ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹುಟ್ಟುಹಬ್ಬ ಆಚರಣೆ…!!”

ವರದಿಗಾರರು ಏಳುಕೋಟಿ ದೂಪದಹಳ್ಳಿ

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹುಟ್ಟುಹಬ್ಬ ಆಚರಣೆ
ಹಗರಿಬೊಮ್ಮನಹಳ್ಳಿ : ಇಂದು ಹಗರಿಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ವಕೀಲರು ಆದ ಶ್ರೀ ಕೋರಿ ಗೋಣಿಬಸಪ್ಪ ಅವರ ಜನ್ಮ ದಿನಾಚರಣೆಯನ್ನು, ಮಾನ್ಯ ಕೆ ಎಂ ಎಫ್ ಮಾಜಿ ಅಧ್ಯಕ್ಷರು, ಹಾಗೂ ಮಾಜಿ ಶಾಸಕರಾದ ಶ್ರೀ ಭೀಮಾನಾಯ್ಕ್ ಅವರ ಮನೆ ಹಾಗೂ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಕಾಂಗ್ರೆಸ್ ಪಕ್ಷದ ಹಿರಿಯರು, ಮುಖಂಡರು, ಪುರಸಭೆಯ ಅಧ್ಯಕ್ಷರು ಸದಸ್ಯರುಗಳು,ಗ್ಯಾರಂಟಿ ಸಮಿತಿ ಪದಾಧಿಕಾರಿಗಳು,ಎಲ್ಲರೂ ಸೇರಿ ಕೇಕ್ ಕಟ್ ಮಾಡಿ ಸನ್ಮಾನಿಸಿ ಶುಭ ಹಾರೈಸಿದರು. ರೈತಾಪಿ ಕುಟುಂಬದಲ್ಲಿ ಜನಿಸಿ, ಹೊಲಗದ್ದೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ, ಕಷ್ಟಪಟ್ಟು ಓದಿಕೊಂಡು ಎಲ್ ಎಲ್ ಬಿ ಮುಗಿಸಿಕೊಂಡು, ಬಡವರ ಶೋಷಿತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತ ಕಾನೂನಿನ ಸಹಾಯ ಮಾಡುವುದರ ಜೊತೆಗೆ ತಮ್ಮ ನಾಯಕರಾದ ಶ್ರೀ ಭೀಮ ನಾಯಕ್ ಜೊತೆಗೆ ಪಕ್ಷದ ಸಂಘಟನೆ ಮಾಡುವುದರ ಜೊತೆಗೆ, ಸರ್ವಧರ್ಮದ ನಾಯಕರನ್ನು ಸಮಾನವಾಗಿ ಕಾಣುತ್ತ, ಎಲ್ಲರ ಮೆಚ್ಚಿನ ನಾಯಕನಾಗಿ ಬೆಳೆದಿದ್ದಾರೆ. ಮುಂದೆ ಒಳ್ಳೆಯ ಸ್ಥಾನಮಾನಗಳು ದೊರಕಲಿ ಎಂದು ಭಾಗವಹಿಸಿದ ಎಲ್ಲರೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಶ್ರೀ ಮರಿರಾಮಪ್ಪ, ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀ ಬಾಲಕೃಷ್ಣಬಾಬು ಅವರು ಕಾಂಗ್ರೆಸ್ ವಕ್ತಾರರಾದ ಶ್ರೀ ಪತ್ರೆಶ್ ಹಿರೇಮಠ್ ಅವರು ಮೈನಾರಿಟಿ ಅಧ್ಯಕ್ಷರಾದ ನೂರ್ ಭಾಯ್, ಎಸ್ ಸಿ ಘಟಕದ ಅಧ್ಯಕ್ಷರಾದ ಪ್ರಭು, ಪುರಸಭಾ ಸದಸ್ಯರಾದ ಉಪ್ಪಾರ್ ಬಾಳಪ್ಪ, ತ್ಯಾವಣಿಗೆ ಕೊಟ್ರೇಶ್, ಗುಂಡ್ರು ಹನುಮಂತಪ್ಪ,ಭೀಮಾನಾಯ್ಕ್ ಅವರ ಆಪ್ತ ಸಹಾಯಕ ಸೋಮು ಜೀವಾ, ಪೀಕಾರ್ಡ್ ಬ್ಯಾಂಕ್ ಸದಸ್ಯರಾದ ಗೋಟೂರ್ ಹನುಮಂತ್ ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಆದ ರಾಘು ಉಲವತ್ತಿ, ಗ್ಯಾರಂಟಿ ತಾಲೂಕು ಅಧ್ಯಕ್ಷರಾದ ಗುರುಬಸವರಾಜ್ ಸೊನ್ನದ, ಜಿಲ್ಲಾ ಗ್ಯಾರಂಟಿ ಉಪಾಧ್ಯಕ್ಷರಾದ ಜಂಧಿ ಸಾಹೇಬ್ ಗ್ಯಾರಂಟಿ ಸದಸ್ಯರಾದ ಪರಶುರಾಮ್ ಹೆಗ್ಡಳ್, ಯುವಮುಖಂಡ ಮೇಘರಾಜ್ ಒಂಟಿ, ಕಾರ್ತೀಕ್ ಉಪ್ಪಾರ್, ಮುಖಂಡ ಬಾಗಳಿ ವೆಂಕಟೇಶ್ ಇನ್ನೂ ಮುಂತಾದವರು ಭಾಗವಹಿಸಿ ಮಾನ್ಯ ಕಾಂಗ್ರೆಸ್ ಅಧ್ಯಕ್ಷರ ಜನ್ಮದಿನಾಚರಣೆಯ ಶುಭ ಕೋರಿದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend