ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
*ಟಿ.ಹಿರಾಳ್:ಪತ್ನಿ ಹಾಗೂ ಮೂವರು ಮಕ್ಕಳು ಕಾಣೆ,ಪತ್ತೆಗಾಗಿ ಪತಿ ಮನವಿ*<->ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಹಾಗೂ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಹಿರಾಳ್ ಗ್ರಾಮ ವಾಸಿ ಜಹಂಗೀರ್ ನು,ಜ15ರಂದು ಸಂಜೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ. ಜ6ನೇ ತಾರಿಕಿನಿಂದ ತನ್ನ ಪತ್ನಿ ತಬ್ ಸಮ್ ಬಾನು ಹಾಗೂ ಮೂವರು ಮಕ್ಕಳು,ವಾಸದ ಮನೆಯಿಂದ ತವರಿಗೆ ಹೋಗುವುದಾಗಿ ಹೇಳಿ ಹೊರಟಿದ್ದಾಳೆ.ಆದರೆ ಈವರೆಗೂ ಎಲ್ಲೂ ಪತ್ತೆಯಾಗಿಲ್ಲ,ಪತ್ತೆ ಹಚ್ಚಿ ಕೊಡುವಂತೆ ಮನವಿ ಮಾಡುತ್ತಿರುವುದಾಗಿ ಜಹಂಗೀರ್ ಹೇಳಿಕೆ ನೀಡಿದ್ದಾನೆ.ಟಿ.ಹೀರಾಳ್ ಗ್ರಾಮದ ತನ್ನ ವಾಸದ ಮನೆಯಿಂದ ಜ6ರಂದು ,ಪತ್ನಿ ಶ್ರೀಮತಿ ತಬಸಮ್ ಬಾನು(26),ಹೆಣ್ಣು ಮಕ್ಕಳಾದ ಹಾಲೇಷೇಖ್(7)ಫೀಜಾಫರೂಕಿ(5)ಮಗ ಅಜಾನ್ ಖುರೇಷಿ(2)ಈ ಮೂವರು ಮಕ್ಕಳೊಂದಿಗೆ,ತನ್ನ ತವರಿಗೆ ಹುಟ್ಟು ಹಬ್ಬಕ್ಕೆಂದು ತೆರಳುತ್ತಿರುವುದಾಗಿ ಪತ್ನಿ ತಿಳಿಸಿದ್ದಳು.ಅಂದು ಕಾಣೆಯಾದವಳು ಈವರೆಗೂ ಇವರ್ಯಾರೂ ಪತ್ತೆಯಾಗಿರುವುದಿಲ್ಲ,ಕಾರಸೂಕ್ತ ಕ್ರಮಗಳನ್ನು ಕೈಗೊಂಡು ಕಾಣೆಯಾದ ನಾಲ್ವರನ್ನು ಪತ್ತೆ ಮಾಡಿ ಕೊಡಿ ಎಂದು.ಜಹಂಗೀರ್ ಕೂಡ್ಲಿಗಿ ಪೊಲೀಸರಲ್ಲಿ ಮನವಿ ಮಾಡಿದ್ದು,ಹೇಳಿಕೆ ಅನ್ವಯ ಕೂಡ್ಲಿಗಿ ಮುಖ್ಯ ಪೇದೆ ಗುರುಬಸವರಾಜ, ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

