ವರದಿಗಾರರು…ಏಳು ಕೋಟಿದೂಪದಹಳ್ಳಿ
ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಸಮಾರಂಭ
ಹಗರಿಬೊಮ್ಮನಹಳ್ಳಿ ಪಟ್ಟಣದ ಗುರು ಭವನದಲ್ಲಿ ನಡೆದ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಮಾಡಲಾಯಿತು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನ್ ಗಣ್ಯರನ್ನು ಸನ್ಮಾನಿಸಲಾಯಿತು
ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ ಜನಪ್ರಿಯ ಶಾಸಕ ನೇಮಿ ರಾಜ್ ನಾಯ್ಕ್ ಅವರು ಮಾತನಾಡಿ ಪತ್ರಕರ್ತರಿಗೆ ಸರಕಾರ ಗೌರವಧನವನ್ನಾದರೂ ಕೊಡಬೇಕು ಮತ್ತು ಪತ್ರಕರ್ತರಿಗೆ ನಿವೇಶನಗಳು ಮತ್ತು ಪತ್ರಕರ್ತ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಂತ ಕೆಲಸ ಆಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು ನಂತರ ಮಾಧ್ಯಮ ಮಿತ್ರರು ಯಾರು ಒತ್ತಡಕ್ಕೆ ಒಳಗಾಗದೆ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಬೇಕು ಮತ್ತು ಸತ್ಯ ವಾದ ವಿಷಯಗಳನ್ನು ಬಿತ್ತರಿಸುವಂತಹ ಕೆಲಸ ಮಾಡಬೇಕೆಂದು ಪತ್ರಕರ್ತರಿಗೆ ಕಿವಿ ಮಾತು ಹೇಳಿದರು
ನಂತರ ಮಾತನಾಡಿದ ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯಧ್ಯಕ್ಷರಾದ ಎಂ ದಯಾನಂದ ಇವರು ಮಾತನಾಡಿ ಪತ್ರಕರ್ತರು ಯಾವುದೆ ಆಮಿಷಕ್ಕೆ ಒಳಗಾಗದೆ ಮತ್ತು ಯಾರ ಒತ್ತಡಕ್ಕೂ ಒಳಗಾಗದೆ ವಸ್ತುನಿಷ್ಠವಾಗಿ ಸುದ್ದಿಯನ್ನು ಮಾಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು ನಂತರ ಮಾತನಾಡಿದ ನಿಂಗಜ್ಜ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಬೆಂಗಳೂರು ಇವರು ಮಾತನಾಡಿ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳು ಪತ್ರಕರ್ತರಿಗೆ ಸಿಗುವಂತಾಗಬೇಕು ಉಚಿತವಾಗಿ ಬಸ್ ಪಾಸ್ ಸಿಗಬೇಕು ಮತ್ತು ಪತ್ರಕರ್ತರ ಮುಂದಿನ ಭವಿಷ್ಯಕ್ಕಾಗಿ ಜೀವ ವಿಮೆ ಅಂತ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು ನಂತರ ಮಾತನಾಡಿದ ಮಂಜಮ್ಮ ಜೋಗತಿಯವರು ಪತ್ರಕರ್ತರು ಯಾರು ಪರವಾಗಿ ಇದ್ದರೂ ಸಹ ಜನರು ಆಡಿಕೊಳ್ಳುವುದನ್ನು ಬಿಡುವುದಿಲ್ಲ ಅದಕ್ಕೆ ತಲೆಕೆಡಿಸಿಕೊಳ್ಳದೆ ನಿಮ್ಮ ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ತಿಳಿಸಿದರು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಲಾಯಿತು ಮತ್ತು ಎಸ್ ಎಸ್ ಎಲ್ ಸಿ ಪಿ ಯು ಸಿ ವಿದ್ಯಾರ್ಥಿಗಳು ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡವರನ್ನು ಗುರುತಿಸಿ ಅವರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸಹ ಸನ್ಮಾನಿಸಲಾಯಿತು ನಿವೃತ್ತಿ ಹೊಂದಿದ ಶಿಕ್ಷಕರಿಗೂ ಸಹ ಈ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು ಮತ್ತು ಸಾರಿಗೆ ಇಲಾಖೆಯಲ್ಲಿ ಯಾವುದೇ ಅಪಘಾತ ಸಂಭವಿಸದೆ ಇರುವಂತ ಚಾಲಕರನ್ನು ಗುರುತಿಸಿ ಅವರಿಗೂ ಸಹ ಸನ್ಮಾನ ಮಾಡಲಾಯಿತು ಹೀಗೆ ಅನೇಕ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು
ಈ ಕಾರ್ಯಕ್ರಮದಲ್ಲಿ ಉಪಸ್ಥಿತ ರಿದ್ದವರು ಶ್ರೀ ಜಗದ್ಗುರು ಸೋಮಶಂಕರ್ ಮಹಾಸ್ವಾಮಿಗಳು ಉತ್ತಂಗಿ ಮತ್ತು ಶಿವಲಿಂಗ ರುದ್ರಮನಿ ಶಿವಾಚಾರ್ಯ ಮಹಾಸ್ವಾಮಿಗಳು ಹಂಪಸಾಗರ ಶ್ರೀ ಅಭಿನವ ಹಾಲಸಿದ್ದೇಶ್ವರ ಮಹಾಸ್ವಾಮಿಗಳು ಹಗರಿಬೊಮ್ಮನಹಳ್ಳಿ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ವಿಜಯನಗರ ಜಿಲ್ಲೆಯ ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು ಹೀಗೆ ಅನೇಕ ಕರ್ನಾಟಕ ಪ್ರೆಸ್ ಕ್ಲಬ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ. ಉಪಸ್ಥಿತರಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
