ವರದಿ, ಡಿ, ಎಂ, ಈಶ್ವರಪ್ಪ ಸಿದ್ದಾಪುರ

*ಲೊಟ್ಟನಕೆರೆ:ಹಾವು ಕಚ್ಚಿ ಮಹಿಳೆ ಸಾವು*<->ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕು ಲೊಟ್ಟನಕೆರೆ ಗ್ರಾಮದಲ್ಲಿ, ಮಹಿಳೆ ಯೋರ್ವಳು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಜರುಗಿದೆ. ಗ್ರಾಮದ ಕೆ.ನಿಂಗಮ್ಮ(50) ಹಾವು ಕಚ್ಚಿ ಮೃತಪಟ್ಟಿದ್ದಾಳೆ, ದನಗಳಿಗೆ ತನ್ನ ಕಣದಲ್ಲಿದ್ದ ಮೇವಿನ ಬಣವಿಯಿಂದ ಮೇವು ತೆಗೆದು ಕೊಳ್ಳಲು ಎತ್ನಿಸಿದಾಗ ಘಟನೆ ಜರುಗಿದೆ.
ಬಣವಿಯೊಳಗಿದ್ದ ಹಾವು ನಿಂಗಮ್ಮಳಿಗೆ ಕಚ್ಚಿದೆ,ಕೂಡಲೇ ಚಿತ್ಸೆಗೆಂದು ಕೊಟ್ಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂಧಿಸದೇ ನಿಂಗಮ್ಮ ಮೃತಪಟ್ಟಿದ್ದಾಳೆ, ಈ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
