ರೊಚ್ಚಿಗೆದ್ದು ಶಾಲಾ ಮಕ್ಕಳು ರಸ್ತೆಗೆ ಇಳಿದು ಪ್ರತಿಭಟನೆ..
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಜಂಬುನಾಥ ದೇವಸ್ಥಾನಕ್ಕೆ ಹೋಗುವ ರಸ್ತೆ ಯಲ್ಲಿ ಸುಮಾರು 4 ಶಾಲೆಗಳು.ಬರುತಾವೇ 1ಆದರ್ಶ ಶಾಲೆ, 2ಮುರಾರ್ಜಿ ದೇಸಾಯಿ ಶಾಲೆ,3ಅಬ್ದುಲ್ ಕಲಾಂ ಶಾಲೆ, 4ಸರಕಾರಿ ಕೈಗಾರಿಕಾ ತರಬೇತಿ ಶಾಲೆಗಳಿದ್ದು ರಾಷ್ಟ್ರೀಯ ಹೆದ್ದಾರಿ ದಾಟುವ ಸಂದರ್ಭದಲ್ಲಿ ಅತಿ ವೇಗದಲ್ಲಿ ವಾಹನಗಳು ಚಲಿಸುತ್ತವೆ ಶಾಲೆಗೆ ಹೋಗುವಾಗ ರಸ್ತೆ ದಾಟುವ ಪ್ರಸಂಗದಲ್ಲಿ ಮಕ್ಕಳು ಭಯಭೀತರಾಗಿ ರಸ್ತೆಯನ್ನು ದಾಟಿ ಸಾಗ ಬೇಕಾಗುತ್ತದೆ.ಈ ಒಂದು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಉಬ್ಬರಗಳನ್ನು ಹಾಗೂ ರಾಷ್ಟ್ರೀಯ ಹೆದ್ದಾರಿಯ ವಾಹನಗಳ ವೇಗವನ್ನು ನಿಯಂತ್ರಿಸಲು ಬ್ಯಾರಿಕೆಟ್ ಅಳವಡಿಸಬೇಕೆಂದು ಈ ಹಿಂದೆ ಕ್ಷೇತ್ರದ MLA ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರಕ್ಕೆ ಈ ಶಾಲೆಯ ಮಕ್ಕಳ ಪೋಷಕರು ಹಲವಾರು ಬಾರಿ ಮೌಖಿಕವಾಗಿ ಲಿಖಿತ ರೂಪದಲ್ಲಿ ದೂರು ಕೊಟ್ಟಿರುತ್ತಾರೆ.

ಅಧಿಕಾರಿಗಳ ನಿರ್ಲಕ್ಷ ಧೋರಣೆಯನ್ನು ಬೇಸತ್ತು ಇಂದು ಸ್ವತಹ ವಿದ್ಯಾರ್ಥಿಗಳೇ ರಸ್ತೆಯನ್ನು ತಡೆಯುಂಟು ಮಾಡಿದ್ದರು.ಈ ಒಂದು ವಿದ್ಯಾರ್ಥಿಗಳ ರಸ್ತೆ ತಡೆಯನ್ನು ಕಂಡು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ಆದರ್ಶ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ರೈತ ಸಂಘದ ಮುಖಂಡರು ಸ್ಥಳಕ್ಕೆ ಧಾವಿಸಿದರು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ತಂಡವು ಧಾವಿಸಿತು ಅಲ್ಲಿ ನೆರೆದಿದ್ದ ಮಕ್ಕಳನ್ನು ಸಂತೈಸಿ ಭರವಸೆಯನ್ನು ನೀಡಿ ಶಾಲೆಗೆ ಹಾಜರಾಗಲು ಕಳಿಸಿದರು ನಂತರ ಸಂಘಟನೆಯ ಮುಖಂಡರುಗಳೊಂದಿಗೆ ಪೊಲೀಸರು ಚರ್ಚಿಸಿದರು ರಸ್ತೆಗಳಿಗೆ ಬ್ಯಾರಿಕೆಟ್ ಮುಖಾಂತರ ವೇಗವನ್ನು ನಿಯಂತ್ರಿಸುತ್ತೇವೆ ಎಂದು ಅಧಿಕಾರಿಗಳು ಸ್ಪಷ್ಟನೆ ಕೊಟ್ಟರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
