ಚಿಕ್ಕ ಕುಂಬಳಗುಂಟೆ : ಮದ್ಯ ಅಕ್ರಮ ಮಾರಾಟ ತಡೆಯುವಂತೆ ಆಗ್ರಹ…!!!!

ಚಿಕ್ಕ ಕುಂಬಳಗುಂಟೆ : ಮದ್ಯ ಅಕ್ರಮ ಮಾರಾಟ ತಡೆಯುವಂತೆ ಆಗ್ರಹ

ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಚಿಕ್ಕ ಕುಂಬಳಗುಂಟೆ ಗ್ರಾಮದಲ್ಲಿ , ಬಹು ವರ್ಷಗಳಿಂದ ಮದ್ಯ ಅಕ್ರಮ ಮಾರಾಟ ದಂಧೆ ಎಗ್ಗಿಲ್ಲದೇ ಜರುಗುತ್ತಿದ್ದು. ಶೀಘ್ರವೇ
ತಡೆಯಬೇಕೆಂದು , ಅಬಕಾರಿ ಇಲಾಖಾಧಿಕಾರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಸ್ಥರು ಹಾಗೂ ದಲಿತ ಸಮುದಾಯದ ಪ್ರಮುಖರು , ದಲಿತ ಮುಖಂಡರು ಹಾಗೂ ಕ.ದ.ಸಂ.ಸ ಜಿಲ್ಲಾ ಸಂಚಾಲಕರಾದ ಎಸ್.ದುರಗೇಶ ರವರ ನೇತೃತ್ವದಲ್ಲಿ. ಎಪ್ರಿಲ್‌ 2 ರಂದು , ತಮ್ಮ ಹಕ್ಕೋತ್ತಾಯ ಪತ್ರ ನೀಡಿದ್ದಾರೆ.
ಗ್ರಾಮದಲ್ಲಿನ ಕೆಲವೇ ಕೆಲ ಚಿಕ್ಕ ಅಂಗಡಿಮನೆಯಲ್ಲಿ , ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು.ಮತ್ತು ಹಲವಾರು ರಾಷ್ಟ್ರೀಯ ಹೆದ್ದಾರಿಯ ಎಗ್ ರೈಸ್ ಅಂಗಡಿಗಳಲ್ಲಿ ಮದ್ಯಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು ಇದರಿಂದ ಲಾರಿ ಚಾಲಕರು ನಿಲ್ಲಿಸಿ ಮದ್ಯ ಸೇವನೆ ಮಾಡಿ ಚಾಲನೆ ಮಾಡಿ ಹಲವಾರು ಅಪಘಾತಗಳಲ್ಲಿ ಹಲವರ ಪ್ರಾಣ ಕಳೆದುಕೊಂಡ ಘಟನೆಗಳು ನಡೆದರು ಸರಿಯಾದ ಕ್ರಮವನ್ನು ಕೈಗೊಳ್ಳಬೇಕು ಅಬಕಾರಿ ಇಲಾಖೆ ಜೊತೆಗೆ ತಾಲೂಕಿನ ಹಲವಾರು ಹಳ್ಳಿಗಳಿಗೆ ಮೋಟಾರ್ ಸೈಕಲ್ ಮೂಲಕ ಮದ್ಯ ರವಾನೆ ಆಗುತ್ತಿರುವುದು ಸಹ ಹಲವಾರು ಸಂಘಟನೆಯವರು ಇದನ್ನು ತಡೆಯಲು ಪೊಲೀಸ್ ಇಲಾಖೆಯ ಗಮನಕ್ಕೆ ತರುವುದರ ಜೊತೆಗೆ ಅಬಕಾರಿ ಇಲಾಖೆಗೂ ತಿಳಿಸಿದ್ದಾರೆಂದು ಏಳುತ್ತಾರೆ ಆದರೆ ಏನೂ ಪ್ರಯೋಜನವಾಗಿಲ್ಲ ಅನ್ನುತ್ತಾರೆ ಜೊತೆಗೆ ಮನವಿಯನ್ನು ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಇದರಿಂದ ಮಕ್ಕಳು ಯುವಕರು ಮದ್ಯ ವ್ಯೆಸನಿಗಳಾಗುತ್ತಿದ್ದಾರೆ , ಹಲವು ಬಡ ದೀನ ಕುಟುಂಬಗಳು. ಮದ್ಯ ಸೇವನೆಯ ದಾಸ್ಯತ್ವದಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು , ಕುಟುಂಬ ಸದಸ್ಯರು ಸಾಲದ ಸುಳಿಯಲ್ಲಿ ಸಿಲುಕಿ ನಲುಗುವಂತಾಗಿದ್ದಾರೆ.
ಗ್ರಾಮದಲ್ಲೆಡೆ ಗಲಭೆ ದೊಂಬಿ ಬಡಿದಾಟ ಹೊಡೆದಾಟಗಳಾಗುತ್ತಿದ್ದು , ಗ್ರಾಮದಲ್ಲಿ ನೆಮ್ಮದಿ ಮಾಯವಾಗಿದೆ. ಮಾತ್ರವಲ್ಲ ನೆರೆ ಹೊರೆ ಗ್ರಾಮಗಳ ಹಲವರು , ಗ್ರಾಮಕ್ಕಾಗಮಿಸಿ ಮದ್ಯ ಸೇವಿಸಿ ಗಲಾಟೆಗೆ ಕಾರಣರಾಗುತ್ತಿದ್ದಾರೆ.
ಸಂಬಂಧಿಸಿದಂತೆ ಸಂಬಂಧಿಸಿದ ಅಭಕಾರಿ ಅಧಿಕಾರಿಗಳು , ಶೀಘ್ರವೇ ಮದ್ಯ ಅಕ್ರಮ ಮಾರಾಟಗಾರರನ್ನು ಬಂಧಿಸಿ ಕಾನೂನು ರೀತ್ಯ ಶಿಸ್ಥು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದಲಿತ ಮುಖಂಡರು , ಯುವಕರು , ಮಹಿಳೆಯರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend