ತಡಕಲ್ ಗ್ರಾಮದ ಆಶ್ರಯ ಮನೆಗಳಿಗೆ ದಾರಿ ಕಲ್ಪಿಸಲು ಸಿಪಿಐಎಮ್ಎಲ್ ಒತ್ತಾಯ
ಮಾನ್ವಿ : ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ಸಿ.ಪಿ.ಐ.(ಎಂ.ಲ್) ಮಾನ್ವಿ ತಾಲೂಕು ಘಟಕ ವತಿಯಿಂದ ತಹಶೀಲ್ದಾರ ಭೀಮರಾಯ ರಾಮಸಮುದ್ರ ಹಾಗೂ ಪಿ.ಐ. ಸೋಮಶೇಖರ ಎಸ್. ಕೆಂಚರೆಡ್ಡಿ ರವರಿಗೆ ಮನವಿ ಸಲ್ಲಿಸಿ ಸಿಪಿಐ ಎಂ ಎಲ್ ತಾಲೂಕಾ ಕಾರ್ಯದರ್ಶಿ ಯಲ್ಲಪ್ಪ ಉಟಕನೂರು ಮಾತನಾಡಿ ಮಾನ್ವಿ ತಾಲೂಕಿನ ತಡಕಲ್ ಗ್ರಾಮದ ಸ.ನಂ:8 ರಲ್ಲಿ ಸರ್ಕಾರದ ವತಿಯಿಂದ ಗ್ರಾಮದ ವಸತಿ ರಹಿತ 30 ಕುಟುಂಬಗಳಿಗೆ ಕಳೆದ 22 ವರ್ಷಗಳ ಕೆಳಗೆ ನೀಡಲಾಗಿದ್ದು ಅಲ್ಲಿ 30 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದಾರೆ ಅಶ್ರಯ ಮನೆಗಳಿಗೆ ರಸ್ತೆ
ಸಂಪರ್ಕ ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ತಿರುಗಾಡುವುದಕ್ಕೆ ತೊಂದರೆಯಾಗುತ್ತಿದೆ ರೈತರು ಜಮೀನುಗಳಲ್ಲಿ ಜನರು ತಿರುಗಾಡುವುದಕ್ಕೆ ಬಿಡುತ್ತಿಲ್ಲ. ಆದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿರುವುದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಜನರ ಸಂಚಾರಕ್ಕೆ ರಸ್ತೆ ನಿರ್ಮಿಸಿ ಕೊಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂಎಲ್ ಸದಸ್ಯರಾದ ಪ್ರಕಾಶ್, ಮಲ್ಲಯ್ಯ
ನಾಯಕ, ಮಹಾಂತೇಶ್ ನಾಯಕ, ರಾಮಕೃಷ್ಣ, ಬಸ್ಸಪ್ಪ ಚಲುವಾದಿ, ಸಣ್ಣ ಹುಲಿಗೆಪ್ಪ, ಹನುಮಂತ ಕೊಟ್ನೆಕಲ್, ರಮೇಶ್ ನಾಯಕ , ನಾಗರಾಜ ನಾಯಕ, ಯಂಕಪ್ಪ ನಾಯಕ, ಮಲ್ಲಯ್ಯ ತಡಕಲ್, ಯಂಕೋಬ ನಾಯಕ, ಗುರಪ್ಪ, ಹನುಮಂತ ಯಾದವ, ಶಿವರಾಜ ಯಾದವ ಸೇರಿದಂತೆ ಇನ್ನಿತರರು ಇದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
