;

ಶ್ರೀ ಪಾರ್ಶ್ಶ್ವನಾಥರ ನಿರ್ವಾಣ ಮೋಕ್ಷ ಕಲ್ಯಾಣ…!!!

ಶ್ರೀ ಪಾರ್ಶ್ಶ್ವನಾಥರ ನಿರ್ವಾಣ ಮೋಕ್ಷ ಕಲ್ಯಾಣ

ವರದಿ:ರಾಜಪ್ಪ.ಎಂ.ಹೂವಿನಹಡಗಲಿ:

ಶ್ರೀ ಪಾರ್ಶ್ಶ್ವನಾಥ ಸ್ವಾಮಿ ದಿಗಂಬರ ಜೈನ ಚಾರಿಟೇಬಲ್ ಟ್ರಸ್ಟ್ ಆಯೋಜಿಸಲಾದ ಭ ಶ್ರೀ ೧೦೦೮ ಪಾರ್ಶ್ಶ್ವನಾಥ ಸ್ವಾಮಿ ನಿರ್ವಾಣ ಮೋಕ್ಷ ಕಲ್ಯಾಣ ಕಾರ್ಯಕ್ರಮ ವಿಜೃಂಭಣೆ ಜೊತೆಗೆ ಶ್ರದ್ದಾ ಭಕ್ತಿಯಿಂದ ನೆರವೇರಿತು.

ಬೆಳೆಗ್ಗೆ ಶ್ರೀ ಪಾರ್ಶ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಬೃಹತ್ ಕಲಿಕುಂಡ ಆರಾಧನೆ, ಜಿನೇಶ್ವರರಿಗೆ ನಿರ್ವಾಣ ಲಡ್ಡು ಸಮರ್ಪಿಸಿದರು .
ಶ್ರೀ ಪಾರ್ಶ್ಶ್ವನಾಥ ಸ್ವಾಮಿ
ಜಿನ ಬಿಂಬವನ್ನು ಪಾಲಿಕೆಯಲ್ಲಿ ಕೂರಿಸಿ ಜಿನಬಸದಿ ಸುತ್ತ ಶ್ರೀ ಪಾರ್ಶ್ಶ್ವನಾಥ ಸ್ವಾಮಿಗೆ ಜಯ ಜಯಕಾರ ಘೋಷಣೆ ಕೂಗುತ್ತ ಪ್ರದಕ್ಷಿಣೆ ಹಾಕಲಾಯಿತು.
ಈ ಸಂದರ್ಭದಲ್ಲಿ ಹೂವಿನಹಡಗಲಿ ಶ್ರೀ ಪಾರ್ಶ್ಶ್ವನಾಥ ಸ್ವಾಮಿ ಟ್ರಸ್ಟ್ ಅಧ್ಯಕ್ಷ ರಾದ ಪ್ರಶಾಂತ್ ಎಚ್ ಎಸ್ ಉಪಾಧ್ಯಕ್ಷರಾದ ವಿಜಯಕುಮಾರ್ ಜೈನ, ಪದ್ಮರಾಜ್ ಜೈನ, ಅಮಿತ್ ಎಚ್ ಜೆ, ನಾಗರಾಜ ಡಿ, ಪಾರ್ಶ್ಶ್ವನಾಥ ಆರ್
ಉಪಸ್ಥಿತರಿದ್ದರು.

ಜ್ವಾಲಮಾಲಿನಿ ಮಹಿಳಾ ಸಂಘದ ಉಪಾಧ್ಯಕ್ಷೆ ಜಯಶ್ರೀ ಮಂಜುನಾಥ ಜೈನ, ಖಜಾಂಚಿ ಮೇಘಾ ಬಿ ಜೈನರ್, ಕಾರ್ಯದರ್ಶಿ ಚಂಪಾ ರಾಯಪ್ಪ ಹೊಳಲ್, ಸೀಮಾ ಪಿ ಹೊಳಲ್, ವೈಶಾಲಿ, ಪುಷ್ಪ ಪಿ ರೇವಡಿ, ಹಿರಿಯ ಶ್ರವಿಕಿಯರಾದ ಶೀಲಾ ಎಚ್ ಜೆ,ಶೈಲಜಾ ಎಸ್ ಎಚ್,ಸುಚೇತಾ ಬಿ ಜೈನ್ ಅನೇಕ ಶ್ರಾವಕ ಶ್ರಾವಿಕಿಯರು ಈ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಶ್ರೀ ಪಾರ್ಶ್ಶ್ವನಾಥ ಸ್ವಾಮಿ ನಿರ್ವಾಣ ಮೋಕ್ಷ ಕಲ್ಯಾಣ ಮತ್ತು ಕಲಿಕುಂಡ ಪೂಜಾ ಆರಾಧನೆಯನ್ನು ಪಂಡಿತತೊತ್ತೊಮರಾದ ಶ್ರೀ ಶೀತಲ್ ಹಾಗೂ ಅವರ ತಂಡ ಯಶಸ್ವಿಯಾಗಿ ನೆಡಿಸಿಕೊಟ್ಟರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;