;

ಹಿರೇಹೆಗ್ಡಾಳ್ : ಗುಣಮಟ್ಟದ ಆಹಾರ , ಶಿಕ್ಷಣ , ಮೂಲಭೂತ ಸೌಕರ್ಯಗಳನ್ನು ಮಕ್ಕಳಿಗೆ ನೀಡಬೇಕು-ಶಾಸಕ ಡಾ॥ಎನ್ ಟಿ ಶ್ರೀನಿವಾಸ್ ಸೂಚನೆ…!!!

ಹಿರೇಹೆಗ್ಡಾಳ್ : ಗುಣಮಟ್ಟದ ಆಹಾರ , ಶಿಕ್ಷಣ , ಮೂಲಭೂತ ಸೌಕರ್ಯಗಳನ್ನು ಮಕ್ಕಳಿಗೆ ನೀಡಬೇಕು-ಶಾಸಕ ಡಾ॥ಎನ್ ಟಿ ಶ್ರೀನಿವಾಸ್ ಸೂಚನೆ- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮಕ್ಕಳಿಗೆ ಗುಣಮಟ್ಟದ ಆಹಾರ , ಶಿಕ್ಷಣ , ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನೀಡಬೇಕೆಂದು. ಶಾಸಕ ಡಾ॥ಎನ್ ಟಿ ಶ್ರೀನಿವಾಸ್ ರವರು , ವಸತಿ ಶಾಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಸೂಚಿಸಿದರು. ಅವರು ಹಿರೇಹೆಗ್ಡಾಳ್ ಗ್ರಾಮದ ಹೊರವಲಯದಲ್ಲಿರುವ , ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ. ನೂತನವಾಗಿ ಆರಂಭಗೊಳ್ಳಲಿರುವ ವಿಜ್ಞಾನ ಪದವಿ ಪೂರ್ವ ಕಾಲೇಜು ವಿಭಾಗದ ಉದ್ಘಾಟನೆ , ಮತ್ತು ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಹಸಿವು, ಬಡತನ, ಬಾಲ್ಯ ವಿವಾಹ , ಮತ್ತು ಮೌಢ್ಯತೆಗಳನ್ನು ಸಂಪೂರ್ಣವಾಗಿ ತೊಲಗಿಸಲು. ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಅಹಾರ ನೀಡುವಲ್ಲಿ , ಹೆಚ್ಚು ಒತ್ತು ಕೊಡುವುದಾಗಿ ಅವರು ತಿಳಿಸಿದರು. ನಮ್ಮ ವಿದ್ಯಾರ್ಥಿಗಳ ಪೋಷಕರು ವಸತಿ ಶಿಕ್ಷಣಕ್ಕೆ ಕೊಡುವ ಕಾಳಜಿ , ಇಲಾಖೆಗಳ ಸ್ಥಳೀಯ ಅಧಿಕಾರಿಗಳ ಪ್ರೋತ್ಸಾಹ. ಮತ್ತು ಸರ್ಕಾರದ ಉನ್ನತ ಮಟ್ಟದಲ್ಲಿ , ತಾವು ಪಟ್ಟ ಶ್ರಮದ ಫಲಾವಾಗಿ. ವಿಜಯ ನಗರ ಜಿಲ್ಲೆಯ ಪೈಕಿ , ತುರ್ತಾಗಿ ಈ ಭಾಗದ ಶಿಕ್ಷಣದ ಅಗತ್ಯತೆಯನ್ನರಿತು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ , ನೂತನವಾಗಿ ವಿಜ್ಞಾನ ವಿಭಾಗದ ಪದವಿ ಪೂರ್ವ ಕಾಲೇಜು ಪ್ರಾಂರಂಭಿಸಲು ಸಾಧ್ಯವಾಯಿತು ಎಂದರು. ಈ ನಿಟ್ಟಿನಲ್ಲಿ ವಸತಿ ಶಾಲಾಧಿಕಾರಿಗಳು ಹಾಗೂ ಸಿಬ್ಬಂದಿಯವರು , ಮಕ್ಕಳಿಗೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ , ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಸೂಚಿದರು. ಮಕ್ಕಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ನೀಡಬೇಕು , ಮತ್ತು ಅವರಲ್ಲಿ ವೈಯಕ್ತಿಕ ಸುಚಿತ್ವ ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡುವಲ್ಲಿ ಹೆಚ್ಚು ಆಧ್ಯತೆ ಕೊಡಬೇಕೆಂದು ತಿಳಿಸಿದರು. ವಸತಿ ಶಾಲೆಯಲ್ಲಿ ಯಾವುದೇ ರೀತಿಯಲ್ಲಿ , ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾ ತಾಲೂಕು ಅಧಿಕಾರಿಗಳ ಮೇಲಿದೆ. ಮತ್ತು ಪ್ರಾಂಶುಪಾಲರು – ಸಿಬ್ಬಂದಿ ವರ್ಗದವರು , ಅತಿ ಹೆಚ್ಚು ಕಾಳಜಿ ಹೊಂದಿ ಶ್ರದ್ಧೆ ನಿಷ್ಠೆ ಕರ್ಥವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕೆಂದರು.
