ಭೀಕರ ರಸ್ತೆ ಅಪಘಾತ: ಬಿಎಂಟಿಸಿ ಬಸ್ ಹರಿದು ಯುವತಿ ಸ್ಥಳದಲ್ಲೇ ಸಾವು.!!!!!
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳ ಅಬ್ಬರಕ್ಕೆ ಸಾರ್ವಜನಿಕರು ಬಲಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಇಂದು ಭೀಕರ ಅಪಘಾತ ನಡೆದಿದ್ದು, ಯುವತಿಯೊರ್ವಳ ಮೇಲೆ ಬಸ್ ಹರಿದು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶಿರೀಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಜೆ ಸುಮಾರು 4.30 ರ ಸುಮಾರಿಗೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಹೇಗೆ ನಡೆಯಿತು?
ಉತ್ತರಹಳ್ಳಿ ನಿವಾಸಿಯಾದ ಶಿರೀಷಾ (21) ಅವರು ತಮ್ಮ ಬೈಕ್‌ನಲ್ಲಿ ಶ್ರೀನಿವಾಸಪುರ ಕ್ರಾಸ್ ಮಾರ್ಗವಾಗಿ ತೆರಳುತ್ತಿದ್ದರು. ಅದೇ ದಿಕ್ಕಿನಲ್ಲಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್‌ನ ಹ್ಯಾಂಡಲ್‌ಗೆ ಸಣ್ಣದಾಗಿ ಟಚ್ ಆಗಿದೆ. ಈ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ ಶಿರೀಷಾ ನೇರವಾಗಿ ರಸ್ತೆಗೆ ಬಿದ್ದರು. ಇದೇ ವೇಳೆ ಬಸ್‌ನ ಹಿಂಬದಿಯ ಚಕ್ರ ಆಕೆಯ ತಲೆ ಮತ್ತು ಎದೆ ಭಾಗದ ಮೇಲೆ ಹರಿದು ಹೋಗಿದೆ. ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲೇ ಯುವತಿ ಸಾವನ್ನಪ್ಪಿದ್ದಾರೆ.
ಮೃತೆ ಯಾರು?
ಶಿರೀಷಾ ಅವರು ಉತ್ತರಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರು ಸಮೀಪದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ ಆಗಿದ್ದರು. ಕುಟುಂಬದಲ್ಲಿ ತಾಯಿ, ತಂದೆ ಮತ್ತು ಒಬ್ಬ ಅಣ್ಣ ಇದ್ದಾರೆ. ಮೃತದೇಹವನ್ನು ಆರ್.ಆರ್. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪೊಲೀಸರು ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
