;

ಪ.ಪಂ ಕಾರ್ಯಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತುರ್ತು ಸಭೆ..!!

ಚಿತ್ರದುರ್ಗ: ಮೊಳಕಾಲ್ಲೂರು: ಪಟ್ಟಣದ ಮುಖ್ಯರಸ್ತೆಯ ಮಧ್ಯದಲ್ಲಿ 0.5 ಮೀಟರ್‌ನಲ್ಲಿ ಬೀದಿದೀಪದ ಡಿವೈಡರ್ ನೊಂದಿಗೆ 19.5 ಮೀಟರ್ ರಸ್ತೆ ಅಗಲೀಕರಣ ಕೈಗೊಂಡು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ನರೇಂದ್ರ ತಿಳಿಸಿದರು. ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣ ವ್ಯಾಪ್ತಿಯ ಗಡಿಯಲ್ಲಿರುವ ಎದ್ದುಲಬೊಮ್ಮಯ್ಯನಹಟ್ಟಿ ಯಿಂದ ಐದೂವರೆ ಕಿಮೀವರೆಗೂ ಎರಡೂ ಕಡೆ ಒಟ್ಟು 19.5 ಮೀಟರ್ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಹಾನಗಲ್ ರಸ್ತೆಯ ಮಾರ್ಗದಿಂದ 2 ಕಿಮೀವರೆಗೆ ಚತುಷ್ಪಥ, ನಂತರ ಉಳಿದ 3 ಕಿ.ಮೀ. ವರೆಗೆ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗುವುದು. ಪಟ್ಟಣದ ಪ್ರಮುಖ ರಸ್ತೆಯ ಎರಡೂ ಕಡೆಗೆ ಬೀದಿ ದೀಪಗಳ ಡಿವೈಡರ್ ನಿರ್ಮಿಸಿ ಒಂದು ಕಡೆ 8 ಮೀಟರ್ ದ್ವಿಪಥ ರಸ್ತೆ, ಮತ್ತೊಂದು ಕಡೆ 8 ಮೀಟರ್ ದ್ವಿಪಥ ರಸ್ತೆ ಮತ್ತು ಎರಡೂ ರಸ್ತೆಯ ಒಂದೊಂದು ಬದಿಯಲ್ಲಿ 1.5 ಮೀಟರ್ ನ ಡೈನೇಜ್ ಮತ್ತು ಫುಟ್ ಪಾತ್ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಖಾಸಗಿಯವರ ಜಾಗವನ್ನು ಪಡೆಯದೆ ಸರ್ಕಾರ ರಸ್ತೆಗೆ ಹೆದ್ದಾರಿ ನಿರ್ಮಾಣದ ಕ್ರಿಯಾ ಯೋಜನೆಗೆ ತ್ವರಿತವಾಗಿ ಸಂಬಂತ ಕೇಂದ್ರ ಸಚಿವರ ಮಂಜೂರಾತಿ ಪಡೆದು ಟೆಂಡರ್ ಕರೆದು ಮುಂದಿನ ಮಾರ್ಚ್ ತಿಂಗಳಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ಪಪಂ ಅಧ್ಯಕ್ಷ ಪಿ. ಉಪಾಧ್ಯಕ್ಷೆ ಶುಭಾ ಡಿಶ್ ರಾಜ್, ಸದಸ್ಯ ಎಂ. ಅಬ್ದುಲ್ಲಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತರರಾದ ವರದನಾರಾಯಣ, ನಾಗರಾಜ್, ಮುಖಂಡರಾದ ಗೋಪಾಲ,
ಮೊದಲಾದವರು ಹಾಜರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;