;

ನಮ್ಮ ಕ್ಷೇತ್ರವನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಬಲ ಪಡಿಸುವೆ – ಶಾಸಕ ಡಾ.‌ ಶ್ರೀನಿವಾಸ್. ಎನ್. ಟಿ.‌..!!!

ನಮ್ಮ ಕ್ಷೇತ್ರವನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಬಲ ಪಡಿಸುವೆ – ಶಾಸಕ ಡಾ.‌ ಶ್ರೀನಿವಾಸ್. ಎನ್. ಟಿ.‌

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಕೂಡ್ಲಿಗಿ ಅಂಬೇಡ್ಕರ್ ವೃತ್ತದಿಂದ ಚತುಷ್ಟ ರಸ್ತೆ ( 6 ಕೋಟಿ), ಮೊರಬ ಸ.ಹಿ.‌ಪ್ರಾ. ಶಾಲೆ ಉನ್ನತೀಕರಣ (10.75 ಲಕ್ಷ), ಚೌಡಾಪುರ ಸ. ಪ್ರೌಢ ಶಾಲೆ ಉನ್ನತೀಕರಣ (49.55 ಲಕ್ಷ), ಚೌಡಾಪುರ ಸ. ಹಿ. ಪ್ರಾ ಶಾಲೆ ಉನ್ನತೀಕರಣ ( 9.80 ಲಕ್ಷಗಳು) ಹಾಗೂ ಸಿ. ಸಿ. ರಸ್ತೆ ನಿರ್ಮಾಣ ( 20 ಲಕ್ಷ), ಟಿ. ಬಸಾಪುರ ಚರಂಡಿ ನಿರ್ಮಾಣ( 15 ಲಕ್ಷ), ಐಗಳಾ ಮಲ್ಲಾಪುರ ಸಿ.‌ಸಿ. ರಸ್ತೆ ನಿರ್ಮಾಣ( 10 ಲಕ್ಷ), ಅಮಲಾಪುರ ಸಿ. ಸಿ.‌ ರಸ್ತೆ ನಿರ್ಮಾಣ( 10 ಲಕ್ಷ), ಬಣವಿಕಲ್ಲು ಪ್ರಾಥಮಿಕ ಆರೋಗ್ಯ ಉಪಕೇಂದ್ರ ಉನ್ನತೀಕರಣ( 14 ಲಕ್ಷ) ಹಾಗೂ ಜನತಾ ಕಾಲೋನಿಯಲ್ಲಿ ಸಿ. ಸಿ. ರಸ್ತೆ ನಿರ್ಮಾಣ( 14 ಲಕ್ಷ)ಗಳ ಭೂಮಿಪೂಜೆಯನ್ನು ದಿ; 09-08-2025 ರಂದು ನೆರವೇರಿಸಿದರು. ಮಾನ್ಯ ಶಾಸಕರು ಮಾತನಾಡುತ್ತಾ,
ಡಿ. ಎಂ.‌ ಎಫ್ ಅನುದಾನ ಅಡಿಯಲ್ಲಿ ಹಳ್ಳಿಗಳನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು. ಮಾನ್ಯ ಶಾಸಕರು ಭೂಮಿಪೂಜೆ ನಂತರ ಪ್ರತಿ ಹಳ್ಳಿಗಳ ಕುಂದುಕೊರತೆ ಆಲಿಸಿ, ಮನವಿ ಸ್ವೀಕರಿಸಿದರು. ‌ಚೌಡಾಪುರದ ಪ್ರತಿ ಓಣಿ -ಕೇರಿ ಸುತ್ತಿ ಸಮಸ್ಯೆಗಳನ್ನು ಪರಿಶೀಲಿಸಿದರು.‌ ಮಾನ್ಯ ತಹಶೀಲ್ದಾರರಾದ ಶ್ರೀ ನೇತ್ರಾವತಿ,
ಶ್ರೀ ಕೆ.‌ನಾಗನಗೌಡ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್, ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಪ. ಪಂ. ಉಪಾಧ್ಯಕ್ಷರಾದ ಲೀಲಾವತಿ ಪ್ರಭಾಕರ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಶೂಕರ್ ಬಾಯಿ, ಸರ್ವ ಸದಸ್ಯರು, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಂ.‌ಗುರುಸಿದ್ದನಗೌಡ, ಮಾಜಿ ತಾ. ಪಂ.‌ಸದಸ್ಯರಾದ ಶಿವಪುರ ರಾಜಣ್ಣ, ಚೌಡಾಪುರ ಗ್ರಾ. ಪಂ. ಅಧ್ಯಕ್ಷರಾದ ನವೀನ, ಬಣವಿಕಲ್ಲು ಗ್ರಾ. ಪಂ.‌ ಅಧ್ಯಕ್ಷರಾದ ಭಾಗ್ಯಮ್ಮ ಲೋಕರಾಜ, ಉಪಾಧ್ಯಕ್ಷರು, ಸರ್ವ ಸದಸ್ಯರು, ಮುಖಂಡರಾದ ಗುಂಡುಮುಣುಗು ತಿಪ್ಪೇಸ್ವಾಮಿ, ಜಯರಾಮ, ಉದಯಜನ್ನು, ಕಡ್ಡಿ ಮಂಜಣ್ಣ, ಹಿರೇಕುಂಬಳಕುಂಟೆ ಉಮೇಶ, ವಕೀಲರಾದ ಹೊನ್ನೂರಪ್ಪ, ಸಿಡೇಗಲ್ಲು ಬಸವರಾಜ, ದುರ್ಗೇಶ, ಬಣಕಾರ ವೀರಭದ್ರಪ್ಪ, ರವಿ, ಬೋರಣ್ಣ, ಮಾರೇಶ, ಮಲ್ಲಿಕಾರ್ಜುನ, ಡಾ. ಮಂಜುನಾಥ, ಯರಿಸ್ವಾಮಿ, ಶಾಂತನಗೌಡ, ಗ್ರಾಮಸ್ಥರು, ಸಾರ್ವಜನಿಕರು ಇದ್ದರು..

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;