ವಿಜಯನಗರ ಜಿಲ್ಲೆಯಲ್ಲಿ ಇಂದು ಜೀ ಟಿವಿ ಬಳಗದಿಂದ ಡ್ರಾಮಾ ಜೂನಿಯರ್ ಸರಿಗಮಪದ ಆಡಿಷನ್ ಹೇಳಿ ಕೇಳಿ ಜೀ ಟಿವಿ ಅಂದರೆ ಒಂದು ಹೆಮ್ಮೆಯ ಸಂಗತಿ ಅದು ರಿಯಾಲಿಟಿ ಶೋ ಗಳನ್ನು ಹುಟ್ಟಿಹಾಕಿ ನಾಡಿನ ಮೂಲೆ ಮೂಲೆಯಲ್ಲಿದ್ದ ಪ್ರತಿಭೆಗಳನ್ನು ಗುರುತಿಸಿ ರಾಜ್ಯದ ಉದ್ದಗಲಕ್ಕೂ ಪ್ರತಿಭೆಯನ್ನು ತೋರಿಸುವುದರಲ್ಲಿ ಎರಡು ಮಾತಿಲ್ಲ ಇದರಂತೆ ವಿಜಯನಗರದಲ್ಲಿ ಈ ಒಂದು ವಾಹಿನಿ ಬೆಳಗ್ಗೆಯಿಂದ ಸಂಜೆ 6:00 ವರೆಗೆ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ಅನೇಕ ಹಳ್ಳಿಗಳು, ತಾಲೂಕು ಹಾಗೂ ಜಿಲ್ಲೆಗಳಿಂದ ಸುಮಾರು 700ಕ್ಕೂ ಅಧಿಕ ಅಭ್ಯರ್ಥಿಗಳು ಬಂದಿದ್ದರೆಂದು ಮಾಹಿತಿ ತಿಳಿದು ಬಂದಿದೆ ಈ ಒಂದು ಕಾರ್ಯಕ್ರಮದಿಂದ ಉತ್ತರ ಕರ್ನಾಟಕದ ಎಲೆ ಮರೆಯಲ್ಲಿ ಅಡಗಿದ ಕಲಾ ಪ್ರತಿಭೆಗಳು ಹೊರ ಹೊಮ್ಮುವ ಸನ್ನಿವೇಶ ಕಂಡುಬಂದಿತು ಅಲ್ಲಿ ನೆರೆದಿದ್ದ ಜನತೆಯಲ್ಲಿ ಸಾಧನೆ ಮತ್ತು ಸಾರ್ಥಕತೆಯ ಮನೋಭಾವವನ್ನು ಗೋಚರಿಸುತ್ತಿತ್ತು ಇಂಥ ಅವಕಾಶಗಳು ಮತ್ತೆ ಮತ್ತೆ ನಮ್ಮ ವಿಜಯನಗರಕ್ಕೆ ಬರಲೆಂದು ಹೊಸ ಪ್ರತಿಭೆಗಳನ್ನು ಗುರುತಿಸಲೆಂದು ಜನರು ಅಭಿಪ್ರಾಯ ಪಟ್ಟರು….

ವರದಿ. ಗಣೇಶ್, ಬಿ, ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