ವಿಜಯ ನಗರ ಜಿಲ್ಲಾ ಎಸ್. ಟಿ. ಇಲಾಖೆಯ ಅಧಿಕಾರಿಗಳಾದ ರವಿಕುಮಾರ್, ಶಾಲಾ ಶಿಕ್ಷಣ ಇಲಾಖಾ ನಿರ್ದೇಶಕರು. ವಸತಿ ಶಾಲೆಯ ಪ್ರಾಚಾರ್ಯರಾದ ನಾಗರಾಜ ಹವಲ್ದಾರ್, ತಹಶೀಲ್ದಾರರಾದ ವಿ.ಕೆ.ನೇತ್ರಾವತಿ. ಸಮಾಜ ಕಲ್ಯಾಣ ಇಲಾಖೆಯ ಸಹ ನಿರ್ದೇಶಕ ಡಿ.ಜಗದೀಶ , ತಾಲೂಕಿನ ಎಸ್. ಟಿ. ಇಲಾಖಾಧಿಕಾರಿ ಮೆಹಬೂಬ್ ಭಾಷಾ, ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ, ಹಾಗೂ ಸದಸ್ಯರಾದ ಲಕ್ಷ್ಮೀದೇವಿ. ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಗಂಟಿ ವಿಮಲಾಕ್ಷಿ , ಹಾಗೂ ಸದಸ್ಯರಾದ ಈಡಿಗರ ಸಂತೊಷಕುಮಾರ , ಪ್ರಾಂಶುಪಾಲರಾದ ಎಂ ಶೋಭಾ ಹಾಗೂ ಸಿಬ್ಬಂದಿ ವರ್ಗದವರು , ವಸತಿ ಶಾಲೆಯ ವಿದ್ಯಾರ್ಥಿಗಳು, ಹಿರೇಹೆಗ್ಡಾಳ್ ಗ್ರಾ. ಪಂ. ಅಧ್ಯಕ್ಷರಾದ ಗಂಟೆ ವಿಮಲಾಕ್ಷಿ, ಈಚಲು ಬೊಮ್ಮನಹಳ್ಳಿ ಗ್ರಾ. ಪಂ. ಸದಸ್ಯರಾದ ಈಡಿಗರ ಸಂತೋಷ, ಬೊಮ್ಮಣ್ಣ , ಇಸ್ಮಾಯಿಲ್ ಸಾಬ್ , ಮತ್ತು ಹಿರೇಹೆಗ್ಡಾಳ್ ಬಸವರಾಜ ,ಈ ಬೊಮ್ಮಣ್ಣ , ಟಿ. ಇಸ್ಮಾಯಿಲ್, ಹಾಗೂ ಹಿರೇಹೆಗ್ಡಾಳ್ ಭಾಗದ ಜೆ. ಬಸವರಾಜ ಸಿದ್ದರಾಮೇಶ , ಸಾಸಲವಾಡ, ಸಿ. ಚಲುವಾದಿ ನಾಗರಾಜ, ಉದಯ ಜನ್ನು , ಟಿ.ಜಿ.ಮಲ್ಲಿಕಾರ್ಜುನ ಗೌಡ , ನಿವೃತ್ತ ಇಒ ಬಸಣ್ಣ, ಕಂದಗಲ್ಲು ಪರಶುರಾಮ , ಅಕ್ಷಯ್ ಕುಮಾರ್ ಗುತ್ತಿಗೆದಾರರು. ವಸತಿ ಶಾಲೆಯ ವಿದ್ಯಾರ್ಥಿಗಳ ಪೋಷಕರು , ಪತ್ರಕರ್ತರು, ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ.. ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend