ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಕೂಡ್ಲಿಗಿ ಪಟ್ಟಣದ 17 ನೇ ವಾಡ್೯ ಭಾಗದ ಗೊಂಬೇರ ರಾಜಪ್ಪ ಹಾಗೂ ಕೆರೆಕಾವಲಿಹಟ್ಟಿ ಗ್ರಾಮದ ಕಾರ್ ಡ್ರೈವರ್ ಎಂ
. ಯರಿಸ್ವಾಮಿ ಅವರು ಕೆಲವು ತಿಂಗಳ ಹಿಂದೆಯೇ ನಿಧನರಾಗಿದ್ದರು. ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಆ ಸಂದರ್ಭದಲ್ಲಿ ದುಃಖದಲ್ಲಿ ಇರುವ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಒದಗಿಸಿಕೊಡುವೆ ಎಂದೂ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಧನಸಹಾಯವನ್ನು ದಿನಾಂಕ; 30-08-2025 ರಂದು ಖುದ್ದಾಗಿ ಅವರ ಕುಟುಂಬಗಳನ್ನು ಭೇಟಿ ಮಾಡಿ ಒದಗಿಸಿಕೊಟ್ಟರು. ಕುಟುಂಬದ ಪತ್ನಿಯರು ಮತ್ತು ಮಕ್ಕಳಿಗೆ ಆತ್ಮ ಸ್ಥೈರ್ಯ ತುಂಬಿದರು.
ಮಾನ್ಯ ಶಾಸಕರು, ಕೂಡ್ಲಿಗಿ ಪಟ್ಟಣ ಮತ್ತು ಕೆ. ಕೆ. ಹಟ್ಟಿಯ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಸುವುದಾಗಿ ತಿಳಿಸಿದರು. ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲಿಶಿವಪ್ಪನಾಯಕ, ಪ. ಪಂ. ಸದಸ್ಯರು, ಕುಟುಂಬದ ಬಂಧುಗಳು, ಊರಿನ ಪ್ರಮುಖ ಮುಖಂಡರಾದ ಹನುಮಂತಪ್ಪ, ಪಂಪಾಪತಿ, ಮಲ್ಲೇಶ, ಭೀಮಪ್ಪ, ಎಸ್. ಸುರೇಶ, ಡಾಣಿ ರಾಘವೇಂದ್ರ, ಶಾಮಿಯಾನ ಚಂದ್ರಣ್ಣ, ಸೂರ್ಯಪ್ರಕಾಶ, ಯಜಮಾನರು, ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ ಎಂ ಬಸವರಾಜ್ ಕಕ್ಕುಪ್ಪಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
