;

ಹಿರೇಹಳ್ಳಿ ಗ್ರಾಮದ ನೆಲಗೇತನಹಟ್ಟಿ ಬಳಿ ಅನಾಮದೇಯ ಮೃತ ದೇಹ ಪತ್ತೆ!!””

ವರದಿ. ಶಶಿಕುಮಾರ್ ಚಳ್ಳಕೆರೆ

ತಳುಕು : ಇಂದು ಬೆಳಗಿನ ಜಾವ ಹಿರೇಹಳ್ಳಿ ಗ್ರಾಮದ ನೆಲಗೆತ್ತನಹಟ್ಟಿ ಬಸಣ್ಣ ರವರು ಜಮೀನಿನಲ್ಲಿ ಹೋಗುತ್ತಿರುವಾಗ ಹಿರೇಹಳ್ಳಿ ಗ್ರಾಮದ ಸುರಯ್ಯ ರವರ ಜಮೀನಿನ ಹತ್ತಿರ ಎನ್ ಹೆಚ್ 150ಎ ರಸ್ತೆಯ ಎಡಬಾಗದಲ್ಲಿ ಯಾವುದೋ ಅನಾಮಧೇಯ ಹೆಂಗಸಿನ ಮೃತ ದೇಹ ಕಂಡುಬಂದಿದ್ದು ಸದರಿ ಹೆಂಗಸಿನ ಹಣೆಯ ಎಡ ಕಿವಿಯ ಹತ್ತಿರ ರಕ್ತ ಗಾಯವಾಗಿ ಮೆದುಳು ಹೊರ ಬಂದಿದ್ದು ಹಾಗೂ ಕೈ ಕಾಲು ಗಳಿಗೆ ತರಚಿದ ಗಾಯಗಳಾಗಿದ್ದು ಮೃತ ಮಹಿಳೆಗೆ ಸುಮಾರು 35ರಿಂದ40ವರ್ಷ ವಯಸ್ಸಾಗಿರುತ್ತದೆ. ಸುಮಾರು 5ಅಡಿ ಎತ್ತರ 12ಅಡಿ ಇಂಚು ಕಪ್ಪು ಕೂದಲು ಇರುತ್ತದೆ. ಮಹಿಳೆ ಅಲೆಮಾರಿ ಬಿಕ್ಷುಕಿ ಯಾಗಿದ್ದು ಮುಂಜಾನೆ ಸಮಯದಲ್ಲಿ ಯಾವುದೊ ವಾಹನ ಬಳ್ಳಾರಿ ಕಡೆಗೆ ಹೋಗುವಾಗ ಚಾಲಕ ತನ್ನ ವಾಹನವನ್ನು ಅತಿವೇಗ ಆಜಗ್ರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿ ವಾಹನ ನಿಲ್ಲಿಸದೆ ಹೋದ ಪರಿಣಾಮ ಅ ಹೆಂಗಸಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಳುಕು ಪೋಲಿಸ್ ಸಬ್ಇನಸ್ಪೆಕ್ಟರ್ ಮಾರುತಿ ರವರು ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸುತ್ತಾರೆ .

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;