ವಿದ್ಯುತ್ ತಂತಿಯಿಂದ ಬೆಂಕಿ ತಗಲಿ ಬಣವೆ 10ಮೇಕೆಗಳು ಭಸ್ಮ
ಮೊಳಕಾಲ್ಮುರು :-ತಾಲ್ಲೂಕು ಚಿಕ್ಕುಂತಿ ಗ್ರಾಮದ ರೈತ ಭಾಸ್ಕರ್ ಅವರಿಗೆ ಸೇರಿದ ಜಾನುವಾರು ಗಳು ಮತ್ತು ಮೇಕೆಗಳು ಸಾಕಿದ್ದರು ಜಮೀನಿನಲ್ಲಿ ಹಾದು ಹೋಗಿರುವ jsw ಕಂಪನಿಯ ವಿದ್ಯುತ್ ಕಂಬ 33000 ಹೈ ವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶದಿಂದ ಬಣವಿಗೆ ಬೆಂಕಿ ತಗುಲಿ ಮೇವು ಹಾಗೂ 10 ಮೇಕೆಗಳು ಸುಟ್ಟು ಕರಕಲಾಗಿರುವ ಅಪಾರ ಹಾನಿಯಾದ ಘಟನೆ ನಡೆದಿದೆ ಗಡಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಮೀನುಕೆರೆ ಗ್ರಾಮದ ಹೊರ ವಲಯದ ಜಮೀನು ನಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮೇಕೆಗಳು ಸ್ಥಳದಲ್ಲಿಯೇ ಸಜೀವದಹನಗೊಂಡಿದೆ ಹಾಗೂ ಅಪಾರ ಮೇವು ಬೆಂಕಿಗೆ ಆಹುತಿಯಾಗಿದ್ದು, ಅಂದಾಜು ಒಂದು ಲಕ್ಷ .ಗಿಂತ ಹೆಚ್ಚು ಮೌಲ್ಯದ ಹಾನಿಯಾಗಿದೆ.
ಬೆಂಕಿ ಕಾಣಿಸುತ್ತಲೇ ಸುತ್ತಮುತ್ತಲಿನ ಜನರು ದೌಡಾಯಿಸಿ ನಂತರ ಸಾರ್ವಜನಿಕರು ಕೂಡಲೇ ಮೊಳಕಾಲ್ಮುರು ಅಗ್ನಿಶಾಮಕ ಠಾಣೆಗೆ ಸಂಪರ್ಕಸಿ ವಿಷಯ ತಿಳಿಸಿದ್ದರು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು ಇನ್ನು ಮೇಕೆಗಳು ಸುಟ್ಟು ಕರಕಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
