;

ಪ್ರಸಾರ ಭಾರತಿ, ಆಕಾಶವಾಣಿ ಚಿತ್ರದುರ್ಗ ಎಫ್. ಎಂ. ಬೆಂಬಲಿಸಿ ಅಭಿಯಾನದ ಭಾಗವಾಗಿ ಚಿತ್ರದುರ್ಗ ನಗರದಲ್ಲಿಟೆಲಿಸ್ಕೋಪ್ ವೀಕ್ಷಣೆ ಯೊಂದಿಗೆ ಚಂದ್ರಗ್ರಹಣ ವೀಕ್ಷಣೆ…!!!

ಪ್ರಸಾರ ಭಾರತಿ, ಆಕಾಶವಾಣಿ ಚಿತ್ರದುರ್ಗ ಎಫ್. ಎಂ. ಬೆಂಬಲಿಸಿ ಅಭಿಯಾನದ ಭಾಗವಾಗಿ ಚಿತ್ರದುರ್ಗ ನಗರದ ಬಿ.ಎಲ್.ಗೌಡ ಲೇಔಟ್ ನ
ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾತ್ರಿ 9:00 ಗಂಟೆಗೆ ಬಾಹ್ಯಾಕಾಶದ ವಿಸ್ಮಯ
” ರಕ್ತ ಚಂದ್ರ ಗ್ರಹಣ”
“ಈ ಕುರಿತು ನಗರದ ನಾಗರಿಕರಿಗೆ, ಹಾಗೂ ಆಕಾಶವಾಣಿಯ ಗುಣಾತ್ಮಕ
ಕೇಳುಗರಿಗೆ ಖಗೋಳದ ವಿಸ್ಮಯ ಕುರಿತ ಅರಿವು ಮತ್ತು ಮಾಹಿತಿಯ ವಿಸ್ತರಣೆ ನೆಲೆ, ಹಾಗೂ ಮೌಡ್ಯಗಳ ನಿವಾರಣೆ ಹಿನ್ನೆಲೆಯಲ್ಲಿ
ಹವ್ಯಾಸಿ ಖಗೋಳ ತಜ್ಞರೂ, ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿಗಳೂ ಆದ ಶ್ರೀ ಎಚ್.ಎಸ್.ಟಿ ಸ್ವಾಮಿ ಅವರು ಟೆಲಿಸ್ಕೋಪ್ ವೀಕ್ಷಣೆ ಯೊಂದಿಗೆ ಚಂದ್ರಗ್ರಹಣದ ಕುರಿತು
ನಗರದ ನಾಗರಿಕರಿಗೆ , ಇದನ್ನ ಚಂದ್ರಗ್ರಹಣ ಎನ್ನುವುದು ಆಕಾಶದಲ್ಲಿ ನಡೆಯುವ ಒಂದು ನೈಸರ್ಗಿಕ ಪ್ರಕ್ರಿಯೆ ಇದನ್ನ ನೋಡಿ ಕಣ್ತುಂಬಿಕೊಳ್ಳಿ ಯಾರು ಏನು ತೊಂದರೆ ಆಗಲ್ಲ ಭಯ ಬೇಡ ಆತಂಕ ಬೇಡ ಮೂಡನಂಬಿಕೆಗಳನ್ನು ಹೊರಗಿಟ್ಟು ಈ ವಿಸ್ಮಯವನ್ನ ನೋಡಿ ಆನಂದ ಪಡಿ ಎಂದು ಕರೆ ನೀಡಿದರು, ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ವೇತ ಕಾರ್ತಿಕ್, ಟ್ರಸ್ಟ್ ಗಳಾದ ಡಾ. ಮಧುಸೂದನ್,
ಡಾ.ಶ್ವೇತ ಕಾರ್ತಿಕ್ ಆಡಳಿತ ಅಧಿಕಾರಿಗಳಾದ
ಡಾ. ಶ್ವೇತ ಕಾರ್ತಿಕ್,ಆಕಾಶ ವಾಣಿಯ ಡಾ.ನವೀನ್ ಮಸ್ಕಲ್,ಸ್ಫೂರ್ತಿ, ರಂಗಕರ್ಮಿ ಶ್ರೀ ಪ್ರಕಾಶ್ ಬಾದರದಿನ್ನಿ ಯವರನ್ನೂ ಒಳಗೊಂಡು ಸಾರ್ವಜನಿಕರು ಖಗೋಳ ವೀಕ್ಷಣೆಯನ್ನು ಮಾಡಿ ವಿಸ್ಮಯವನ್ನು ಕಣ್ತುಂಬಿಕೊಂಡರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend