ಅಕ್ರಮ ಮರಳು ಅಡ್ಡೆ ಮೇಲೆ ಸಿಪಿಐ ಜಾವೀದ್ ಮುಶಾಪುರೆ ನೇತೃತ್ವದಲ್ಲಿ ದಾಳಿ:ಚಿಲಬಾವಿಯಲ್ಲಿ 110 ಮೆಟ್ರಿಕ್ ಟನ್ ಮರಳು ವಶ…!!!

ಅಕ್ರಮ ಮರಳು ಅಡ್ಡೆ ಮೇಲೆ ಸಿಪಿಐ ಜಾವೀದ್ ಮುಶಾಪುರೆ ನೇತೃತ್ವದಲ್ಲಿ ದಾಳಿ:ಚಿಲಬಾವಿಯಲ್ಲಿ 110 ಮೆಟ್ರಿಕ್ ಟನ್ ಮರಳು ವಶ.

​ಬೆಳಗಾವಿ: ಜಿಲ್ಲೆಯ ಚಿಲಬಾವಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮರಳು ಅಡ್ಡೆಯ ಮೇಲೆ ವಿವಿಧ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಸಂಜೆ ನಡೆದ ಈ ದಿಢೀರ್ ದಾಳಿಯಲ್ಲಿ ಬರೋಬ್ಬರಿ 110 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಕ್ರಮ ದಂಧೆಕೋರರಿಗೆ ಬಿಸಿ ಮುಟ್ಟಿಸಲಾಗಿದೆ.

​ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಬಾವಿ ಗ್ರಾಮದ ಹದ್ದಿಯಲ್ಲಿ ಅಕ್ರಮ ಮರಳು ಸಂಗ್ರಹದ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಇಂದು ಸಂಜೆ 5 ಗಂಟೆ ಸುಮಾರಿಗೆ ಪೊಲೀಸ್, ಕಂದಾಯ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿದರು. ಕಾರ್ಯಾಚರಣೆಯಲ್ಲಿ ಯಮಕನಮರಡಿ ಪೊಲೀಸ್ ಇನ್ಸ್‌ಪೆಕ್ಟರ್ ಜಾವಿದ್ ಎಫ್. ಮುಶಾಪುರಿ, ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಸುಜಿತ್ ಕುಲ್ಕರ್ಣಿ, ಸಲೀಂ ಮುಲ್ಲಾ, ತ್ರಿವಿಕ್ರಮ ಮನುವಾಚಾರ್ಯ ಹಾಗೂ ಲೋಕೋಪಯೋಗಿ ಇಲಾಖೆಯ ಕುಲದೀಪ್ ಸಿಂಗ್ ರಜಪೂತ ಮತ್ತು ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ನೇತ್ರಾವತಿ ನಾಯಕ್ ಪಾಲ್ಗೊಂಡಿದ್ದರು.
​ದಾಳಿಯ ವೇಳೆ ಸ್ಥಳದಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 110 ಮೆಟ್ರಿಕ್ ಟನ್ ಉತ್ತಮ ಗುಣಮಟ್ಟದ ಮರಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಮಣ್ಣು ಮಿಶ್ರಿತವಾಗಿದ್ದ ಮತ್ತು ಬಳಕೆಗೆ ಯೋಗ್ಯವಲ್ಲದ ಸುಮಾರು 30 ಮೆಟ್ರಿಕ್ ಟನ್ ಮರಳನ್ನು ಸ್ಥಳದಲ್ಲಿಯೇ ಜೆಸಿಬಿ ಮೂಲಕ ನೆಲಸಮ ಮಾಡಲಾಯಿತು. ಅಕ್ರಮ ಮರಳು ದಂಧೆಯ ವಿರುದ್ಧ ಅಧಿಕಾರಿಗಳ ಈ ಕಠಿಣ ಕ್ರಮವು ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚಲನ ಮೂಡಿಸಿದ್ದು, ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend