್ನು ಚೋರನೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ.
ಬೊಮ್ಮಘಟ್ಟ ಶ್ರೀಹುಲಿಕುಂಟೇಶ್ವರ ದೇವಸ್ಥಾನದ ಹತ್ತಿರ ಕೆರೆ ಏರಿಯ ಮೇಲೆ, 108ವಾಹನ ಚಲಿಸುವಾಗ ವಾಹನದಲ್ಲಿಯೇ ಸುಲಭ ಹೆರಿಗೆಯಾಗಿದೆ.ಈ ಸಂದರ್ಭದಲ್ಲಿ108ಸಿಬ್ಬಂದಿ ಇ.ಎಮ್.ಟಿ.ಹನುಮಂತಪ್ಪ ಹಾಗೂ ಚಾಲಕ ನಾಣ್ಯಾಪುರ ಪ್ರಭು,ಅವರು ಸಮಯ ಪ್ರಜ್ಞೆ ಮತ್ತು ಕರ್ಥವ್ಯ ನಿಷ್ಠೆ ಮೆರೆದಿದ್ದಾರೆ.ತಾಯಿ ರಾಜಮ್ಮ ಅವಳ ಹೆಣ್ಣುಮಗು ಕ್ಷೇಮವಿದ್ದು, ಅವರನ್ನು ಚೋರನೂರು ಅರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.ರಾಜಮ್ಮಳ ಮನೆಯವರು 108ಸಿಬ್ಬಂದಿಯ ಕಾರ್ಯಕ್ಷಮತೆಗೆ,ಮೆಚ್ಚುಗೆ ವ್ಕ್ತಪಡಿಸಿದ್ದಾರೆ ಹಾಗೂ ಕೃತಜ್ಞತೆ ಅರ್ಪಿಸಿದ್ದಾರೆ. ಸಂಘ ಸಂಸ್ಥಗಳ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು 108ಸಿಬ್ಬಂದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
