ಬಾಲಕಿಗೆ ಕಚ್ಚಿದ ನಾಗರಹಾವು | ಬಾಯಿಂದಲೇ ವಿಷ ತೆಗೆದ ಶಿಕ್ಷಕ ರವಿಶಂಕರ್‌ ಸಮಯಪ್ರಜ್ಞೆ…!!!!

ಬಾಲಕಿಗೆ ಕಚ್ಚಿದ ನಾಗರಹಾವು | ಬಾಯಿಂದಲೇ ವಿಷ ತೆಗೆದ ಶಿಕ್ಷಕ ರವಿಶಂಕರ್‌ ಸಮಯಪ್ರಜ್ಞೆ | ಇಬ್ಬರಿಗೂ ಚಿಕಿತ್ಸೆ

ಚಿತ್ರದುರ್ಗ: ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ನಾಗರಹಾವು ಕಚ್ಚಿರುವ ಘಟನೆ ಚಿತ್ರದುರ್ಗ ತಾಲೂಕು ಹುಣಸೆಕಟ್ಟೆಯಲ್ಲಿ ನಡೆದಿದೆ.

ಶನಿವಾರ ಬೆಳಗ್ಗೆ ಹುಣಸೆಕಟ್ಟೆ ಸರ್ಕಾರಿ ಶಾಲೆಗೆ ಹೋಗಿದ್ದ ಒಂದನೇ ಬಾಲಕಿ ಸೃಷ್ಟಿಗೆ ದೊಡ್ಡ ನಾಗರಹಾವು ಕಚ್ಚಿದೆ.

ಈ ವಿಷಯ ತಿಳಿದ ಶಿಕ್ಷಕರಿಗೆ ತಿಳಿದಿದ್ದು, ಬಾಲಕಿಯ ಬಳಿ ಬಂದ ಶಿಕ್ಷಕ ರವಿಶಂಕರ್‌ ಬಾಲಕಿಯ ಕಾಲಿನ ಭಾಗಕ್ಕೆ ಹಾವು ಕಚ್ಚಿದ್ದ ಜಾಗಕ್ಕೆ ಬಾಯಿ ಹಾಕಿ ವಿಷ ಹೊರಗೆ ತೆಗೆದಿದ್ದಾರೆ.

ಘಟನೆಯಿಂದ ಅಸ್ವಸ್ಥಗೊಂಡಿದ್ದ ಬಾಲಕಿ ಹಾಗೂ ಶಿಕ್ಷಕ ರವಿಶಂಕರ್‌ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಸದ್ಯ ಬಾಲಕಿ ಸೃಷ್ಟಿ ಹಾಗೂ ಶಿಕ್ಷಕ ರವಿಶಂಕರ್‌ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆ ಕೊಡಿಸುತ್ತಿದ್ದೇವೆ ಎಂದು ಡಿಡಿಪಿಐ ಮಂಜುನಾಥ್‌ ತಿಳಿಸಿದ್ದಾರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend